ಸುಮಂತ್ ಭಟ್ - ಶೈನ್ ಶೆಟ್ಟಿ 
ಸಿನಿಮಾ ಸುದ್ದಿ

ಮಿಥ್ಯ ನಿರ್ದೇಶಕ ಸುಮಂತ್ ಭಟ್ ಜೊತೆ ಹೊಸ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಸಜ್ಜು!

ಈ ಜೋಡಿ ಈ ಹಿಂದೆ ಏಕಂ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿತ್ತು ಮತ್ತು ಈ ಮುಂಬರುವ ಯೋಜನೆಯು ಅವರ ಎರಡನೇ ಚಿತ್ರವಾಗಿದೆ.

ಕಿರುತೆರೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ಖ್ಯಾತಿ ಗಳಿಸಿದ ಶೈನ್ ಶೆಟ್ಟಿ, ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಬಿಗ್ ಬಾಸ್ ಕನ್ನಡ (2020) ವಿಜೇತ ಶೈನ್ ಶೆಟ್ಟಿ ಕಾಂತಾರ ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಬಿ ಸಿಆರ್ ನಿರ್ದೇಶನದ ಜಸ್ಟ್ ಮ್ಯಾರೀಡ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ಶೈನ್ ನಾಯಕನಾಗಿ ನಟಿಸಿರುವ ಈ ಚಿತ್ರ ಆಗಸ್ಟ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಳಿಕ ಸೆಪ್ಟೆಂಬರ್ 12 ರಂದು ಸುರಾಗ್ ಸಾಗರ್ ನಿರ್ದೇಶನದ ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರವೂ ಬಿಡುಗಡೆಯಾಗಲಿದೆ.

ಇದರ ಹೊರತಾಗಿ ಮಿಥ್ಯ ಚಿತ್ರದ ಖ್ಯಾತಿಯ ನಿರ್ದೇಶಕ ಸುಮಂತ್ ಭಟ್ ಅವರೊಂದಿಗೆ ಹೊಸ ಯೋಜನೆಗಾಗಿ ಮಾತುಕತೆ ನಡೆಸುತ್ತಿದ್ದಾರೆ. ಈ ಜೋಡಿ ಈ ಹಿಂದೆ ಏಕಂ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿತ್ತು ಮತ್ತು ಈ ಮುಂಬರುವ ಯೋಜನೆಯು ಅವರ ಎರಡನೇ ಚಿತ್ರವಾಗಿದೆ.

'ನಾವು ಸ್ವಲ್ಪ ಸಮಯದಿಂದ ಈ ಕುರಿತಾದ ಚರ್ಚೆಯಲ್ಲಿ ತೊಡಗಿದ್ದೇವೆ. ಈ ಯೋಜನೆ ಆರಂಭಿಕ ಹಂತದಲ್ಲಿದೆ ಮತ್ತು ನಾವು ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದೇವೆ' ಎಂದು ಶೈನ್ ಶೆಟ್ಟಿ ಹೇಳುತ್ತಾರೆ.

ಸುಮಂತ್ ಅವರೊಂದಿಗಿನ ಸಹಯೋಗದ ಬಗ್ಗೆ ಮಾತನಾಡುತ್ತಾ, 'ನಾನು ಮಿಥ್ಯ ಚಿತ್ರವನ್ನು ನೋಡಿದ್ದೇನೆ ಮತ್ತು ಈಗಾಗಲೇ ಅವರೊಂದಿಗೆ ಏಕಂನಲ್ಲಿ ಕೆಲಸ ಮಾಡಿದ್ದರಿಂದ, ಅವರ ಶೈಲಿ ನನಗೆ ಇಷ್ಟವಾಯಿತು. ನಟರಾಗಿ, ನಾವು ಆಗಾಗ್ಗೆ ಕೆಲವು ನಿರ್ದೇಶಕರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತೇವೆ ಮತ್ತು ಮಿಥ್ಯ ನೋಡಿದ ನಂತರ, ನಾನು ಅವರೊಂದಿಗೆ ಮತ್ತೆ ಕೆಲಸ ಮಾಡಲು ಉತ್ಸುಕನಾಗಿದ್ದೆ. ಅದೃಷ್ಟವಶಾತ್, ನಾವಿಬ್ಬರೂ ಮತ್ತೆ ಜೊತೆಗೂಡಲು ಬಯಸಿದ್ದೆವು' ಎನ್ನುತ್ತಾರೆ ಶೈನ್.

ಸುಮಂತ್ ಭಟ್ ಅವರು ಯಾವ ರೀತಿಯ ಚಿತ್ರವನ್ನು ಮಾಡುತ್ತಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. 'ಯಾವ ಪ್ರಕಾರದ ಚಿತ್ರ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಸುಮಂತ್ ಈಗ ಹೆಸರುವಾಸಿಯಾಗಿರುವ ಕಥೆ ಹೇಳುವ ಶೈಲಿಯಿಂದ ಹೊರಬರಲು ಪ್ರಯತ್ನಿಸುತ್ತಾರೆ. ನಾವು ಬಹಳ ಸಮಯದಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದೇವೆ ಮತ್ತು ನಾನು ನನ್ನ ಸದ್ಯದ ಜವಾಬ್ದಾರಿಗಳನ್ನು ಮುಗಿಸಿದ ನಂತರ, ಮುಂದಿನ ಹೆಜ್ಜೆ ಇಡಲು ಯೋಜಿಸಿದ್ದೇವೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT