ಆ್ಯನಿಮೇಟೆಡ್ ಬಾಹುಬಲಿ ಸ್ಟಿಲ್ 
ಸಿನಿಮಾ ಸುದ್ದಿ

ಅನಿಮೇಟೆಡ್ 'ಬಾಹುಬಲಿ' ಬಿಡುಗಡೆಗೆ ಸಿದ್ಧ; ಒಂದು ಅದ್ಬುತ ಅನುಭವ ಎಂದ ರಾಜಮೌಳಿ

ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಘರ್ಷಣೆ ಉಂಟಾಗುವುದನ್ನು ಇದರಲ್ಲಿ ವೀಕ್ಷಿಸಬಹುದು ಎಂದು ನಿರ್ದೇಶಕ ರಾಜಮೌಳಿ ತಿಳಿಸಿದರು.

ಹೈದರಾಬಾದ್: 'ಬಾಹುಬಲಿ' ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ ನಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು, ಈ ವಿಷಯವನ್ನು ಸ್ವತಃ ನಿರ್ದೇಶಕ ರಾಜಮೌಳಿ ಹಂಚಿಕೊಂಡಿದ್ದಾರೆ.

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಬಾಹುಬಲಿ ಕ್ರೌನ್ ಆಫ್ ಬ್ಲಡ್ ನಿರ್ಮಾಣವಾಗಿದ್ದು, ನಿರ್ದೇಶಕ ಎಸ್.ಎಸ್.ರಾಜಮೌಳಿ-ಶರದ್‌ ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುವ ಈ ಯೋಜನೆಗೆ ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

ಈ ವಿಷಯವನ್ನು ಹಂಚಿಕೊಂಡು ಮಾತನಾಡಿದ ರಾಜಮೌಳಿ, ನಾವು ಬಹುಬಲಿ ಜಗತ್ತನ್ನು ವಿಸ್ತರಿಸುವ ಕಥೆಯನ್ನು ರಚಿಸಿದ್ದೇವೆ. ಮಾಹಿಷ್ಮತಿಯ ಯೋಧರು ತಮ್ಮ ತಾಯ್ನಾಡನ್ನು ಉಳಿಸಲು ಒಂದಾದಾಗ ಸಾಮ್ರಾಜ್ಯಗಳ ನಡುವೆ ಮಹಾ ಘರ್ಷಣೆ ಉಂಟಾಗುವುದನ್ನು ಇದರಲ್ಲಿ ವೀಕ್ಷಿಸಬಹುದು ಎಂದು ತಿಳಿಸಿದರು.

ತಂಡದೊಂದಿಗೆ ಎಸ್.ಎಸ್.ರಾಜಮೌಳಿ

ಬಾಹುಬಲಿಯನ್ನು ಸೃಷ್ಟಿಸಿದ ಹೈದರಾಬಾದ್, ಎಂದಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಹಳೆಯ ಕಾಲದ ಅನಿಮೇಷನ್ ಚಿತ್ರ ನಿರ್ಮಾಣಕ್ಕೆ ಇವರೆಲ್ಲರ ಉತ್ಸಾಹ ಸಮರ್ಪಣೆಗಳೇ ಸ್ಪೂರ್ತಿಯಾಗಿದೆ ಎಂದು ರಾಜಮೌಳಿ ತಿಳಿಸಿದರು.

ಈ ಸಂದರ್ಭದಲ್ಲಿ ಬರಹಗಾರ ಮತ್ತು ನಿರ್ಮಾಪಕ ಶರದ್‌ ದೇವರಾಜನ್, ಡಿಸ್ನಿ ಹಾಟ್‌ಸ್ಟಾರ್, ಹೆಚ್‌ಎಸ್‌ಎಂ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ ಗೌರವ್ ಬ್ಯಾನರ್ಜಿ, ನಟ ಹಾಗೂ ಅನಿಮೇಟೆಡ್‌ಗೆ ಧ್ವನಿ ನೀಡಿರುವ ಶರದ್‌ಕೇಳ್ಕರ್ ಉಪಸ್ತಿತರಿದ್ದು, ತಂತಮ್ಮ ಅನುಭವಗಳನ್ನು ಹಂಚಿಕೊಂಡರು. ಅನಿಮೇಟೆಡ್‌ದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ದ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿದೆ.

ಇಂತಹ ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್ ಕನ್ನಡ ಸೇರಿದಂತೆ, ಎಲ್ಲಾ ಭಾಷೆಗಳಲ್ಲಿ ಮೇ 17,2024ರಿಂದ ಡಿಸ್ನಿ+ಹಾಟ್‌ಸ್ಟಾರ್‌ದಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 160 ಬಾಂಗ್ಲಾದೇಶಿಗರ ಗಡೀಪಾರು!

'ಈ ದೇಶವನ್ನು ದೇವರೇ ಕಾಪಾಡಬೇಕು; 5 ಗಂಟೆಯ ಪ್ರಯಾಣ ನರಕ': ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!

ಲೇಟ್ ಆದರೂ, ಸರಿಯಾದ ನಿರ್ಧಾರ: ರಾಜ್ಯ BJP ಉಸ್ತುವಾರಿ ರಾಧಾ ಮೋಹನದಾಸ್ ಬದಲಾವಣೆಗೆ 2 ಕಾರಣ ನೀಡಿದ ಯತ್ನಾಳ್

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ನಿತ್ಯ 4,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ; CM ಡಿಕೆಶಿ ಹೇಳಿದ್ದೇನು?