ನಟಿ ರಮ್ಯಾ ದರ್ಶನ್ ಅಭಿಮಾನಿಗಳ ಅಶ್ಲೀಲ ಕಮೆಂಟ್ಗಳ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದು ಇದರ ಬೆನ್ನಲ್ಲೇ ಇನ್ಸ್ಟಾಗ್ರಾಂ ಕ್ರಿಯೇಟರ್, ಮಾಡೆಲ್ ಆಗಿರುವ ಸೋನು ಶೆಟ್ಟಿ ದರ್ಶನ್ ಅಭಿಮಾನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಶನ್ ಅಭಿಮಾನಿಗಳು ತನಗೂ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆಂದು ಆರೋಪಿಸಿದ್ದಾರೆ. ದರ್ಶನ್ ಅಭಿಮಾನಿಗಳು ಮಾಡಿರುವ ಕೆಟ್ಟ ಸಂದೇಶಗಳನ್ನು ತೋರಿಸಿದ ಸೋನು ದರ್ಶನ್ ಅಭಿಮಾನಿಗಳನ್ನು ಕೊಳಚೆಗೆ ಹೋಲಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದೇ ಸಮಸ್ಯೆಯಾಗಿದೆ. ನಟನ ರೀತಿಯ ಅವರ ಅಭಿಮಾನಿಗಳು ಇದ್ದಾರೆ. ಅವರಿಗೆ ಬುದ್ದಿ ಕಲಿಬೇಕು ಎಂದು ಈ ಹಿಂದೆ ಸೋನು ಶೆಟ್ಟಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಅವರ ಕಮೆಂಟ್ ಬಾಕ್ಸ್ ಹಾಗೂ ಇನ್ಸ್ಟಾಗ್ರಾಮ್ ಇನ್ಬಾಕ್ಸ್ನಲ್ಲಿ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಹಾಗೂ ಬೆದರಿಕೆ ಒಡ್ಡುವ ಸಂದೇಶ ಕಳುಹಿಸುತ್ತಿದ್ದಾರೆ.