ಕುಲದಲ್ಲಿ ಕೀಳ್ಯಾವುದೋ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಡೇನೂರು ಮನು ನಟನೆಯ 'ಕುಲದಲ್ಲಿ ಕೀಳ್ಯಾವುದೋ' ಬಿಡುಗಡೆಗೆ ದಿನಾಂಕ ಘೋಷಣೆ

ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಅವರು ಸಂಗೀತ ಸಂಯೋಜಿಸಿದ್ದು, ಅವರಿಗೂ ಈ ಹಾಡು ಇಷ್ಟವಾಗಿದೆ.

ನಿರ್ದೇಶಕ ಯೋಗರಾಜ್ ಭಟ್ ಕಥೆ ಬರೆದಿರುವ ಮತ್ತು ಕೆ ರಾಮ್ ನಾರಾಯಣ್ ನಿರ್ದೇಶನದ 'ಕುಲದಲ್ಲಿ ಕೀಳ್ಯಾವುದೋ' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಮೇ 23ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಡೆನೂರು ಮನು ಹಾಗೂ 'ರಾಮಾಚಾರಿ' ಧಾರಾವಾಹಿ ನಟಿ ಮೌನಾ ಗುಡ್ಡೇಮನೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ಮನೋಮೂರ್ತಿ ಅವರು ಸಂಗೀತ ಸಂಯೋಜಿಸಿದ್ದು, ಅವರಿಗೂ ಈ ಹಾಡು ಇಷ್ಟವಾಗಿದೆ. ಚೇತನ್ ಸೋಸ್ಕಾ ಹಾಡಿರುವ ಈ ಹಾಡಿನಲ್ಲಿ ಸ್ವತಃ ಯೋಗರಾಜ್ ಭಟ್ ಅವರೇ ಅಭಿನಯಿಸಿದ್ದಾರೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯೋಗರಾಜ್ ಭಟ್, ಹಾಡನ್ನು ಬಿಡುಗಡೆ ಮಾಡಿದ ಸಾಲುಮರದ ತಿಮ್ಮಕ್ಕ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಶೀರ್ಷಿಕೆಯು ಡಾ. ರಾಜ್‌ಕುಮಾರ್ ಅವರ ಚಿತ್ರದ ಹಾಡಿನ ಸಾಲಾಗಿದೆ. ನಾನು ಈ ಹಾಡಿನಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿನ ಅಭಿನಯ ಮತ್ತು ತಾಂತ್ರಿಕ ಕೆಲಸದಿಂದ ವಿಶೇಷವಾಗಿ ಗ್ರಾಮೀಣ ಭಾಗದ ನಟ ಮಡೇನೂರು ಮನು ಅವರ ಪ್ರತಿಭೆಯಿಂದ ನಾನು ಪ್ರಭಾವಿತನಾಗಿದ್ದೇನೆ.

ಚಿತ್ರದ ಪ್ರಮುಖ ಪಾತ್ರಕ್ಕಾಗಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ನಿರ್ಮಾಪಕರಾದ ಸಂತೋಷ್ ಕುಮಾರ್, ವಿದ್ಯಾ ಮತ್ತು ಯೋಗರಾಜ್ ಭಟ್ ಅವರಿಗೆ ಮಡೇನೂರ್ ಮನು ಧನ್ಯವಾದಗಳನ್ನು ಅರ್ಪಿಸಿದರು. ನಿರ್ದೇಶಕ ರಾಮನಾರಾಯಣ್ ಅವರ ಕೊಡುಗೆಯನ್ನು ವಿವರಿಸಲು ಪದಗಳು ಸಾಲದು ಎಂದು ಹೇಳಿದರು.

ಚಿತ್ರದ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ತಬಲ ನಾಣಿ, ಸೋನಲ್ ಮೊಂತೇರೋ, ಕರಿಸುಬ್ಬು, ಡ್ರ್ಯಾಗನ್ ಮಂಜು ಮತ್ತು ಸೀನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಗಳಿಗೆ 613 ಕೋಟಿ ರೂ. ಬಾಡಿಗೆ; ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು ಹೀಗಿವೆ

ಬಾಗಲಕೋಟೆ: ಕಟ್ಟೆ ಹೊಡೆದ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು; 100ಕ್ಕೂ ಹೆಚ್ಚು ಟ್ರಾಲಿಗಳಿಗೆ ಬೆಂಕಿ, Video!

ಬೆಳಗಾವಿಯಲ್ಲಿ ನಕಲಿ ಕಾಲ್ ಸೆಂಟರ್ ಪತ್ತೆ; ಅಮೆರಿಕ ಪ್ರಜೆಗಳಿಗೆ ವಂಚಿಸಿದ 33 ಜನರ ಬಂಧನ

ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಅನುಮಾನಾಸ್ಪದ ಕಾರು ಪತ್ತೆ: ತನಿಖೆ

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

SCROLL FOR NEXT