ರಿಷಬ್, ಜ್ಯೂನಿಯರ್‌ ಎನ್‌ಟಿಆರ್‌ ಮತ್ತು ಪ್ರಶಾಂತ್ ನೀಲ್ 
ಸಿನಿಮಾ ಸುದ್ದಿ

ಪ್ರಶಾಂತ್‌ ನೀಲ್‌ ಮನೆಯಲ್ಲಿ ರಿಷಬ್‌ ಶೆಟ್ಟಿ ಮತ್ತು ಜ್ಯೂನಿಯರ್‌ ಎನ್ ಟಿಆರ್‌: ಫೋಟೋ ವೈರಲ್

ಕೆಜಿಎಫ್ ಸಿನಮಾ ಖ್ಯಾತಿಯ ಪ್ರಶಾಂತ್‌ ನೀಲ್‌, ‘ಕಾಂತಾರ’ ಮೂಲಕ ಖ್ಯಾತಿ ಪಡೆದ ರಿಷಬ್‌ ಶೆಟ್ಟಿ, ಹಲವು ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ ಜ್ಯೂನಿಯರ್‌ ಎನ್‌ಟಿಆರ್‌ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ ಸಿನಮಾ ಖ್ಯಾತಿಯ ಪ್ರಶಾಂತ್‌ ನೀಲ್‌, ‘ಕಾಂತಾರ’ ಮೂಲಕ ಖ್ಯಾತಿ ಪಡೆದ ರಿಷಬ್‌ ಶೆಟ್ಟಿ, ಹಲವು ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ ಜ್ಯೂನಿಯರ್‌ ಎನ್‌ಟಿಆರ್‌ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾರ್ಚ್​ 1ರಂದು ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜ್ಯೂನಿಯರ್‌ ಎನ್​ಟಿಆರ್ ಆಗಮಿಸಿದ್ದರು. ಎನ್​ಟಿಆರ್ ಜತೆ ಅವರ ಪತ್ನಿ, ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಈಗಾಗಲೇ ಪ್ರಶಾಂತ್‌ ನೀಲ್‌ ಅವರು ಜ್ಯೂನಿಯರ್‌ ಎನ್‌ಟಿಆರ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಕಾಂತಾರ’ ಹಾಗೂ ‘ಕೆಜಿಎಫ್’ ಸರಣಿಯನ್ನು ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲ್ಮ್ಸ್. ಹೀಗಾಗಿ, ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ.

‘ದೇವರ' ಸಿನಿಮಾ ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಕರು. `ದೇವರ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಹೊಸ ಅಪ್ ಡೇಟ್ ನೀಡಿದ್ದಾರೆ. ಈ ಚಿತ್ರವು 2024ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5 ರಂದು ಸಿನಿಮಾ ರಿಲೀಸ್‌ ಡೇಟ್‌ವನ್ನು ಘೋಷಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು, Video

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

ದೇಶಾದ್ಯಂತ ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರು ಡಿಲೀಟ್! ಅವರ ಮಕ್ಕಳ ಗತಿಯೇನು? CEC ವಿರುದ್ಧ ದೂರು ದಾಖಲಿಸಿದ TMC ಸಂಸದೆ