ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ  
ಸಿನಿಮಾ ಸುದ್ದಿ

ನನಗೂ ಒಬ್ಬ ಗೆಳೆಯ ಬೇಕು! ನಾನ್ಯಾಕೆ 2ನೇ ಮದುವೆಯಾಗಿಲ್ಲ ಅಂದರೆ...: ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವೈರಲ್

2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್​​ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್.

ಟಾಲಿವುಡ್ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಅವರು ತಾವ್ಯಾಕೆ 2ನೇ ಮದುವೆಯಾಗಿಲ್ಲ ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್​​ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್. ವಿಚ್ಛೇದನದ ನಂತರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸಿ ಮಕ್ಕಳ ಕಡೆ ತಮ್ಮ ಸಂಪೂರ್ಣ ಗಮನ ನೀಡಿದರು. ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿ ನಾನು 2ನೇ ಮದುವೆ ಆಗದಂತೆ ತಡೆಯುತ್ತಿದೆ ಎಂದಿದ್ದಾರೆ.

ಆದರೆ ಈಗ ಅವರ ಹೇಳಿಕೆಯೊಂದು ವೈರಲ್ ಆಗಿದೆ. ಮಗಳಿಗೆ 18 ವರ್ಷ ತುಂಬುವುದನ್ನು ಕಾಯುತ್ತಿದ್ದೇನೆ. ಮಗಳಿಗೆ 18 ವರ್ಷದವಾದರೆ ಮದುವೆಯಾಗುತ್ತೇನೆ. ನನಗೂ ಬಾಯ್​ಫ್ರೆಂಡ್ ಬೇಕು ಎಂದು ಹೇಳಿರುವ ಮಾತು ಎಲ್ಲೆಡೆ ವೈರಲ್ ಆಗಿದೆ.

ಡಿವೋರ್ಸ್ ನಂತರ ಪವನ್ ಕಲ್ಯಾಣ್ ಅವರು 2013 ರಲ್ಲಿ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಆದರೆ ರೇಣು ಮರುಮದುವೆಯಾಗಲು ನಿರ್ಧರಿಸಲಿಲ್ಲ. ನಿಖಿಲ್ ವಿಜಯೇಂದ್ರ ಸಿಂಹ ಪಾಡ್‌ಕ್ಯಾಸ್ಟ್‌ನಲ್ಲಿ ನಡೆದ ನೇರ ಸಂಭಾಷಣೆಯಲ್ಲಿ ನಟಿ ತಾನು ಏಕೆ ಒಂಟಿಯಾಗಿ ಉಳಿದಿದ್ದಾರೆ.

ನಿಮ್ಮ ಜೀವನವನ್ನು ಹಂಚಿಕೊಳ್ಳಲು ಸಂಗಾತಿಯ ಅಗತ್ಯವಿದೆಯೇ ಎಂದು ರೇಣು ಕೇಳಿದಾಗ, "ಖಂಡಿತ, ನನಗೂ ಒಬ್ಬ ಸಂಗಾತಿ ಬೇಕು ಅನಿಸುತ್ತದೆ. ಆದರೆ ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿಯ ಪ್ರಜ್ಞೆಯೇ ನನ್ನನ್ನು ಹಾಗೆ ಮಾಡದಂತೆ ತಡೆಯುತ್ತದೆ ಎಂದು ಹೇಳಿದ್ದಾರೆ. ನಾನು ಮರು ಮದುವೆ ಎಂಬ ವಿಷಯವನ್ನು ಪ್ರತ್ಯೇಕವಾಗಿ ನೋಡಿದರೆ, ಹೌದು, ನನಗೆ ಒಬ್ಬ ಗೆಳೆಯ ಇರಬೇಕು. ನನಗೆ ಮದುವೆ ಆಗಬೇಕು, ನನಗೆ ಒಂದು ಜೀವನ ಇರಬೇಕು. ಆದರೆ ನಾನು ಅದನ್ನು ಮಕ್ಕಳ ದೃಷ್ಟಿಕೋನದಿಂದ ನೋಡಿದಾಗ ಇದು ಬದಲಾಗುತ್ತದೆ ಎಂದಿದ್ದಾರೆ.

ಅವರು 2018 ರ ನಿಶ್ಚಿತಾರ್ಥದ ಬ್ರೇಕಪ್ ಬಗ್ಗೆಯೂ ಮಾತನಾಡಿದರು. ನಾನು ಮತ್ತೆ ಮದುವೆಯಾಗಲು ಪ್ರಯತ್ನಿಸಿದೆ. ನಾನು ನಿಶ್ಚಿತಾರ್ಥ ಮಾಡಿಕೊಂಡೆ. ಅದು ಒಂದು ವ್ಯವಸ್ಥಿತ ವಿಷಯವಾಗಿತ್ತು. ಆದರೆ ಮದುವೆಯಾದರೆ ಆ ಹೊಸ ಸಂಬಂಧಕ್ಕೆ ಅಥವಾ ಮಕ್ಕಳಿಗೆ ನಾನು ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.

ಈ ಜೋಡಿ 2009 ರಲ್ಲಿ ವಿವಾಹವಾದರು. 2004 ರಲ್ಲಿ ಅಕಿರಾ ನಂದನ್ ಮತ್ತು 2010 ರಲ್ಲಿ ಆದ್ಯಾ ಎಂಬ ಇಬ್ಬರು ಮಕ್ಕಳನ್ನು ಪಡೆದರು. ನಂತರ 2011 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2012 ರಲ್ಲಿ ಡಿವೋರ್ಸ್ ಫೈನಲ್ ಆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT