ಝೈದ್ ಖಾನ್ - ಅನಿಲ್ ಕುಮಾರ್ 
ಸಿನಿಮಾ ಸುದ್ದಿ

ಬನಾರಸ್ ಬಳಿಕ ನಿರ್ದೇಶಕ ಅನಿಲ್ ಕುಮಾರ್ ಜೊತೆ ಝೈದ್ ಖಾನ್ ಹೊಸ ಸಿನಿಮಾ!

ನಿರ್ದೇಶಕ ಜಯತೀರ್ಥ ಅವರ ಬನಾರಸ್ (2022) ಮೂಲಕ ತಮ್ಮ ಜರ್ನಿ ಆರಂಭಿಸಿದ ಝೈದ್ ಖಾನ್ ಇದೀಗ ಎರಡನೇ ಚಿತ್ರದ ಭಾಗವಾಗಲು ಮುಂದಾಗಿದ್ದಾರೆ.

ನಿರ್ದೇಶಕ ಜಯತೀರ್ಥ ಅವರ ಬಹುಭಾಷಾ ಚಿತ್ರ ಬನಾರಸ್ (2022) ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಜರ್ನಿ ಆರಂಭಿಸಿದ ಝೈದ್ ಖಾನ್ ಇದೀಗ ಎರಡನೇ ಚಿತ್ರದ ಭಾಗವಾಗಲು ಮುಂದಾಗಿದ್ದಾರೆ. ಹಲವಾರು ನಿರ್ದೇಶಕರೊಂದಿಗೆ ಅವರು ಕೆಲಸ ಮಾಡುತ್ತಾರೆ ಎನ್ನುವ ವದಂತಿಗಳು ಕೇಳಿಬರುತ್ತಿರುವಾಗಲೇ, ಝೈದ್ ಈಗ ಉಪಾಧ್ಯಕ್ಷ ಎಂಬ ಹಿಟ್ ಚಿತ್ರ ನೀಡಿದ ನಿರ್ದೇಶಕ ಅನಿಲ್ ಕುಮಾರ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

'ಬನಾರಸ್ ನನಗೆ ಉತ್ತಮ ಎಂಟ್ರಿಯನ್ನು ದೊರಕಿಸಿಕೊಟ್ಟಿದೆ. ಅಂದಿನಿಂದ, ನಾನು ಹಲವು ನಿರ್ದೇಶಕರ ವಿಭಿನ್ನ ಕಥೆಗಳನ್ನು ಕೇಳುತ್ತಿದ್ದೇನೆ ಮತ್ತು ಹಲವಾರು ಸ್ಕ್ರಿಪ್ಟ್‌ಗಳನ್ನು ಓದುತ್ತಿದ್ದೇನೆ. ಹೆಚ್ಚು ಚಿಂತನೆಯ ನಂತರ, ನಾನು ಅನಿಲ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ನಟ ಹೇಳುತ್ತಾರೆ.

ಅನಿಲ್ ಕುಮಾರ್ ಅವರು ಸುದೀಪ್ ನಟನೆಯ ಕೆಂಪೇಗೌಡ ಚಿತ್ರದ ಸಂಭಾಷಣೆ ಬರೆದಿದ್ದರು. ಶಕ್ತಿ ಚಿತ್ರದಲ್ಲಿ ಮಾಲಾಶ್ರೀ, ದಿಲ್‌ವಾಲ ಚಿತ್ರದಲ್ಲಿ ಸುಮಂತ್ ಮತ್ತು ರಾಧಿಕಾ ಪಂಡಿತ್ ಮತ್ತು ರ್ಯಾಂಬೋ 2 ನಲ್ಲಿ ಶರಣ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಮೂಲಕ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದು, ಇದೀಗ ಝೈದ್ ಖಾನ್ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಝೈದ್ ಪ್ರಕಾರ, ಈ ಸಿನಿಮಾ ಪ್ರೀತಿಯ ಸುತ್ತ ಸುತ್ತುತ್ತದೆ. 'ಅನಿಲ್ ಕುಮಾರ್ ಅವರು ರೊಮ್ಯಾಂಟಿಕ್ ಎಂಟರ್‌ಟೈನರ್ ಅನ್ನು ಮಾಡುತ್ತಿದ್ದಾರೆ. ಆದರೆ, ಇದು ಬನಾರಸ್‌ನಷ್ಟು ಪ್ರಯೋಗಾತ್ಮಕವಾಗಿರುವುದಿಲ್ಲ. ಇದು ಇಂದಿನ ಯುವಕರಿಗಾಗಿ ರಚಿಸಲಾದ ಸಮಕಾಲೀನ ಕಥೆಯಾಗಿದೆ. ಚಿತ್ರವು ಆರಂಭಿಕ ಹಂತದಲ್ಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್‌ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜಿಸಿದ್ದೇವೆ' ಎನ್ನುತ್ತಾರೆ.

ನಿರ್ದೇಶಕ-ನಟ ಜೋಡಿಯು ತಮ್ಮ ಸಹಯೋಗವನ್ನು ದೃಢಪಡಿಸಿದ್ದು, ಚಿತ್ರದ ನಿರ್ಮಾಣ ಸಂಸ್ಥೆ, ಶೀರ್ಷಿಕೆ ಮತ್ತು ತಾಂತ್ರಿಕ ಸಿಬ್ಬಂದಿಯ ವಿವರಗಳನ್ನು ಚಿತ್ರವು ಸೆಟ್ಟೇರುವಾಗ ಮುಹೂರ್ತ ಸಮಾರಂಭದೊಂದಿಗೆ ಬಹಿರಂಗಪಡಿಸಲಾಗುತ್ತದೆ.

ಈಮಧ್ಯೆ, ಝೈದ್ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದು, ಬ್ಯಾಕ್-ಟು-ಬ್ಯಾಕ್ ಯೋಜನೆಗಳನ್ನು ಎದುರು ನೋಡುತ್ತಿದ್ದಾರೆ. 'ನಾನು ಇನ್ನೂ ಕೆಲವು ಚಿತ್ರಗಳ ಚರ್ಚೆಯಲ್ಲಿದ್ದೇನೆ ಮತ್ತು ನನ್ನ ಸದ್ಯದ ಬದ್ಧತೆಗಳನ್ನು ಪೂರೈಸಿದ ನಂತರ ಅವುಗಳನ್ನು ಕಿಕ್‌ಸ್ಟಾರ್ಟ್ ಮಾಡಲು ಮುಂದಾಗುತ್ತೇನೆ" ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