ಕೃಷ್ಣ-ಶಶಾಂಕ್ 
ಸಿನಿಮಾ ಸುದ್ದಿ

'ಥ್ರಿಲ್ಲರ್' ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿರುವ ಕೃಷ್ಣ- ಶಶಾಂಕ್!

'ಕೌಸಲ್ಯ ಸುಪ್ರಜಾ ರಾಮಾ' ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೊಸ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.

'ಕೌಸಲ್ಯ ಸುಪ್ರಜಾ ರಾಮಾ' ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೊಸ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.

ಕೌಸಲ್ಯ ಸುಪ್ರಜಾ ರಾಮಾ (2023) ಒಂದು ಅಭೂತಪೂರ್ವ ಕೌಟುಂಬಿಕ ಚಿತ್ರವಾಗಿತ್ತು. ನಾಗಭೂಷಣ್ ಜೊತೆಗೆ ಮಿಲನಾ ನಾಗರಾಜ್ ಮತ್ತು ಬೃಂದಾ ಆಚಾರ್ಯ ಅವರು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಿತ್ರಕ್ಕೆ ಪ್ರೇಕ್ಷಕರಿಗೆ ಮನಸೋತಿದ್ದರು.

ಆದರೆ, ಈ ಬಾರಿ ನಿರ್ದೇಶಕರು ಕೃಷ್ಣ ಅವರಿಗಾಗಿ ಥ್ರಿಲ್ಲಿಂಗ್ ಚಿತ್ರ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ಸ್ಕ್ರಿಪ್ಟ್ ರಚಿಸುತ್ತಿರುವ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಹೊಸದಾಗಿ ತೋರಿಸುವ ಗುರಿ ಹೊಂದಿದ್ದಾರೆ. ಈ ಸುದ್ದಿಯನ್ನು ಶಶಾಂಕ್ ಖಚಿತಪಡಿಸಿದ್ದಾರೆ. ಈ ಬಾರಿ ಥ್ರಿಲ್ಲರ್‌ ಚಿತ್ರಕ್ಕಾಗಿ “ಕೃಷ್ಣ ಮತ್ತು ನಾನು ಮತ್ತೆ ಒಂದಾಗುತ್ತಿದ್ದೇವೆ. ನಿರ್ದೇಶಕನಾಗಿ ನನಗೆ ಮತ್ತು ನಟನಾಗಿ ಕೃಷ್ಣನಿಗೆ ಇದು ಹೊಸ ಪರಿಕಲ್ಪನೆ. ಇದು ನಟನ ಹಿಂದೆಂದೂ ನೋಡಿರದ ಭಾಗವನ್ನು ಅನಾವರಣಗೊಳಿಸುವ ಭರವಸೆ ನೀಡುತ್ತದೆ ಎಂದು ಹೇಳಿದರು.

ಈ ಮಧ್ಯೆ , ಕೃಷ್ಣ ಆರ್‌ಸಿ ಸ್ಟುಡಿಯೋಸ್ ನಿರ್ಮಿಸಿರುವ ಫಾದರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಸಹ ನಟಿಸಿದ್ದಾರೆ. ಜುಲೈನಲ್ಲಿ ಫಾದರ್ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಶಶಾಂಕ್ ಅವರ ಚಿತ್ರಕ್ಕೆ ಧುಮುಕಲಿದ್ದಾರೆ, ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!