ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಕುರಿತು ನೆಗೆಟಿವ್ ವಿಮರ್ಶೆ ಮೂಲಕ ಭಾರೀ ವೈರಲ್ ಆಗಿದ್ದ ಕನ್ನಡದ ರೀಲ್ಸ್ ಸ್ಟಾರ್ ಸುಧಾಕರ್ ಸಂಕಷ್ಟ ಎದುರಾಗಿದೆ.
ನೆಗೆಟಿವ್ ವಿಮರ್ಶೆ ಮಾಡಿದ್ದ ಸುಧಾಕರ್ ವಿರುದ್ಧ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ಡಿಲೀಟ್ ಸಹ ಮಾಡಿಸಿದ್ದರು. ಮಾರ್ಟಿನ್ ಚಿತ್ರದ ಕುರಿತಂತೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಸುಧಾಕರ್ ಮಾತ್ರ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದರು.
ಆದರೆ ಮಾದನಾಯಕನ ಹಳ್ಳಿ ಪೊಲೀಸರು ರೀಲ್ಸ್ ಸ್ಟಾರ್ ಸುಧಾಕರ್ ನನ್ನು ಹಲ್ಲೆ ಪ್ರಕರಣ ಸಂಬಂಧ ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಹೌದು, ಹಲ್ಲೆ ಪ್ರಕರಣ ಒಂದರಲ್ಲಿ ಸುಧಾಕರ್ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರೆಂಟ್ ಸಹ ಜಾರಿಯಾಗಿತ್ತು. ಇದೇ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಾರ್ಟಿನ್ ಸಿನಿಮಾದ ನೆಗೆಟಿವ್ ವಿಮರ್ಶೆ ಸಂಬಂಧ ಧ್ರುವ ಅಭಿಮಾನಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಠಾಣೆಗೆ ಕರೆಸಿದ್ದ ಪೊಲೀಸರು ಕ್ಷಮಾಪಣೆ ಪತ್ರ ಬರೆಸಿಕೊಂಡು ವಿಡಿಯೋ ಡಿಲೀಟ್ ಮಾಡಿಸಿ ಕಳುಹಿಸಿದ್ದರು.