ಈ ಹಿಂದೆ 'ರಾನಿ' ಚಿತ್ರದಲ್ಲಿ ಭರವಸೆ ಮೂಡಿಸಿದ್ದ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ನಟ ಕಿರಣ್ ರಾಜ್ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಈ ಬಾರಿ ಕಿರಣ್ ರಾಜ್ ಅವರು 'ಜಾಕಿ' ಗಾಗಿ ಹೊಸ ಆವತಾರದಲ್ಲಿ ಕಾಣಿಸಿಕೊಂಡಿದ್ದು, ಕುದುರೆ ಏರಿ ಗಮನ ಸೆಳೆದಿದೆ.
ರಾನಿಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಈ ಚಿತ್ರದಲ್ಲೂ ಕೆಲಸ ಮಾಡುತ್ತಿದೆ. ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದು, ಸತೀಶ್ ಕಲಾ ನಿರ್ದೇಶನ ಮತ್ತು ಆರ್.ಬಿ. ಉಮೇಶ್ ಸಂಕಲನ ಚಿತ್ರಕ್ಕಿದೆ.
ಗೋಲ್ಡನ್ ಗೇಟ್ ಸ್ಟುಡಿಯೋಸ್‌ನ ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ್ 'ಜಾಕಿ 42'' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುದುರೆ ರೇಸಿಂಗ್ ಕುರಿತು ಇದೊಂದು ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ.
ಬೆಂಗಳೂರು, ಮೈಸೂರು ಮತ್ತು ವಿದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಮತ್ತು ಪೋಸ್ಟರ್ ಈಗಾಗಲೇ ಗಮನ ಸೆಳೆದಿದೆ. ಕಿರಣ್ ರಾಜ್ ಜಾಕಿಯಾಗಿ ಕುದುರೆ ಮೇಲೆರಿದ್ದು, ಕುದುರೆಯ ಕಾಲು ಕೆಳಗೆ ಹಣದ ಕಂತೆಯೊಂದಿಗೆ ಪರಿಣಾಮಕಾರಿಯಾಗಿ ರೇಸಿಂಗ್ ಟೈಟಲ್ ತೋರಿಸಲಾಗಿದೆ.
ಆಕ್ಷನ್, ರೊಮಾನ್ಸ್, ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಹಾಸ್ಯ ಎಲ್ಲಾವನ್ನೂ ಚಿತ್ರ ಒಳಗೊಂಡಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಭರವಸೆ ನೀಡಿದ್ದಾರೆ. ಮೇ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.