ಟು ಕಿಲ್ ಎ ಟೈಗರ್ ಸಿನಿಮಾ (ಸಂಗ್ರಹ ಚಿತ್ರ) PTI
ಸಿನಿಮಾ ಸುದ್ದಿ

ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದ 'ಟು ಕಿಲ್ ಎ ಟೈಗರ್' ಹಿಂದಿಕ್ಕಿ ಆಸ್ಕರ್ ಗೆದ್ದ '20 ಡೇಸ್ ಇನ್ ಮಾರಿಯುಪೋಲ್‌'!

ಕೆನಡಾದ ಸಿನಿಮಾ ಟು ಕಿಲ್ ಎ ಟೈಗರ್ ನ್ನು ಹಿಂದಿಕ್ಕಿ 20 ಡೇಸ್ ಇನ್ ಮಾರಿಯುಪೋಲ್‌ ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದೆ.

ನವದೆಹಲಿ: 96 ನೇ ಅಕಾಡೆಮಿ ಅವಾರ್ಡ್ಸ್ ಪ್ರಕಟವಾಗಿದ್ದು, ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಭಾರತದ ಜಾರ್ಖಂಡ್ ಕುಟುಂಬವೊಂದರ ಕಥೆಯನ್ನು ಹೊಂದಿದ್ದ ಕೆನಡಾದ ಸಿನಿಮಾ ಟು ಕಿಲ್ ಎ ಟೈಗರ್ ನ್ನು ಹಿಂದಿಕ್ಕಿ 20 ಡೇಸ್ ಇನ್ ಮಾರಿಯುಪೋಲ್‌ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

20 ಡೇಸ್ ಇನ್ ಮಾರಿಯುಪೋಲ್‌ ಸಾಕ್ಷ್ಯ ಚಿತ್ರ ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಮಾರಿಯುಪೋಲ್‌ ನಲ್ಲಿ ಸಿಲುಕಿದ್ದ ಯುಕ್ರೇನ್ ಪತ್ರಕರ್ತರ ಕಥೆಯನ್ನು ಹೇಳುವ ಸಾಕ್ಷ್ಯ ಚಿತ್ರ ಆಗಿದೆ. "ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್", "ದಿ ಎಟರ್ನಲ್ ಮೆಮೊರಿ" ಮತ್ತು "ಫೋರ್ ಡಾಟರ್ಸ್" ಅತ್ಯುತ್ತಮ ಸಾಕ್ಷ್ಯಚಿತ್ರ ವೈಶಿಷ್ಟ್ಯ ವಿಭಾಗದಲ್ಲಿ ಆಸ್ಕರ್ ಗೆ ನಾಮನಿರ್ದೇಶನಗೊಂಡ ಇತರ ಚಿತ್ರಗಳಾಗಿದೆ.

ಕೆನಡಾದ ನಿರ್ಮಾಣವಾಗಿರುವ, "ಟು ಕಿಲ್ ಎ ಟೈಗರ್" ನ್ನು ದೆಹಲಿ ಮೂಲದ ನಿಶಾ ಪಹುಜಾ ನಿರ್ದೇಶಿಸಿದ್ದು ಇವರು ಟೊರೊಂಟೊ ಮೂಲದ ಎಮ್ಮಿ-ನಾಮನಿರ್ದೇಶಿತ ಚಲನಚಿತ್ರ ನಿರ್ದೇಶಕಿಯಾಗಿದ್ದಾರೆ.

"ಟು ಕಿಲ್ ಎ ಟೈಗರ್" ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2022 ನಲ್ಲಿ ಪ್ರಥಮ ವಿಶ್ವ ಪ್ರದರ್ಶನವನ್ನು ಕಂಡಿತ್ತು. ಅಲ್ಲಿ ಇದು ಅತ್ಯುತ್ತಮ ಕೆನಡಾದ ಚಲನಚಿತ್ರಕ್ಕಾಗಿ ಆಂಪ್ಲಿಫೈ ವಾಯ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮೂವರಿಂದ ಅಪಹರಣಕ್ಕೊಳಗಾದ, ಲೈಂಗಿಕ ದೌರ್ಜನ್ಯಕ್ಕೊಳಗಾದ ತನ್ನ 13 ವರ್ಷದ ಮಗಳಿಗೆ ನ್ಯಾಯವನ್ನು ಕೊಡಿಸಲು ರಂಜಿತ್ ನಡೆಸಿದ ಹೋರಾಟವನ್ನು ಚಲನಚಿತ್ರ ಹೇಳುತ್ತದೆ.

ಕೆನಡಾದ ನ್ಯಾಷನಲ್ ಫಿಲ್ಮ್ ಬೋರ್ಡ್ (NFB) ನೊಂದಿಗೆ ಸಹ-ನಿರ್ಮಾಣದಲ್ಲಿ ಈ ಚಲನಚಿತ್ರವು ನೋಟಿಸ್ ಪಿಕ್ಚರ್ಸ್ Inc ನ ನಿರ್ಮಾಣವಾಗಿದೆ. "ಟು ಕಿಲ್ ಎ ಟೈಗರ್" ನ್ನು ನಟರಾದ ದೇವ್ ಪಟೇಲ್, ಮಿಂಡಿ ಕಾಲಿಂಗ್, ಪ್ರಿಯಾಂಕಾ ಚೋಪ್ರಾ ಜೋನಾಸ್, ಕೆನಡಾದ ಕವಯಿತ್ರಿ ರೂಪಿ ಕೌರ್ ಮತ್ತು ಲೇಖಕ ಅತುಲ್ ಗವಾಂಡೆ ನಿರ್ಮಿಸಿದ್ದಾರೆ. ಇದು ಆಸ್ಕರ್ ದಿನದ ಮೊದಲು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ಕಳೆದ ವರ್ಷ, ಭಾರತ ಅಕಾಡೆಮಿ ಪ್ರಶಸ್ತಿಗಳಲ್ಲಿ "ನಾಟು ನಾಟು" ಹಾಡಿಗೆ ಚಿನ್ನದ ಪದಕ ಗೆದ್ದಿತ್ತು. "RRR" ಚಿತ್ರದ ಅಡಿ-ಟ್ಯಾಪಿಂಗ್ ಸಂಖ್ಯೆ, ಅತ್ಯುತ್ತಮ ಮೂಲ ಗೀತೆಗೆ ಆಸ್ಕರ್ ಪ್ರಶಸ್ತಿ ಮತ್ತು "ದಿ ಎಲಿಫೆಂಟ್ ವಿಸ್ಪರರ್ಸ್" ಸಾಕ್ಷ್ಯಚಿತ್ರ ಕಿರು ವಿಭಾಗದಲ್ಲಿ ಆಸ್ಕರ್ ಗಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT