ವಿಜಯ್ ಪ್ರಸಾದ್ - ಶ್ರೀಹರಿ ರೆಡ್ಡಿ 
ಸಿನಿಮಾ ಸುದ್ದಿ

'ಸಿದ್ಲಿಂಗು 2' ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲಿದೆ: ನಿರ್ದೇಶಕ ವಿಜಯ್ ಪ್ರಸಾದ್

ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಮಾತ್ರ ಅದೆಷ್ಟೇ ವರ್ಷ ಕಳೆದರೂ ಪ್ರೇಕ್ಷೇಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಚಿತ್ರಗಳ ಸಾಲಿಗೆ ಸೇರಿರುವುದು ವಿಜಯ್ ಪ್ರಸಾದ್ ನಿರ್ದೇಶನದ, ಯೋಗಿ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಸಿದ್ಲಿಂಗು' ಚಿತ್ರ. ಇದೀಗ ಚಿತ್ರದ ಸೀಕ್ವೆಲ್ ಬರಲಿದೆ.

ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಮಾತ್ರ ಅದೆಷ್ಟೇ ವರ್ಷ ಕಳೆದರೂ ಪ್ರೇಕ್ಷೇಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಚಿತ್ರಗಳ ಸಾಲಿಗೆ ಸೇರಿರುವುದು ವಿಜಯ್ ಪ್ರಸಾದ್ ನಿರ್ದೇಶನದ, ಯೋಗಿ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಸಿದ್ಲಿಂಗು' ಚಿತ್ರ. ದಶಕದ ಹಿಂದೆ ತೆರೆಕಂಡರೂ ಇಂದಿಗೂ ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವಂತ ಚಿತ್ರ ಇದು. ಚಿತ್ರ ಬಿಡುಗಡೆಯಾಗಿ 12 ವರ್ಷ ಕಳೆದರೂ, ಮೆಚ್ಚುಗೆ ಪಡೆಯುತ್ತಲೇ ಇದೆ.

ಇತ್ತೀಚೆಗಷ್ಟೇ ಚಿತ್ರತಂಡ 'ಸಿದ್ಲಿಂಗು 2' ಶೀರ್ಷಿಕೆಯ ಚಿತ್ರದ ಮುಂದುವರಿದ ಭಾಗವನ್ನು ಘೋಷಿಸಿದೆ. ಸೀಕ್ವೆಲ್ ಕೂಡ ಮೊದಲ ಚಿತ್ರದಂತೆಯೇ ತನ್ನ ಯಶಸ್ಸನ್ನು ಮುಂದುವರಿಸುತ್ತದೆ ಎಂದು ನಿರ್ದೇಶಕರು ಬಹಿರಂಗಪಡಿಸುತ್ತಾರೆ.

ವಿಜಯ್ ಪ್ರಸಾದ್ ಮತ್ತು ಲೂಸ್‌ಮಾದ ಯೋಗಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಚಿತ್ರದ ಪಾತ್ರವರ್ಗದ ಬಗ್ಗೆ ಈಗಾಗಲೇ ಊಹಾಪೋಹಗಳು ಹರಡಿವೆ. ಸಿದ್ಲಿಂಗು 2ನಲ್ಲಿ ಸೋನು ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ನಟಿ ರಮ್ಯಾ ಮತ್ತು ಸುಮನ್ ರಂಗನಾಥ್ ಅವರು ಈ ಸಿನಿಮಾಗೆ ಪುನರಾಗಮನ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರ ನಿರ್ಮಾಪಕರಾದ ಶ್ರೀಹರಿ ರೆಡ್ಡಿ ಅವರು ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಸಿನಿಮಾ ಸರಳ ಮುಹೂರ್ತದೊಂದಿಗೆ ಸೆಟ್ಟೇರಿದೆ.

ತನ್ನ ಆಕರ್ಷಕ ಕಥಾಹಂದರ, ಸಂಬಂಧದ ಮೌಲ್ಯಗಳ ಚಿತ್ರಣ, ಕಚಗುಳಿ ಇಡುವ ಮೆದು ಹಾಸ್ಯ, ಹೃದಯಸ್ಪರ್ಶಿ ರೊಮ್ಯಾನ್ಸ್ ಮತ್ತು ಸಂಭಾಷಣೆಗಳೊಂದಿಗೆ ಚಿತ್ರದ ಸಂಗೀತ ಸಿದ್ಲಿಂಗು ಚಿತ್ರವನ್ನು ಪ್ರೇಕ್ಷಕರ ನೆನಪಿನಲ್ಲಿ ಉಳಿಯುವ ಚಿತ್ರವನ್ನಾಗಿ ಮಾಡಿತ್ತು. 'ನಾವು ಅದನ್ನು ಮುಂದಿನ ಭಾಗದಲ್ಲೂ ಅನುಸರಿಸಲು ಆಶಿಸುತ್ತೇವೆ. ನಗು, ಕಣ್ಣೀರು ಮತ್ತು ಇವೆರಡರ ನಡುವಿನ ಎಲ್ಲವನ್ನೂ ಸೇರಿಸುವ ಮೂಲಕ ಸೀಕ್ವೆಲ್ ಕೂಡ ಚಿತ್ರರಂಗದಲ್ಲಿ ತನ್ನದೇ ಆದ ಹೆಜ್ಜೆಗುರುತನ್ನು ಮೂಡಿಸಲು ಸಿದ್ಧವಾಗಿದೆ ಎಂದು ವಿಜಯ ಪ್ರಸಾದ್ ವಿವರಿಸುತ್ತಾರೆ.

ಮುಂದಿನ ಭಾಗದ ಮಹತ್ವದ ಬಗ್ಗೆ ಮಾತನಾಡುವ ನಟ ಯೋಗಿ, ಇದು ನನ್ನ ವೃತ್ತಿಜೀವನದ ಪ್ರಮುಖ ಕ್ಷಣವಾಗಿದೆ. ದೀರ್ಘಕಾಲದ ಸ್ನೇಹಿತೆ ಸೋನು ಗೌಡ ಅವರೊಂದಿಗೆ ಮತ್ತೊಮ್ಮೆ ನಟಿಸುತ್ತಿದ್ದೇನೆ. ನಾನು ಈ ಹೊಸ ಸಿನಿಮಾ ಪ್ರಾರಂಭಿಸಲು ಉತ್ಸುಕನಾಗಿದ್ದೇನೆ ಮತ್ತು ಶಾಶ್ವತ ಪ್ರಭಾವವನ್ನು ಬೀರುವಂತೆ ನಟಿಸಲು ಆಶಿಸುತ್ತೇನೆ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಸಿಂಹ ಅಲ್ಲ 'ನಾಯಿ' ಎಂದು ಹೆಸರಿಡಬೇಕಿತ್ತು: ಕಚ್ಚೆ ಹರುಕನಿಗೆ ಟಿಕೆಟ್ ಕೊಡದೆ ಬಿಜೆಪಿಯವರೇ ಕ್ಯಾಕರಿಸಿ ಉಗಿದು ಮನೆಯಲ್ಲಿ ಕೂರಿಸಿದ್ದಾರೆ!

ಮರು ಎಣಿಕೆಯಲ್ಲಿ ಮಂಜುನಾಥ್ ಗೆದ್ದರೆ ರಾಜಕೀಯ ನಿವೃತ್ತಿ: ಮಾಲೂರು ಶಾಸಕ ನಂಜೇಗೌಡ

ಜಾತಿಗಣತಿ ಸಮೀಕ್ಷೆ 2025: ಆಶಾ ಕಾರ್ಯಕರ್ತರಿಗೆ 2,000 ರೂ. ಗೌರವ ಧನ ಘೋಷಿಸಿದ ಸರ್ಕಾರ

SCROLL FOR NEXT