ಹಿರಿಯ ನಟ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಸೆಟ್ಟೇರಿದೆ. ಗೌರಿ ಹಬ್ಬದ ಶುಭ ದಿನದಂದು ಮುಹೂರ್ತ ನೆರವೇರಿದೆ.
ರಮೇಶ್ ಅರವಿಂದ್ ಹಾಗೂ ಗಣೇಶ್ ಸಂಗಮದ ಹೊಸ ಸಿನಿಮಾಗೆ Your’s sincerely ರಾಮ್ ಎಂಬ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದ್ದು, ಬಹಳ ಇಂಪ್ರೆಸಿವ್ ಆಗಿ ಮೂಡಿಬಂದಿದೆ. ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ನಡಿ ಸತ್ಯ ರಾಯಲ Your’s sincerely ರಾಮ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಇಬ್ಬರ ನಡುವಿನ ಸಂಬಂಧ ಬೇರೆ ರೀತಿಯ ಫೀಲ್ ಕೊಡುತ್ತದೆ, ಬೇರೆ ಪ್ರಪಂಚಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುವಂತಹ ಕಥೆ ಇದು. ಪ್ರತೀ ಸೀನ್, ಸ್ಕ್ರೀನ್ ಪ್ಲೇ ಉತ್ತಮವಾಗಿರಲಿದೆ. ರಮೇಶ್ ಸರ್ ಜೊತೆ ಸಿನಿಮಾ ಮಾಡುತ್ತಿರುವುದು ಬಹಳ ಖುಷಿ ಕೊಟ್ಟಿದೆ. ರಮೇಶ್ ಸರ್ ಅದ್ಭುತ ನಟ. ವಿಖ್ಯಾತ್ ಫ್ಯಾಷನೇಟೆಡ್ ಡೈರೆಕ್ಟರ್. ನಿರ್ಮಾಪಕ ಸತ್ಯ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು. 1990 ರ ದಶಕದ ಯುದ್ಧ-ತರಹದ ಸನ್ನಿವೇಶವನ್ನು ಕಾಣಬಹುದು, ಭಾರೀ ಭದ್ರತೆಯ ಮಿಲಿಟರಿ ವಲಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ದೃಶ್ಯಗಳು ಕಂಡುಬರುತ್ತವೆ. ಇಬ್ಬರು ನಟರ ಪಾತ್ರಗಳು ಶಾಂತಿಯ ನಾಯಕರನ್ನು ಸಂಕೇತಿಸುತ್ತವೆ, ಪ್ರೀತಿ, ಏಕತೆ ಮತ್ತು ಸಹೋದರತ್ವದ ಸಂದೇಶವನ್ನು ತಿಳಿಸುತ್ತವೆ.
ನಟ ರಮೇಶ್ ಅರವಿಂದ್ ಮಾತನಾಡಿ, ವಿಖ್ಯಾತ್ ಪರಿಚಯ ಆಗಿದ್ದು 9 ವರ್ಷಗಳ ಹಿಂದೆ. ಪುಷ್ಪಕ ವಿಮಾನ ಕಥೆಯನ್ನು ಮೊದಲು ಹೇಳಲು ಬಂದರು. ಅಂದಿನಿಂದ ಇಂದಿನವರೆಗೂ ನೋಡಿಕೊಂಡು ಬರುತ್ತಿದ್ದೇನೆ ಇವನಿಗೆ ಇರುವ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಅವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್ ಗಳಲ್ಲಿ ಸೂಕ್ಷ್ಮ ಮನೋಭಾವವಿದೆ. ಅವರು ನಿರ್ದೇಶನ ಮಾಡುತ್ತಿರುವುದು ಖುಷಿ. ಇದು ನಿಮ್ಮ ಮೊದಲ ಪಯಣ. . ಗಣೇಶ್ ನನ್ನ ಕಾಂಬೋ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ. ನಮಗೂ ಅಷ್ಟೇ ಖುಷಿ ಕೊಡುತ್ತದೆ ಎಂದಿದ್ದಾರೆ.
ಸಿನಿಮಾ ಚಿತ್ರೀಕರಣವು ಈ ತಿಂಗಳು ಪ್ರಾರಂಭವಾಗಲಿದೆ, ದಕ್ಷಿಣ ಭಾರತದ ಜನಪ್ರಿಯ ಕಲಾವಿದೆಯನ್ನು ನಾಯಕಿಯಾಗಿ ಮಾಡಲು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಸದ್ಯದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇದೆ.
ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ , ಪ್ರಶಾಂತ್ ರಾಜಪ್ಪ , ಯದುನಂದನ್ ಹಾಗೂ ಸಚಿನ್ ಸಂಭಾಷಣೆ ಚಿತ್ರಕ್ಕಿದೆ. ಆಡಿಯೊ ಹಕ್ಕುಗಳು ಆನಂದ್ ಆಡಿಯೊಗೆ ದಾಖಲೆ ಬೆಲೆಗೆ ಮಾರಾಟವಾಗಿದೆ.