ನಾನು ಮತ್ತು ಗುಂಡ- 2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ರಾಕೇಶ್ ಅಡಿಗ ನಟನೆಯ 'ನಾನು ಮತ್ತು ಗುಂಡ- 2' ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜು

ಮೂಲ ಚಿತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ನಟಿಸಿದ್ದ ಪಾತ್ರದ ಮಗನಾಗಿ ರಾಕೇಶ್ ನಟಿಸಿದ್ದಾರೆ. ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ಪ್ರೇಕ್ಷಕರನ್ನು ಸೆಳೆದಿದ್ದ ಮನುಷ್ಯ ಮತ್ತು ನಾಯಿ ನಡುವಿನ ಆಳವಾದ ಬಾಂಧವ್ಯದ ಕಥೆಯನ್ನು ಒಳಗೊಂಡಿದ್ದ 'ನಾನು ಮತ್ತು ಗುಂಡ' ಚಿತ್ರ ಇದೀಗ ಹೊಸ ರೂಪದಲ್ಲಿ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದೆ. ಚಿತ್ರದ ಸೀಕ್ವೆಲ್ 'ನಾನು ಮತ್ತು ಗುಂಡ- 2' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ, ಸಿಂಬು (ನಾಲ್ಕು ದಿನಗಳ ಚಿತ್ರೀಕರಣದ ನಂತರ ನಿಧನ ಹೊಂದಿದ ನಾಯಿ) ಅವರ ಮಗ ಸಿಂಬಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಅದರೊಂದಿಗೆ ಮತ್ತೊಬ್ಬ ಸಹನಟ ಬಂಟಿ ಕೂಡ ಸೇರಿಕೊಂಡಿದ್ದು, ಈ ಭಾವಪೂರ್ಣ ಕಥೆಗೆ ಇನ್ನಷ್ಟು ಮೋಡಿ ಮಾಡಿದೆ.

ರಘು ಹಾಸನ್ ನಿರ್ದೇಶನ ಮತ್ತು ನಿರ್ಮಾಣದ ಈ ಸೀಕ್ವೆಲ್‌ನಲ್ಲಿ ರಾಕೇಶ್ ಅಡಿಗ ನಾಯಕನಾಗಿ ನಟಿಸಿದ್ದಾರೆ. ಮೂಲ ಚಿತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ನಟಿಸಿದ್ದರು. ಆ ಪಾತ್ರದ ಮಗನಾಗಿ ರಾಕೇಶ್ ನಟಿಸಿದ್ದಾರೆ. ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 'ಮೊದಲ ಭಾಗದ ಚಿತ್ರದ ಸಮಯದಲ್ಲೇ ನಾವು ಸೀಕ್ವೆಲ್ ಕಥೆಯನ್ನು ಸಿದ್ಧಪಡಿಸಿದ್ದೆವು. ಚಿತ್ರವು ಭಾವನೆ, ದೈವಿಕ ವಿಚಾರಗಳು ಮತ್ತು ಸಂದೇಶವನ್ನು ಮಿಶ್ರಣ ಮಾಡುತ್ತದೆ' ಎಂದು ರಘು ಬಹಿರಂಗಪಡಿಸಿದರು.

ಊಟಿ, ತೀರ್ಥಹಳ್ಳಿ ಮತ್ತು ಶಿವಮೊಗ್ಗದಂತಹ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರವು ಮೇ ತಿಂಗಳಲ್ಲಿ ಕನ್ನಡ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೈಲಜಾ ಕಿರಗಂದೂರು ಅವರು ಟೀಸರ್ ಬಿಡುಗಡೆ ಮಾಡಿ, ತಂಡಕ್ಕೆ ಶುಭಕೋರಿದರು.

ಚಿತ್ರಕ್ಕೆ ಆರ್‌ಪಿ ಪಟ್ನಾಯಕ್ ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ಆರು ಹಾಡುಗಳಿವೆ. ರೋಹಿತ್ ರಾಮನ್ ಮತ್ತು ವಿ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಜೊತೆಗೆ ರಿತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT