ಮಮತಾ ರಾಹುತ್ - ಡಾ. ಸುರೇಶ್ ಕೊಟ್ಯಾನ್ ಚಿತ್ರಾಪು
ಮಮತಾ ರಾಹುತ್ - ಡಾ. ಸುರೇಶ್ ಕೊಟ್ಯಾನ್ ಚಿತ್ರಾಪು 
ಸಿನಿಮಾ ಸುದ್ದಿ

ಭ್ರೂಣಹತ್ಯೆಯ ಕರಾಳತೆ ಬಿಂಬಿಸುವ 'ತಾರಿಣಿ' ಚಿತ್ರ ಬಿಡುಗಡೆಗೆ ಸಿದ್ಧ; ಸಿದ್ದು ಪೂರ್ಣಚಂದ್ರ ನಿರ್ದೇಶನ

Ramyashree GN

ಸಿದ್ದು ಪೂರ್ಣಚಂದ್ರ ನಿರ್ದೇಶನದ ಮತ್ತು ಮಮತಾ ರಾಹುತ್ (ಯದಾ ಯದಾ ಹಿ ಧರ್ಮಸ್ಯ, ಆಟೋ ರಾಜಾ) ನಟಿಸಿರುವ ತಾರಿಣಿ ಬಿಡುಗಡೆಗೆ ಸಿದ್ಧವಾಗಿದೆ. ಹೆಣ್ಣು ಭ್ರೂಣಹತ್ಯೆಯ ಕಾನೂನುಬಾಹಿರ ಕ್ರಮವನ್ನು ಮೂಲಕ ವೈದ್ಯಕೀಯ ಉದ್ಯಮದ ಕರಾಳತೆಯ ಮೇಲೆ ಚಿತ್ರವು ಬೆಳಕು ಚೆಲ್ಲುತ್ತದೆ.

ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಸಿದ್ದು ಪೂರ್ಣಚಂದ್ರ ಅವರು ಆರಂಭದಲ್ಲಿ ಕನ್ನಡ ಧಾರಾವಾಹಿಗಳನ್ನು ಬರೆಯಲು ಮತ್ತು ನಿರ್ದೇಶಿಸಲು ಮುಂದಾದರು. ಅವರ ಚೊಚ್ಚಲ ಸಿನಿಮಾ ಹೆಮ್ಮರ (2016) ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆಯಿತು. ನಂತರ ಕೃಷ್ಣ ಗಾರ್ಮೆಂಟ್ಸ್ (2019) ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಇದೀಗ ಅವರ ಚಿತ್ರ ತಾರಿಣಿ ಮಾರ್ಚ್ 29ರಂದು ರಾಜ್ಯದಾದ್ಯ್ಂತ ಬಿಡುಗಡೆಗೆ ಸಿದ್ಧವಾಗಿದೆ.

ಒಂದು ದಶಕದ ಚಲನಚಿತ್ರ ನಿರ್ಮಾಣದ ಅನುಭವ ಹೊಂದಿರುವ ಮನಶ್ಶಾಸ್ತ್ರಜ್ಞ ಮತ್ತು ಉದ್ಯಮಿ ಡಾ. ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ಶ್ರೀ ಗಜನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಅವರು ತಮ್ಮ ಪತ್ನಿ, ನಟಿ ಮಮತಾ ರಾಹುತ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ತಾರಾಗಣದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ವಿಜಯಲಕ್ಷ್ಮಿ, ಪ್ರಮೀಳಾ ಸುಬ್ರಮಣ್ಯಂ, ಸನ್ನಿ, ತೇಜಸ್ವಿನಿ ಮತ್ತು ಮಂಜು ನಂಜನಗೂಡು ಇದ್ದಾರೆ.

ಅನಂತ್ ಆರ್ಯನ್ ಸಂಗೀತ ಮತ್ತು ದೀಪು ಸಿಎಸ್ ಸಂಕಲನವಿರುವ ಈ ಚಿತ್ರದ ಛಾಯಾಗ್ರಹಣವನ್ನು ರಾಜು ಹೆಮ್ಮಿಗೆಪುರ ನಿರ್ವಹಿಸಿದ್ದಾರೆ.

SCROLL FOR NEXT