ದೀಪಿಕಾ ದಾಸ್ 
ಸಿನಿಮಾ ಸುದ್ದಿ

'ಪಾರು ಪಾರ್ವತಿ' ಪಾತ್ರವು ನನ್ನ ಜೀವನದೊಂದಿಗೆ ಹೊಂದಿಕೊಳ್ಳುತ್ತದೆ: ಕಮ್ ಬ್ಯಾಕ್ ಸಿನಿಮಾ ಬಗ್ಗೆ ದೀಪಿಕಾ ಮಾತು

ವಿವಾಹದ ನಂತರ ವಯಕ್ತಿಕ ಬದುಕಿನ ಕಡೆಗೆ ಗಮನಹರಿಸಿದ್ದ ದೀಪಿಕಾ ದಾಸ್ ಕಮ್ ಬ್ಯಾಕ್ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಬಹಳ ದಿನಗಳ ನಂತರ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ.

ನಾಗಿಣಿ, ಬಿಗ್ ಬಾಸ್ ನಂತರ ಕಿರುತೆರೆ ಕಾರ್ಯಕ್ರಮಗಳಿಂ ಹೆಸರುವಾಸಿಯಾಗಿದ್ದ ನಟಿ ದೀಪಿಕಾ ದಾಸ್ ಮದುವೆಯ ನಂತರ ಇದೀಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಮದುವೆ ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಪಾರು ಪಾರ್ವತಿ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ.

ವಿವಾಹದ ನಂತರ ವಯಕ್ತಿಕ ಬದುಕಿನ ಕಡೆಗೆ ಗಮನಹರಿಸಿದ್ದ ದೀಪಿಕಾ ದಾಸ್ ಕಮ್ ಬ್ಯಾಕ್ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಬಹಳ ದಿನಗಳ ನಂತರ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ. ‘ಪಾರು ಪಾರ್ವತಿ’ ಎಂಬ ಸಿನಿಮಾದಲ್ಲಿ ದೀಪಿಕಾ ದಾಸ್ ನಾಯಕಿಯಾಗಿದ್ದಾರೆ. ಅಡ್ವೆಂಚರಸ್ ಕುರಿತಾದ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ದೀಪಿಕಾ ದಾಸ್, ಪಾರು ಪಾರ್ವತಿ ಕೇವಲ ಸಿನಿಮಾವಲ್ಲ, ಇದು ನಮ್ಮ ಜೀವನದಲ್ಲಿ ಸಮಯದ ದ್ವಂದ್ವವನ್ನು ಅನ್ವೇಷಿಸುವ ಭೂತ ಮತ್ತು ವರ್ತಮಾನವನ್ನು ಹೆಣೆದುಕೊಂಡಿರುವ ಸಾಹಸಮಯ ಪ್ರಯಾಣ ಎಂದು ವಿವರಿಸಿದ್ದಾರೆ. ಚಿತ್ರದಲ್ಲಿನ ಪಾಯಲ್ ಪಾತ್ರವು ನನ್ನ ವಯಕ್ತಿಕ ಜೀವನದ ಜೊತೆ ಆಳವಾದ ಸಂಬಂಧ ಹೊಂದಿದೆ. ಇದು ನನ್ನ ಸ್ವಂತ ಜೀವನದ ಅಂಶಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಈ ಪಾತ್ರಕ್ಕೆ ನಾನು ಜೀವ ತುಂಬುತ್ತೇನೆ ಎಂದು ದೀಪಿಕಾ ದಾಸ್ ತಿಳಿಸಿದ್ದಾರೆ.

‘ಪಾರು ಪಾರ್ವತಿ’ ಸಿನಿಮಾದಲ್ಲಿ ಪಾಯಲ್ ಅನ್ನೋ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಈ ಪಾತ್ರಕ್ಕಾಗಿ ತೂಕವನ್ನು ಕೂಡ ಕಡಿಮೆ ಮಾಡಿಕೊಂಡಿದ್ದಾರೆ. ಜೊತೆಗೆ ಕೂದಲಿಗೂ ಕತ್ತರಿ ಹಾಕಿದ್ದಾರೆ. ಅಂದಹಾಗೆ, ದೀಪಿಕಾ ಅವರು ರಿಯಲ್ ಲೈಫ್‌ನಲ್ಲಿ ಜಾಸ್ತಿ ಪ್ರವಾಸ ಮಾಡುತ್ತಾರೆ. ಈ ಸಿನಿಮಾದಲ್ಲೂ ಅವರಿಗೆ ಟ್ರಾವೆಲ್ ಮಾಡುವ ಹುಡುಗಿಯ ಪಾತ್ರವೇ ಸಿಕ್ಕಿದೆ. ತಾನು ಇಲ್ಲಿಯವರೆಗೆ ಸುಮಾರು ಹತ್ತು ದೇಶಗಳಿಗೆ ಪ್ರಯಾಣಿಸಿದ್ದೇನೆ, ಎಲ್ಲಾ 198 ರಾಷ್ಟ್ರಗಳಿಗೆ ಭೇಟಿ ನೀಡುವುದು ನನ್ನ ಕನಸು ಎಂದು ದೀಪಿಕಾ ಬಹಿರಂಗಪಡಿಸಿದ್ದಾರೆ. "ಪಾರು ಪಾರ್ವತಿಯಲ್ಲಿ ನಾನು ನಿರ್ವಹಿಸುವ ಪಾತ್ರವು ನನ್ನ ಸ್ವಂತ ಜೀವನದೊಂದಿಗೆ ಅನೇಕ ಹೋಲಿಕೆಗಳನ್ನು ಹಂಚಿಕೊಳ್ಳುತ್ತದೆ, ವಿಶೇಷವಾಗಿ ಅವರ ಸಾಹಸ ಮನೋಭಾವ ಮತ್ತು ವಿವಿಧ ದೇಶಗಳ ಪ್ರಯಾಣ ಮಾಡುವುದು ಅವರಿಗೆ ಇಷ್ಟವಾದ ವಿಷಯವಾಗಿದೆ. ಕಮ್ ಬ್ಯಾಕ್ ಗೆ ತಯಾರಿ ನಡೆಸುತ್ತಿರುವ ದೀಪಿಕಾ ದಾಸ್ ಕೂಡ ಹೊಸ ಕಥೆಗಳಿಗೆ ಹುಡಾಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT