ಸಿಂಪಲ್ ಸುನಿ - ಬ್ಲಿಂಕ್ ಸ್ಟಿಲ್ 
ಸಿನಿಮಾ ಸುದ್ದಿ

'ಒಂದು ಸರಳ ಪ್ರೇಮಕಥೆ' ನೋಡದಿದ್ದರೂ ಪರವಾಗಿಲ್ಲ 'ಬ್ಲಿಂಕ್' ಸಿನಿಮಾ ನೋಡಿ ಎಂದ ನಿರ್ದೇಶಕ ಸಿಂಪಲ್ ಸುನಿ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸಬರ ಸಿನಿಮಾಗಳು ಭಾರಿ ಸದ್ದು ಮಾಡುತ್ತಿವೆ. ವರ್ಷಕ್ಕೆ ಹತ್ತಾರು ಸಿನಿಮಾಗಳು ತೆರೆಕಂಡು ಕೆಲವು ಸಿನಿಮಾಗಳು ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಈ ಸಾಲಿಗೆ ಸೇರುತ್ತಿದೆ ನಿರ್ದೇಶಕ ಶ್ರೀನಿಧಿ ನಿರ್ದೇಶನದ ಬ್ಲಿಂಕ್ ಸಿನಿಮಾ. ಬ್ಲಿಂಕ್ ಸಿನಿಮಾ ಕಂಟೆಂಟ್ ಆಧರಿತ ಚಿತ್ರವಾಗಿದ್ದು, ಚಿತ್ರವನ್ನು ನೋಡುವಂತೆ ಪ್ರಖ್ಯಾತ ನಿರ್ದೇಶಕರೊಬ್ಬರು ಕರೆ ನೀಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸಬರ ಸಿನಿಮಾಗಳು ಭಾರಿ ಸದ್ದು ಮಾಡುತ್ತಿವೆ. ವರ್ಷಕ್ಕೆ ಹತ್ತಾರು ಸಿನಿಮಾಗಳು ತೆರೆಕಂಡು ಕೆಲವು ಸಿನಿಮಾಗಳು ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಈ ಸಾಲಿಗೆ ಸೇರುತ್ತಿದೆ ನಿರ್ದೇಶಕ ಶ್ರೀನಿಧಿ ನಿರ್ದೇಶನದ ಬ್ಲಿಂಕ್ ಸಿನಿಮಾ. ಬ್ಲಿಂಕ್ ಸಿನಿಮಾ ಕಂಟೆಂಟ್ ಆಧರಿತ ಚಿತ್ರವಾಗಿದ್ದು, ಚಿತ್ರವನ್ನು ನೋಡುವಂತೆ ಪ್ರಖ್ಯಾತ ನಿರ್ದೇಶಕರೊಬ್ಬರು ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಒಂದು ಸರಳ ಪ್ರೇಮ ಕಥೆ ಚಿತ್ರದ ನಿರ್ದೇಶಕ ಸಿಂಪಲ್ ಸುನಿ, 'ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಎನ್ನುವ ವಾಕ್ಯ ಹಳೆಯದಾಯಿತು. ಈ ರೀತಿಯ ಚಿತ್ರಗಳು ಬಂದಾಗ ಸಿನಿ ಪ್ರೇಮಿಗಳು ಶೋ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ಚಿತ್ರ ನೋಡಬೇಕು. ಇಡೀ ತಂಡದ ಶ್ರಮಕ್ಕೆ ನನ್ನ ನಮನಗಳು' ಎಂದಿದ್ದಾರೆ.

ಮುಂದುವರಿದು, ಚಿತ್ರದ ತಂತ್ರಜ್ಞರ ಹಾಡು- ಪಾಡು, ಸಂಕಲನಕಾರ ಮಾಡಿರುವ ಶಾಟ್ಸ್‌ಗಳ ವ್ಯವಕಲನ, ರಚನೆ- ನಿರ್ದೇಶನ, ಚಿತ್ರ ಮುಗಿದರು ಮನಸಲ್ಲೇ ಮನನ. ಎಳೆ ವಯಸ್ಸಲ್ಲೇ ತಂಡ ಕಟ್ಟಿ ಸಿನಿಮಾ ತೇರು ಎಳೆದ ನಿರ್ಮಾಣ. ಎಲ್ಲ ನಟನಟಿಯರ ಹಾವ-ಭಾವ ಸೇರಿ ಪ್ರತಿಯೊಂದು ಅಂಶಗಳು ಪ್ರಶಂಸನೀಯ. ಈ ಚಿತ್ರವೇನಾದ್ರು ಬಾಕ್ಸ್ ಆಫೀಸ್‌ನಲ್ಲಿ ಸೋತರೆ content is the king ಎನ್ನುವ ವಾಕ್ಯ ಸುಳ್ಳಾಗುತ್ತದೆ ಎಂದು ಸುನಿ ಹೇಳಿದ್ದಾರೆ.

ಸದ್ಯ ಒಂದು ಸರಳ ಪ್ರೇಮಕತೆ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ಸಿಂಪಲ್ ಸುನಿ ಬ್ಲಿಂಕ್ ಸಿನಿಮಾ ನೋಡಿದ್ದು ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ. ಇಂತಹ ಸಿನಿಮಾ ಬಂದಾಗ ಕನ್ನಡಿಗರು ಚಿತ್ರವನ್ನು ನೋಡಬೇಕು. ನನ್ನ ನಿರ್ದೇಶನದ 'ಒಂದು ಸರಳ ಪ್ರೇಮಕಥೆ'ಯನ್ನು ನೋಡದಿದ್ದರೂ ಪರವಾಗಿಲ್ಲ ಈ ಸಿನಿಮಾವನ್ನು ನೋಡಿ ಎಂದಿದ್ದಾರೆ.

ಸಿನಿಮಾ ನೋಡಿದ ಬಳಿಕ ಮಾತನಾಡಿದ ಅವರು, ಇಂತಹ ಸಿನಿಮಾ ಮಲಯಾಳಂನಲ್ಲಿ ಬಂದಿದ್ದರೆ, ನಮ್ಮ ಕನ್ನಡಿಗರೇ ನೋಡಿ, ಮೆಚ್ಚುತ್ತಿದ್ದರು. ಆದರೆ, ಇದು ಕನ್ನಡದಲ್ಲಿ ಬಂದಿರುವ ಕಾರಣ ತಲೆ ಕೆಡಿಸಿಕೊಂಡಿಲ್ಲ. ಉತ್ತಮ ಸಿನಿಮಾಗಳು ಬಂದಾಗ ಜನರು ಚಿತ್ರವನ್ನು ನೋಡಿ ಗೆಲ್ಲಿಸಿದರೆ ಮಾತ್ರವೇ ಮತ್ತಷ್ಟು ಹೊಸತನದ ಸಿನಿಮಾಗಳನ್ನು ಮಾಡಲು ನಿರ್ಮಾಪಕ, ನಿರ್ದೇಶಕರು ಮುಂದೆ ಬರುತ್ತಾರೆ ಎಂದು ಹೇಳಿದ್ದಾರೆ.

ಬ್ಲಿಂಕ್ ಸಿನಿಮಾ ಗಳಿಸಿದ್ದೆಷ್ಟು?

ಬ್ಲಿಂಕ್ ಸಿನಿಮಾದಲ್ಲಿ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದು, ಚೈತ್ರಾ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಸುರೇಶ್ ಅನಗಲ್ಲಿ ಮತ್ತು ವಜ್ರಧನ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಶಾಸ್ತ್ರಿ ಮತ್ತು ಪ್ರಸನ್ನ ಕುಮಾರ್ ಅವರು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.

ಮಾರ್ಚ್ 8ರಂದು ರಾಜ್ಯದಾದ್ಯಂತ ತೆರೆಕಂಡ ಬ್ಲಿಂಕ್ ಸಿನಿಮಾಗೆ ನಿಧಾನವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಿಡುಗಡೆಯಾದ ಮೊದಲ ದಿನ 69,789 ಕಲೆಕ್ಷನ್ ಮಾಡಿದೆ ಎಂದು ಚಿತ್ರದ ನಿರ್ಮಾಪಕ ರವಿಚಂದ್ರ ಎಜೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT