ನಟ ಆದಿತ್ಯ 
ಸಿನಿಮಾ ಸುದ್ದಿ

'ಕನ್ನಡ ಚಿತ್ರರಂಗ ಉಳಿಸಿ, ಬೆಳೆಸೋದು ಪ್ರೇಕ್ಷಕರಿಗೆ ಬಿಟ್ಟದ್ದು: ನಟ ಆದಿತ್ಯ

ತಾಯಿ ಮತ್ತು ಮಗುವಿನ ನಡುವಿನ ಸಂಕೀರ್ಣವಾದ ಬಾಂಧವ್ಯವನ್ನು ಅನ್ವೇಷಿಸುವ 'ಕಾಂಗರೂ' ಕೇವಲ ಥ್ರಿಲ್ಲಿಂಗ್ ಗಿಂತಲೂ ಹೆಚ್ಚಿನ ಅನುಭವ ಒದಗಿಸುತ್ತದೆ. ಥ್ರಿಲ್ಲರ್ ಹೊರತಾಗಿಯೂ, ಆಳವಾದ ಭಾವನಾತ್ಮಕ ಚಿತ್ರವಾಗಿದೆ

ನಟ ಆದಿತ್ಯ ಅಭಿನಯದ 'ಕಾಂಗರೊ' ನಾಳೆ ತೆರೆಗೆ ಅಪ್ಪಳಿಸಲಿದೆ. ಆದಿತ್ಯ ಸಿನಿ ಎಕ್ಸ್ ಪ್ರೆಸ್ ನೊಂದಿಗೆ ಚಿತ್ರದ ಕುರಿತು ಚರ್ಚಿಸುವ ಮುನ್ನಾ, ಕನ್ನಡ ಚಿತ್ರರಂಗದ ಉಳಿವಿಗಾಗಿ ಪ್ರೇಕ್ಷಕರಿಗೆ ಕರೆ ನೀಡಿದರು. ಕನ್ನಡ ಚಿತ್ರರಂಗ ಮುಚ್ಚುವ ಹಂತಕ್ಕೆ ಬರಲ್ಲ ಎಂದು ಭಾವಿಸುತ್ತೇನೆ. ಥಿಯೇಟರ್ ಗಳಲ್ಲಿ ಕನ್ನಡ ಚಿತ್ರಗಳನ್ನು ನೋಡುವ ಮೂಲಕ ಅದನ್ನು ಉಳಿಸುವುದು ಪ್ರೇಕ್ಷಕರಿಗೆ ಬಿಟ್ಟದ್ದು, ಇದರಿಂದ ಹೆಚ್ಚಿನ ಸಿನಿಮಾ ನಿರ್ಮಾಣ ಪ್ರೋತ್ಸಾಹ ಸಿಗಲಿದೆ ಎಂದು ಹೇಳಿದರು.

ಡಿಜಿಟಲ್ ನಿಂದ ಉಂಟಾದ ಅಸಾಧಾರಣ ಸ್ಪರ್ಧೆಯನ್ನು ಒತ್ತಿ ಹೇಳಿದ ಆದಿತ್ಯ, ಇದನ್ನು ಥಿಯೇಟ್ರಿಕಲ್ ಸಿನಿಮಾದ ದೊಡ್ಡ ಪ್ರತಿಸ್ಪರ್ಧಿ ಎಂದರು. ಪ್ರೇಕ್ಷಕರ ಇಚ್ಚೆಯಂತೆ ಮನರಂಜನೆಯೂ ಬೆಳೆಯುತ್ತಿದೆ. ಈ ಪ್ರವೃತ್ತಿ ಬದಲಾಯಿಸಲು ನಿಯಮಗಳು ಪ್ರಮುಖ ಅಂಕುಶವಾಗಬಹುದು ಎಂದರು.

