ಮ್ಯಾಕ್ಸ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಯಾವ ಭಿನ್ನಾಭಿಪ್ರಾಯಗಳೂ ಇಲ್ಲ: 'ಮ್ಯಾಕ್ಸ್' ಬಿಡುಗಡೆ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟನೆ

ನಿರ್ಮಾಪಕ ಕಲೈಪುಲಿ ಥಾನು ಮತ್ತು ನಟ ಸುದೀಪ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಚಿತ್ರ ಬಿಡುಗಡೆ ತಡವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವದಂತಿಯನ್ನು ಸುದೀಪ್ ನಿರಾಕರಿಸಿದ್ದಾರೆ.

ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಬಿಡುಗಡೆ ವಿಳಂಬವಾಗಿದ್ದು, ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಈ ನಡುವೆ ನಿರ್ಮಾಪಕ ಕಲೈಪುಲಿ ಥಾನು ಮತ್ತು ನಟ ಸುದೀಪ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಚಿತ್ರ ಬಿಡುಗಡೆ ತಡವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವದಂತಿಯನ್ನು ಸುದೀಪ್ ಅವರು ನಿರಾಕರಿಸಿದ್ದಾರೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದ್ದಾರೆ,

ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ಸಿನಿಮಾ ಪೂರ್ಣಗೊಳಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.

ಚಿತ್ರ ನಿರ್ಮಾಣ ಸಂಸ್ಥೆ ತಮಿಳುನಾಡಿನಲ್ಲಿದ್ದು, ಅಲ್ಲಿ ಸಾಕಷ್ಟು ಸವಾಲುಗಳಿವೆ. ನಮ್ಮಿಂದಾಗಬೇಕಿದ್ದ ಎಲ್ಲಾ ಕೆಲಸವೂ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲೆಡೆ ಬಿಡುಗಡೆ ಮಾಡಬೇಕಿದ್ದು, ಸಮಯ ತೆಗೆದುಕೊಳ್ಳುತ್ತಿದ್ದಾರೆ. ನಾವು ಅದನ್ನು ಗೌರವಿಸಬೇಕು. ಒಮ್ಮ ಚಿತ್ರ ಬಿಡುಗಡೆಯಾದರೆ, ಅದರ ಲಾಭ ಎಲ್ಲರಿಗೂ ಕಾಣಿಸುತ್ತದೆ ಎಂದು ತಿಳಿಸಿದ್ದಾರೆ.

ಮ್ಯಾಕ್ಸ್ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆರಂಭದಲ್ಲಿ ಚಿತ್ರ ಗಣೇಶ ಹಬ್ಬದಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿತ್ತು. ನಂತರ ಸೆಪ್ಟೆಂಬರ್ 27ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಚಿತ್ರ ತಂಡ ಇನ್ನೂ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.

‘ಮ್ಯಾಕ್ಸ್‌’ ಸುದೀಪ್‌ ನಟನೆಯ 46ನೇ ಸಿನಿಮಾವಾಗಿದ್ದು, ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ. ಸುದೀಪ್‌ ಜೊತೆಗೆ ‘ಪುಷ್ಪ’ ಖ್ಯಾತಿಯ ಸುನೀಲ್‌, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಶರತ್‌ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮುಂತಾದವರ ಪಾತ್ರದ ತುಣುಕುಗಳನ್ನು ಟೀಸರ್‌ ಹೊಂದಿದೆ. ಮ್ಯಾಕ್ಸ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!