ಪುನೀತ್ ರಾಜಕುಮಾರ್-ಆರ್ ಸಿಬಿ ಮಹಿಳಾ ತಂಡ
ಪುನೀತ್ ರಾಜಕುಮಾರ್-ಆರ್ ಸಿಬಿ ಮಹಿಳಾ ತಂಡ 
ಸಿನಿಮಾ ಸುದ್ದಿ

ಹೆಣ್ಮಕ್ಳೇ ಸ್ಟ್ರಾಂಗು ಗುರು: ಪುನೀತ್ ಹುಟ್ಟುಹಬ್ಬದ ದಿನವೇ IPL ಟ್ರೋಫಿ ಬರ ನೀಗಿಸಿದ RCB ಸಿಂಹಿಣಿಯರು! ಜೈ ಜೈ ಎಂದ ಅಭಿಮಾನಿಗಳು

Vishwanath S

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು RCB ತಂಡವನ್ನು ಬಹುವಾಗಿ ಪ್ರೇರಿಸಿದ್ದರು. ಮುಂದೊಂದು ದಿನ ಆರ್ ಸಿಬಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದರು.

ಕನ್ನಡದ ಅಭಿಮಾನಿಗಳು ಜಾಕಿ ಚಿತ್ರದ 'ಹೆಣ್ಮಕ್ಳೇ ಸ್ಟ್ರಾಂಗು ಗುರು' ಅಂತ ಪುನೀತ್ ರಾಜ್​ಕುಮಾರ್​ ಅವರ ಹಾಡನ್ನು ನೆನಪು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಅಂದರಂತೆ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಜನ್ಮ ದಿನದಂದೇ ಮಹಿಳಾ ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಇತಿಹಾಸವನ್ನು ಸೃಷ್ಟಿಸಿದೆ. WPL 2024 ಫೈನಲ್‌ನಲ್ಲಿ RCB ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಸೋಲಿಸಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ 11 ಓವರ್ ನಲ್ಲಿ ಶ್ರೇಯಾಂಕ ಪಟೇಲ್ ಅವರು 23 ರನ್ ಗಳಿಸಿದ್ದ ಮೆಗ್ ಲ್ಯಾನಿಂಗ್ ಅವರನ್ನು ಔಟ್ ಮಾಡುವ ಮೂಲಕ ಡೆಲ್ಲಿಗೆ ಮೊದಲ ಆಘಾತ ನೀಡಿದರು. ಈ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕ ಪಟೇಲ್ ನಾಲ್ಕು ವಿಕೆಟ್ ಪಡೆದರು ಮಾರಕರಾದರು. ಇನ್ನು ಮೊಲಿನೆಕ್ಸ್ ಸಹ ಮೂರು ವಿಕೆಟ್ ಪಡೆದು ಎದುರಾಳಿಗಳಿಗೆ ದುಸ್ವಪ್ನವಾದರು. ಇನ್ನು ಆಶಾ ಶೋಭನ ಸಹ 2 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ಪರ ಶಫಾಲಿ ವರ್ಮಾ 44 ರನ್, ರಾಧಾ ಯಾದವ್ 12, ಅನುರಾಧ ರೆಡ್ಡಿ 10 ರನ್ ಬಾರಿಸಿದ್ದು ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ ಗಳಿಗೆ ಆಲೌಟ್ ಆಗಿದ್ದು ಆರ್ ಸಿಬಿಗೆ 114 ರನ್ ಗಳ ಗುರಿ ನೀಡಿತ್ತು.

114 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ಮೂರು ಎಸೆತಗಳು ಬಾಕಿ ಇರುವಂತೆ 115 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಆರ್ ಸಿಬಿ ಪರ ಸ್ಮೃತಿ ಮಂದಾನ 31 ಮತ್ತು ಸೋಫಿ ಡಿವೈನ್ 32 ರನ್ ಬಾರಿಸಿ ಔಟಾದರು. ನಂತರ ಬಂದ ಎಲ್ಲಿಸ್ ಪೇರಿ ಅಜೇಯ 35 ಮತ್ತು ರಿಚ್ಚ ಘೋಷ್ ಅಜೇಯ 17 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

SCROLL FOR NEXT