ರಂಗಭೂಮಿ ಅನುಭವ ಸಂರಕ್ಷಣೆಯ ಪಾತ್ರವನ್ನು ಒತ್ತಿ ಹೇಳಿದ ಅವರು, ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಂತರ ಒಟಿಟಿ ಬಿಡುಗಡೆ ಹೊರತಾಗಿಯೂ, ದೊಡ್ಡ ಪರದೆಯ ಮೇಲೆ ಚಿತ್ರ ನೋಡುವ ಥ್ರಿಲ್‌ನ್ನು ಯಾವುದಕ್ಕೂ ಹೋಲಿಸುವುದಕ್ಕೆ ಆಗಲ್ಲ ಎಂದು ಅವರು ಹೇಳಿದರು.

ಡೆಡ್ಲಿ ಸೋಮ' ಮತ್ತು 'ಎದೆಗಾರಿಕೆ'ಯಂತಹ ಚಿತ್ರಗಳ ಮೂಲಕ ತ್ರಿವೇಣಿ ಟಾಕೀಸ್‌ನಲ್ಲಿನ ತಮ್ಮ ಹಿಂದಿನ ಯಶಸ್ಸನ್ನು ನೆನಪಿಸಿಕೊಂಡ ಆದಿತ್ಯ, 'ಕಾಂಗರೂ' ಟ್ರೆಂಡ್ ಅನ್ನು ಮುಂದುವರಿಸಲಿದೆ ಎಂಬ ಆಶಾಭಾವನೆ ಹೊಂದಿದ್ದಾರೆ. ಪೋಲೀಸ್ ಪಾತ್ರದಲ್ಲಿ ಎಂದಿಗೂ ದಣಿಯದ ನಟ, 'ಕಾಂಗರೂ' ನೊಂದಿಗೆ ಮೊದಲ ಬಾರಿಗೆ ಫ್ಯಾಮಿಲಿ ಮ್ಯಾನ್ ಆಗಿ ಹೆಜ್ಜೆ ಇಟ್ಟಿದ್ದಾರೆ. “ಪೊಲೀಸ್ ಆಗಿರುವುದು ಸರಿ ಎನಿಸುತ್ತದೆ; ದರೋಡೆಕೋರರಾಗುವುದಕ್ಕಿಂತ ಇದು ಉತ್ತಮವಾಗಿದೆ ಎಂದು ಅವರು ವ್ಯಂಗ್ಯವಾಡಿದರು. ಪ್ರೇಕ್ಷಕರು ಅಂತಹ ಪಾತ್ರಗಳನ್ನು ಇಷ್ಟಪಡುತ್ತಾರೆ. ಅವರು ನನ್ನನ್ನು ಸಮವಸ್ತ್ರದಲ್ಲಿ ನೋಡಲು ಬಯಸಿದರೆ, ಹಾಗೇ ಇರಲಿ. ಅವರು ನನ್ನನ್ನು ದರೋಡೆಕೋರನಂತೆ ನೋಡಲು ಬಯಸಿದರೆ ಅದೇ ಪಾತ್ರದಲ್ಲಿ ಅಭಿನಯಿಸಲು ಸಿದ್ಧನಿದ್ದೇನೆ ಎಂದರು.

ತಾಯಿ ಮತ್ತು ಮಗುವಿನ ನಡುವಿನ ಸಂಕೀರ್ಣವಾದ ಬಾಂಧವ್ಯವನ್ನು ಅನ್ವೇಷಿಸುವ 'ಕಾಂಗರೂ' ಕೇವಲ ಥ್ರಿಲ್ಲಿಂಗ್ ಗಿಂತಲೂ ಹೆಚ್ಚಿನ ಅನುಭವ ಒದಗಿಸುತ್ತದೆ. ಥ್ರಿಲ್ಲರ್ ಹೊರತಾಗಿಯೂ, ಆಳವಾದ ಭಾವನಾತ್ಮಕ ಚಿತ್ರವಾಗಿದೆ. ಕೊನೆಯ 25 ನಿಮಿಷಗಳು ಯಾರೂ ನಿರೀಕ್ಷಿಸದ ಭಾವನೆಗಳ ಏರಿಳಿತವಾಗಿದೆ. ಇದು ಚಿತ್ರದ ಪ್ರಮುಖ ಹೈಲೆಟ್ ಆಗಿದೆ. ನಿರ್ದೇಶಕರು ಕೌಶಲ್ಯಭರಿತವಾಗಿ ಕಥೆಯನ್ನು ಹೆಣೆದಿದ್ದಾರೆ ಎಂದು ತಿಳಿಸಿದರು.

