O2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

PRK ಪ್ರೊಡಕ್ಷನ್ಸ್ ನಿರ್ಮಾಣದ 'O2' ಬಿಡುಗಡೆಗೆ ಸಿದ್ಧ; ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ ತೆರೆಗೆ

ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ 'O2' ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ 'O2' ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು ಏಪ್ರಿಲ್ 19 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರತಂಡ ಇತ್ತೀಚೆಗಷ್ಟೇ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.

'O2' ಸಿನಿಮಾಗೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ. ಚಿತ್ರವು ನೈತಿಕ ಸಂದಿಗ್ಧತೆಗಳು, ನಿಷೇಧಿತ ಪ್ರಯೋಗಗಳು ಮತ್ತು ಮರಣವನ್ನು ಧಿಕ್ಕರಿಸುವ ಪಟ್ಟುಬಿಡದ ಅನ್ವೇಷಣೆಯನ್ನು ಪರಿಶೀಲಿಸುತ್ತದೆ. ಟೀಸರ್ ಪ್ರೀತಿ, ನೈತಿಕತೆ ಮತ್ತು ಹಣೆಬರಹದ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವ ವೈದ್ಯರ ಅಪಾಯಕಾರಿ ಪ್ರಯಾಣದ ಸುತ್ತ ಕೇಂದ್ರೀಕೃತವಾಗಿದೆ.

ನಿರ್ದೇಶಕರಲ್ಲಿ ಒಬ್ಬರಾದ ರಾಘವ್ ನಾಯಕ್ ಮಾತನಾಡಿ, 'ನಾನು ಕೇವಲ ಸಿನಿಮಾದ ವಿದ್ಯಾರ್ಥಿಯಲ್ಲ. ಬದಲಿಗೆ ನಾನು ಅದನ್ನು ಉಸಿರಾಡುತ್ತೇನೆ. ಚಿತ್ರೀಕರಣದ ಪ್ರಕ್ರಿಯೆಯಲ್ಲಿ ಸಂಭವಿಸಿದ ಹಲವು ಅಡೆತಡೆಗಳ ಹೊರತಾಗಿಯೂ, ಈ ಚಿತ್ರ ನಿರ್ಮಾಣಕ್ಕೆ ಪುನೀತ್ ರಾಜ್‌ಕುಮಾರ್ ಅವರ ಅಚಲ ಬೆಂಬಲವೇ ಕಾರಣ. ಈ ಸಿನಿಮಾದ ಮೇಲೆ ಅವರಿಟ್ಟಿದ್ದ ನಂಬಿಕೆಯೇ ನಮಗೆ ಮಾರ್ಗದರ್ಶನದ ಬೆಳಕಿನಂತೆ ಕಾರ್ಯನಿರ್ವಹಿಸಿತು' ಎಂದರು.

'PRK ಪ್ರೊಡಕ್ಷನ್ಸ್ ಕೇವಲ ಒಂದು ಕಂಪನಿ ಅಲ್ಲ. ಇದು ಒಂದು ಕುಟುಂಬ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ನಾಯಕತ್ವ, ಕಾರ್ಯನಿರ್ವಾಹಕ ನಿರ್ಮಾಪಕರಾದ ಸತೀಶ್ ಮತ್ತು ಸ್ವಾಮಿ ಅವರ ಬೆಂಬಲದೊಂದಿಗೆ O2 ಸಿನಿಮಾವನ್ನು ತಯಾರಿಸಲಾಗಿದೆ. ಈ ಬೇಸಿಗೆಯಲ್ಲಿ ನಮ್ಮ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸಲು ನಾವು ಕಾತರದಿಂದ ಕಾಯುತ್ತಿದ್ದೇವೆ ಎಂದರು.

O2 ನಲ್ಲಿ ಸಿರಿ ರವಿಕುಮಾರ್, ಪುನೀತ್ ಬಿಎ, ಪ್ರಕಾಶ್ ಬೆಳವಾಡಿ, ಶ್ರೀಧರ್, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ರಂಗಭೂಮಿ ಕಲಾವಿದ ಮೋಹನ್ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣವಿದ್ದು, ವಿವನ್ ರಾಧಾಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT