ನಟಿ ಜ್ಯೋತಿ ರೈ 
ಸಿನಿಮಾ ಸುದ್ದಿ

ಖಾಸಗಿ ವಿಡಿಯೋ ಲೀಕ್ ನೋವು ನಡುವೆ Akshaya Tritiya ದಿನ ಪದ್ಮಶ್ರೀ ಪುರಸ್ಕೃತನಿಗೆ ನಟಿ ಜ್ಯೋತಿ ರೈ ನೆರವು!

ತೆಲುಗಿನ ಗುಪ್ಪೆಡಂತ ಮನಸು ಧಾರಾವಾಹಿ ಮೂಲಕ ಜನಪ್ರಿಯರಾದ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಂಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತೆಲುಗಿನ ಗುಪ್ಪೆಡಂತ ಮನಸು ಧಾರಾವಾಹಿ ಮೂಲಕ ಜನಪ್ರಿಯರಾದ ಕಿರುತೆರೆ ನಟಿ ಜ್ಯೋತಿ ರೈ ಇದೀಗ ಸಂಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಂಕಷ್ಟದಲ್ಲಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದರ್ಶನಂ ಮೊಗಿಲಯ್ಯ ಅವರಿಗೆ ರೂ. 50 ಸಾವಿರ ಆರ್ಥಿಕ ನೆರವು ನೀಡಿದ್ದಾರೆ. ಅಕ್ಷಯ ತೃತೀಯದಂದು ಅವರು ತಮ್ಮ ತಂಡದ ಮೂಲಕ ಮೊಗಿಲಿಯವರನ್ನು ಭೇಟಿಯಾಗಿ ರೂ. 50 ಸಾವಿರ ನಗದು ಹಣ ನೀಡಿದರು.

ನನಗೂ ಈಗ ಒಂದಿಷ್ಟು ಕಷ್ಟಗಳು ಎದುರಾಗುತ್ತಿವೆ. ತನ್ನ ಕಷ್ಟಕ್ಕಿಂತ ಮೊಗಿಲಯ್ಯನ ಸ್ಥಿತಿಯೇ ಹೆಚ್ಚು ಕಾಡುತ್ತಿದೆ ಎಂದು ಜ್ಯೋತಿ ರೈ ಹೇಳಿದ್ದಾರೆ. ತೆಲಂಗಾಣದ ಕಿನ್ನೇರ ಕಲಾವಿದ ದರ್ಶನಂ ಮೊಗಿಲಯ್ಯ ಕೂಲಿ ಕೆಲಸ ಮಾಡಿ ಕುಟುಂಬಕ್ಕೆ ಆಸರೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮೊಗಿಲಯ್ಯರವರಿಗೆ ರಾಜ್ಯ ಸರ್ಕಾರ ಗೌರವಧನ ಸಹ ನಿಲ್ಲಿಸಿತ್ತು. ಹೀಗಾಗಿ ಅವರಿಗೆ ಜೀವನ ನಡೆಸುವುದು ಕಷ್ಟವಾಗಿತ್ತು.

ಜ್ಯೋತಿ ರೈ ಅವರ ನಿರ್ಧಾರದಿಂದ ಎಲ್ಲರೂ ಸಂತಸಗೊಂಡಿದ್ದಾರೆ. ನೆಟ್ಟಿಗರು ಆಕೆಯ ಮಹಾನ್ ಮನಸ್ಸನ್ನು ಶ್ಲಾಘಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ವೈಯಕ್ತಿಕ ವಿಚಾರದಿಂದ ಜ್ಯೋತಿ ರೈ ಸುದ್ದಿಯಲ್ಲಿರುವುದು ಗೊತ್ತೇ ಇದೆ. ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮ ಖಾತೆಯ ಪೋಸ್ಟ್‌ನಲ್ಲಿ ನಟಿಯ ವೈಯಕ್ತಿಕ ವೀಡಿಯೊ ಲೀಕ್ ಮಾಡಿದ್ದನ್ನು. ಅಲ್ಲದೆ ಹಣ ಕಳುಹಿಸಿದರೆ ವೀಡಿಯೊವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದನು. ಇದು ನಟಿಯನ್ನು ತೀವ್ರವಾಗಿ ಬಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್