ಹಿತಾ ಚಂದ್ರಶೇಖರ್ 
ಸಿನಿಮಾ ಸುದ್ದಿ

'ಯುವ' ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರ: ಹಿತ ಚಂದ್ರಶೇಖರ್

ಜಾಹೀರಾತು ಜಗತ್ತಿನಲ್ಲಿ ಪರಿಚಿತ ಮುಖವಾಗಿರುವ ಹಿತಾ ಚಂದ್ರಶೇಖರ್ ಅವರು, ರಾಜ್‌ ಕುಮಾರ್‌ ಕುಟುಂಬದ ಕುಡಿ ಯುವರಾಜಕುಮಾರ್ ಅವರ ಚೊಚ್ಚ ಸಿನಿಮಾ ಯುವ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಾಹೀರಾತು ಜಗತ್ತಿನಲ್ಲಿ ಪರಿಚಿತ ಮುಖವಾಗಿರುವ ಹಿತಾ ಚಂದ್ರಶೇಖರ್ ಅವರು, ರಾಜ್‌ ಕುಮಾರ್‌ ಕುಟುಂಬದ ಕುಡಿ ಯುವರಾಜಕುಮಾರ್ ಅವರ ಚೊಚ್ಚ ಸಿನಿಮಾ ಯುವ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

"ಈ ಪಾತ್ರಕ್ಕೆ ನಾನು ನಿರ್ದೇಶಕರ ಮೊದಲ ಆಯ್ಕೆಯಾಗಿದ್ದೆ. ಆದರೂ ನಾನು ಏಕೆ ಎಂದು ಎಂದಿಗೂ ಪ್ರಶ್ನಿಸಲಿಲ್ಲ. ನನ್ನ 7 ವರ್ಷಗಳ ವೃತ್ತಿಜೀವನದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತೀ ನಿರ್ಧಾರದಲ್ಲೂ ಸವಾಲು, ಉತ್ಸಾಹ ಹಾಗೂ ಕಲಿಕೆ ಮತ್ತು ಬೆಳೆಯುವ ಅವಕಾಶವನ್ನು ಕಂಡುಕೊಳ್ಳುತ್ತಿದ್ದೆ. ಯುವ ಚಿತ್ರದಲ್ಲಿ ಸಹೋದರಿಯ ಪಾತ್ರವನ್ನು ನಿರ್ವಹಿಸಿದ್ದು, ಇದು ವಿಭಿನ್ನ ಅನುಭವವನ್ನು ನೀಡಿದೆ ಎಂದು ಹಿತಾ ಚಂದ್ರಶೇಖರ್ ಹೇಳಿದ್ದಾರೆ.

ಚಿತ್ರದಲ್ಲಿನ ನನ್ನ ಪಾತ್ರ ಈ ಹಿಂದಿನ ಚಿತ್ರಗಳಿಗಿಂತಲೂ ವಿಭಿನ್ನವಾಗಿದೆ. ನನ್ನ ಈ ಹಿಂದಿನ ಚಿತ್ರಗಳೆಲ್ಲವೂ ಹೊಸ ನಿರ್ದೇಶಕರ ಸಣ್ಣ-ಬಜೆಟ್ ಚಿತ್ರಗಳಾಗಿದ್ದವು. ಇದೀಗ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಸಿನಿಮಾ ಮಾಡಿದ್ದೇನೆ. ಇದು ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದೆ.

ಆರಂಭದಲ್ಲಿ ಚಿತ್ರದಲ್ಲಿ ನನ್ನ ಪಾತ್ರ ಪ್ರಮುಖ ಪಾತ್ರವಾಗಿರುತ್ತದೆ ಎಂಬುದರ ಬಗ್ಗೆ ಅನುಮಾನಗಳು ಮೂಡಿದ್ದವು. ಆದರೆ, ನಿರ್ದೇಶಕರು ಹಾಗೂ ಚಿತ್ರತಂಡದೊಂದಿಗೆ ಚರ್ಚಿಸಿದ ಬಳಿಕ ಪೋಷಕ ಪಾತ್ರದಲ್ಲಿಯೂ ಪ್ರಮುಖ ಪಾತ್ರ ನಿಭಾಯಿಸಬಹುದು ಎಂಬುದನ್ನು ಅರಿತುಕೊಂಡೆ. ಯುವ ಒಂದು ಕುಟುಂಬ ಕೇಂದ್ರಿತ ಚಿತ್ರವಾಗಿದ್ದು, ಕುಟುಂಬದಲ್ಲಿ ನಿಯಮಗಳನ್ನು ಅನುಸರಿಸದ ಸಹೋದರ ಹಾಗೂ ಸಣ್ಣ ಪುಟ್ಟ ಮನಸ್ತಾಪಗಳಿದ್ದರೂ ಒಡಹುಟ್ಟಿದವರ ನಡುವೆ ಯಾವಾಗಲೂ ಬಲವಾದ ಬಂಧವಿದ್ದೇ ಇರುತ್ತದೆ ಎಂಬ ಸಂದೇಶವನ್ನು ಚಿತ್ರ ನೀಡಲಿದೆ.

ಯುವ ಪಾತ್ರದಲ್ಲಿ ನಟಿಸಿರುವ ಯುವ ರಾಜಕುಮಾರ್ ಮತ್ತು ನನಗೆ ಹೆಚ್ಚಿನ ವಯಸ್ಸಿನ ಅಂತರವಿಲ್ಲ, ಹೀಗಾಗಿ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಲಿಲ್ಲ. ಇದು ನಟನೆಗೂ ಸಹಾಯಕವಾಯಿತು. ಚಿತ್ರ ತಂಡ ನಡೆಸಿಕೊಡ ರೀತಿ ಸಂತಸ ತಂದಿದೆ ಹಾಗೂ ಸೆಟ್ ನಲ್ಲಿ ಅದ್ಭುತ ಅನುಭವಗಳನ್ನು ಪಡೆದುಕೊಂಡೆ ಎಂದು ಹಿತಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!