'ರಾವಣ ರಾಜ್ಯದಲ್ಲಿ ನವದಂಪತಿಗಳು' ಚಿತ್ರಕ್ಕೆ ಯುವ ಪ್ರತಿಭೆ ರಂಗಾ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಮೂಲಕ ಸ್ಯಾಂಡಲ್'ವುಡ್'ಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರದಲ್ಲಿ ನಿಧಿ ಹೆಗಡೆ ಮತ್ತು ಅರುಣ್ ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಚಿತ್ರ ಬಿಡುಗಡೆಗೆ ಚಿತ್ರತಂಡ ಸಜ್ಜಾಗುತ್ತಿದ್ದು, ಪ್ರಮೋಷನ್ ಕಾರ್ಯದಲ್ಲಿ ಬಿಝಿಯಾಗಿದೆ. ಚಿತ್ರಕ್ಕೆ ಬಿಡುಗಡೆ ಕಾರ್ಯಕ್ಕೆ ಕನ್ನಡ ಫಿಲ್ಮಿ ಕ್ಲಬ್ ಕೂಡ ಸಾಥ್ ನೀಡುತ್ತಿದೆ.
ರಾವಣ ರಾಜ್ಯದಲ್ಲಿ ನವದಂಪತಿಗಳು ಚಿತ್ರ ಸಾಮಾಜಿಕ ವಿಡಂಬನಾತ್ಮಕ ನಾಟಕವನ್ನು ಹೊಂದಿದ್ದು, ಗದ್ದಲದ ನಗರದಲ್ಲಿ ಮಧ್ಯಮ ವರ್ಗದ ಜೀವನ ಹೇಗಿರುತ್ತದೆ ಮತ್ತು ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳಾಗಿದೆ.
ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್ ಹಾಗೂ ಧೀರಜ್ ಎಂವಿ ಫಿಲ್ಮಂಸ್ ನಡಿ ಚಿತ್ರ ನಿರ್ಮಾಣವಾಗಿದೆ. ಧೀರಜ್ ಹಾಗೂ ವರುಣ್ ಗುರುರಾಜ್ ಸಾಹಸಕ್ಕೆ ಶಂಕರ್ ಗುರು ನಿರ್ಮಾಪರಾಗಿ ಬೆಂಬಲ ನೀಡಿದ್ದಾರೆ.
ಚಿತ್ರಕ್ಕೆ ಅಭಿನಂದನ್ ಕಶ್ಯಪ್ ಮ್ಯೂಸಿಕ್ ಹಾಗೂ ಸೌಂಡ್ ಡಿಸೈನ್, ವೀರೇಶ್ ಎನ್ ಟಿಎ ಕ್ಯಾಮೆರಾ ಹಿಡಿದಿದ್ದು, ವಸಂತ ಸಂಕಲನ ಚಿತ್ರಕ್ಕಿದೆ.