ಪವನ್ ಕುಮಾರ್ ಅವರ 'ಯು-ಟರ್ನ್' ಕಾಂಗರೂಗೆ ಸ್ಪೂರ್ತಿ: ಕಿಶೋರ್ ಮೇಗಳ ಮನೆ ಕಾಂಗರೂ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ. ಫ್ಯಾಮಿಲಿ ಫ್ರೆಂಡ್ಲಿ ಟ್ವಿಸ್ಟ್‌ನೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಪರಿಚಯಿಸಲಾಗುತ್ತಿದೆ. ಇದು ಭಾವನೆಗಳೊಂದಿಗೆ ಮೊದಲ ಥ್ರಿಲ್ಲರ್ ಸಿನಿಮಾ ಎನ್ನಬಹುದು. ಇದು ಪ್ರಾಣಿ ಕಾಂಗರೂಗಳ ಗುಣಲಕ್ಷಣಗಳನ್ನು ಮಾನವ ನಡವಳಿಕೆಗೆ ತರುತ್ತದೆ ಎಂದು ಕಿಶೋರ್ ತಮ್ಮ ಅನುಭವ ಹಂಚಿಕೊಂಡರು. ಚಿತ್ರ ನಿರೂಪಣೆಯು ಪವನ್ ಕುಮಾರ್ ಅವರ 'ಯು-ಟರ್ನ್' ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಿದರು.

ನಿರ್ಮಾಣದಿಂದ ನಿರ್ದೇಶನದವರೆಗಿನ ಅವರ ಪ್ರಯಾಣ ವಿವರಿಸಿದ ಅವರು,"ನಿರ್ಮಾಪಕನಾಗಿ ಆಪರೇಷನ್ ನಕ್ಷತ್ರ' ಚಿತ್ರ ಮಾಡಿದೆ. ಅಲ್ಲಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದೇನೆ. 'ಯು-ಟರ್ನ್‌ನಿಂದ ಪ್ರೇರಿತರಾಗಿ ಇದೇ ರೀತಿಯ ಎಳೆಯನ್ನು 'ಕಾಂಗರೂ'ಗೆ ಹೆಣೆದಿದ್ದೇನೆ. ಆರೋಹಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಆದಿತ್ಯ ಮತ್ತು ರಂಜನಿ ರಾಘವನ್ ಸೇರಿದಂತೆ ಮಾಗಡಿ ತಾಲೂಕಿನ ಚಕ್ರಭಾವಿ ಗ್ರಾಮದ ಸ್ವಾಮಿ, ನರಸಿಂಹಮೂರ್ತಿ, ಕೆ.ಜೆ. ಆರ್ ಗೌಡ ಸೇರಿದಂತೆ ಆರು ಯುವಕರು ನಿರ್ಮಾಪಕರಾಗಿರುವುದಾಗಿ ತಿಳಿಸಿದರು.

'ಎದೆಗಾರಿಕೆ'ಯಲ್ಲಿನ ಆದಿತ್ಯ ಅವರ ಪಾತ್ರವನ್ನು ನೆನಪಿಸಿಕೊಂಡ ಕಿಶೋರ್, ಆದಿತ್ಯ ಅವರ ನೈಜ ಪೋಲೀಸ್ ಚಿತ್ರಣವನ್ನು ಶ್ಲಾಘಿಸುತ್ತಾರೆ. "ರಂಜನಿ ರಾಘವನ್ ಮನೋವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದರೊಂದಿಗೆ ಚಿತ್ರವು ಸಸ್ಪೆನ್ಸ್, ಭಾವನೆ ಮತ್ತು ನೈಜ ಚಿತ್ರಣಗಳ ಮಿಶ್ರಣವಾಗಿದೆ" ಎಂದು ಕಿಶೋರ್ ತಮ್ಮ ಮಾತು ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT