ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 45 ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಇದ್ದಾರೆ. ಆದರೆ, ಇವರ ಲುಕ್‌ಗಳಲ್ಲಿ ಸದ್ಯ ಎರಡು ಲುಕ್ ರಿವೀಲ್ ಆಗಿವೆ.
ಉಪೇಂದ್ರ ಜನ್ಮ ದಿನಕ್ಕೆ ಉಪ್ಪಿಯ ಮಸ್ತ್ ಲುಕ್ ರಿಲೀಸ್ ಆಗಿದೆ. 45 ಸಿನಿಮಾದ ಲುಕ್ ಸೂಪರ್ ಆಗಿದೆ. ಸಖತ್ ಸ್ಟೈಲಿಶ್ ಕೂಡ ಆಗಿದೆ. ಕೈಯಲ್ಲಿ ಸಿಗಾರ್ ಇದೆ. ಲುಕ್ ಅಲ್ಲಿ ಬೆಂಕಿ ಇದೆ. ಲಾಂಗ್ ಹೇರ್ ಸ್ಟೈಲ್ . ಕೈಗಳಲ್ಲಿ ವಿಶೇಷ ರಿಂಗ್ ಇವೆ. ಕಣ್ಣಿಗೆ ಕೂಲಿಂಗ್ ಗ್ಲಾಸ್ ಕೂಡ ಇದೆ. ಧರಿಸಿರೋ ಡ್ರೆಸ್ ಕೂಡ ಸ್ಪೆಷಲ್ ಫೀಲ್ ಕೊಡುತ್ತವೆ. ಟೋಟಲ್ ಆಗಿ ಉಪ್ಪಿಯ ಯೋಚನೆಗೆ ತಕ್ಕನಾಗಿಯೇ ಡೈರೆಕ್ಟರ್ ಅರ್ಜುನ್ ಜನ್ಯ ಈ ಒಂದು ಕ್ಯಾರೆಕ್ಟರ್ ಡಿಸೈನ್ ಮಾಡಿದ್ದಾರೆ. ಇದು ಉಪ್ಪಿಯ ಸ್ಪೆಷಲ್ ದಿನವೇ ರಿಲೀಸ್ ಆಗಿದೆ. ಅಂದ್ರೆ, ಉಪ್ಪಿಯ ಜನ್ಮ ದಿನಕ್ಕೇನೆ ಈ ಒಂದು ಲುಕ್ ರಿವೀಲ್ ಆಗಿದೆ. ಮೋಷನ್ ಪೋಸ್ಟರ್ ಕೂಡ ಹೊರ ಬಂದಿದೆ.
ಉಪೇಂದ್ರ ಜನ್ಮ ದಿನಕ್ಕೇನೆ ಡೈರೆಕ್ಟರ್ ಅರ್ಜುನ್ ಜನ್ಯ ಈ ಒಂದು ಲುಕ್ ರಿವೀಲ್ ಮಾಡಿದ್ದಾರೆ. ಆದರೆ, ಈ ಸಿನಿಮಾದ ಕ್ಯಾರೆಕ್ಟರ್‌ಗಳ ಬಗ್ಗೆ ಅರ್ಜುನ್ ಜನ್ಯ ಎಲ್ಲೂ ಏನೂ ಬಿಟ್ಟುಕೊಟ್ಟಿಲ್ಲ. 45 ಸಿನಿಮಾದಲ್ಲಿ ಆಸಕ್ತಿದಾಯಕ ತಾರಾಗಣವಿದೆ. ಕೌಸ್ತುಭ ಮಣಿ ನಾಯಕಿಯಾಗಿ ನಟಿಸಿದ್ದಾರೆ. ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಟ ಉಪೇಂದ್ರ ಮನೆಗೆ ತೆರಳಿದ್ದ ಚಿತ್ರತಂಡ ಶುಭಾಶಯ ತಿಳಿಸಿದೆ. ಚಿತ್ರದ ಪ್ರಮುಖ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಜಿಗಣಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಎರಡು ಎಕರೆ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮುಂದಿನ 40 ದಿನ ಶೂಟಿಂಗ್ ನಡೆಯಲಿದೆ. ಹೆಸರಾಂತ ಸ್ಟಂಟ್ ಮಾಸ್ಟರ್ ರವಿವರ್ಮ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. 100 ಫೈಟರ್‌ಗಳಿದ್ದಾರೆ.