ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್  
ಸಿನಿಮಾ ಸುದ್ದಿ

ಶಿವರಾತ್ರಿ ದಿನ ಗುಡ್ ನ್ಯೂಸ್ ಕೊಟ್ಟ 'ಲವ್ ಮಾಕ್ಟೇಲ್' ಜೋಡಿ

‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿ ಸೆಪ್ಟೆಂಬರ್ 2024 ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ಜೋಡಿ ತಮ್ಮ ಜೀವನದ ಸಿಹಿಸುದ್ದಿಯನ್ನು ಶಿವರಾತ್ರಿ ಹಬ್ಬದ ದಿನ ಅಭಿಮಾನಿಗಳಿಗೆ ಬಹಿರಂಗಪಡಿಸಿದ್ದಾರೆ. ನಟಿ ಮಿಲನಾ ನಾಗರಾಜ್ ಹಾಗೂ ನಟ ‘ಡಾರ್ಲಿಂಗ್’ ಕೃಷ್ಣ 2024ರ ಸೆಪ್ಟೆಂಬರ್ ನಲ್ಲಿ ತಮ್ಮ ಜೀವನದಲ್ಲಿ ಪುಟ್ಟ ಕಂದನ ಆಗಮನವಾಗಲಿದೆ ಎಂದು ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ.ಮಗುವಿನ ಶರ್ಟ್​ ಫೋಟೋನ ಹಂಚಿಕೊಂಡು ‘KrissMi’ ಎಂದು ಬರೆದು ಹಾರ್ಟ್ ಮಾರ್ಕ್ ಹಾಕಿ ಸೆಪ್ಟೆಂಬರ್ 2024 ಎಂದು ಬರೆದಿದ್ದಾರೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 2021ರ ಫೆಬ್ರವರಿ 14ರಂದು ಮದುವೆ ಆದರು. ಈಗ ಮೂರು ವರ್ಷಗಳ ಬಳಿಕ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ. ಮಿಲನಾ ನಾಗರಾಜ್ ಹಾಗೂ ಕೃಷ್ಣ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಕೆಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದು ಇವರೇ ನಿರ್ದೇಶಿಸಿ, ನಿರ್ಮಾಣ ಮಾಡಿ ನಟಿಸಿದ್ದ ಲವ್ ಮಾಕ್ಟೇಲ್ ಜನಪ್ರಿಯ ಚಿತ್ರವಾಗಿದೆ.

ಇತ್ತೀಚೆಗೆ ಬಾಲಿವುಡ್ ನ ಖ್ಯಾತ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ತಮ್ಮ ಬಾಳಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಗುವಿನ ಆಗಮನವಾಗಲಿದೆ ಎಂದು ಖುಷಿಸುದ್ದಿಯನ್ನು ಹಂಚಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

SCROLL FOR NEXT