ಡೆವಿಲ್ ಚಿತ್ರದಲ್ಲಿ ನಟ ದರ್ಶನ್ 
ಸಿನಿಮಾ ಸುದ್ದಿ

ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ; 'ಡೆವಿಲ್' ಚಿತ್ರದ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಕೊನೆಗೂ ಬಿಡುಗಡೆಗೆ ಸಿದ್ಧ

'ತಾರಕ್' ಚಿತ್ರದ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಮತ್ತೆ ಒಂದಾಗಿದ್ದು, ಚಿತ್ರ ಘೋಷಣೆಯಾದಾಗಿನಿಂದಲೂ ಭಾರಿ ಸುದ್ದಿ ಮಾಡುತ್ತಿದೆ.

ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗೆ ತೆರಳಿರುವ ದಿ ಡೆವಿಲ್ ಚಿತ್ರತಂಡ ಡಬ್ಬಿಂಗ್ ಪ್ರಕ್ರಿಯೆಯನ್ನು ಸಹ ಮುಗಿಸಿದ್ದಾರೆ. ಗಣೇಶ ಚತುರ್ಥಿಯ ಆಸುಪಾಸಿನಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದೆ.

ಈ ಸ್ವಾತಂತ್ರ್ಯ ದಿನಾಚರಣೆಯಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂಗೀತದ ರಸದೌತಣ ನೀಡಲು ಸಜ್ಜಾಗಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಮತ್ತು ರಚನಾ ರೈ ನಟಿಸಿರುವ ಅವರ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಚಿತ್ರತಂಡ ಮೊದಲ ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಅನ್ನು ಆಗಸ್ಟ್ 15 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

'ತಾರಕ್' ಚಿತ್ರದ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಮತ್ತೆ ಒಂದಾಗಿದ್ದು, ಚಿತ್ರ ಘೋಷಣೆಯಾದಾಗಿನಿಂದಲೂ ಭಾರಿ ಸುದ್ದಿ ಮಾಡುತ್ತಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ.

'ಇದ್ರೆ ನೆಮ್ದಿಯಾಗ್ ಇರ್ಬೇಕ್' ಎಂಬ ಹಾಡು ಬಿಡುಗಡೆಗೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ದಿ ಡೆವಿಲ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.

ಆಗಸ್ಟ್ 15 ರಂದು ಬಿಡುಗಡೆಯಾಗಲಿರುವ ಈ ಹಾಡು ಈಗಾಗಲೇ ದರ್ಶನ್ ಅವರ ಅಭಿಮಾನಿಗಳಲ್ಲಿ ಈಗಾಗಲೇ ಮಹತ್ವ ಪಡೆದುಕೊಂಡಿದೆ. ದರ್ಶನ್ ಅವರ ಕೊನೆಯ ಚಿತ್ರದ ಕೊನೆಯ ಹಾಡು ಬಿಡುಗಡೆಯಾದ ಸುಮಾರು 20 ತಿಂಗಳ ನಂತರ ಈ ಹಾಡು ಬಿಡುಗಡೆಯಾಗಲಿದೆ. ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಸುಳಿವು ನೀಡಿದ್ದು, ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಬಗ್ಗೆ ಉದ್ಯಮದಲ್ಲಿ ಚರ್ಚೆಗಳು ನಡೆಯುತ್ತಿವೆ.

ಡೆವಿಲ್ ಚಿತ್ರದಲ್ಲಿ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ ಮತ್ತು ವಿನಯ್ ಗೌಡ ಸೇರಿದಂತೆ ಇತರರು ನಟಿಸಿದ್ದಾರೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದ್ದು, ಈ ಹಿಂದೆ ದರ್ಶನ್ ಅವರೊಂದಿಗೆ ರಾಬರ್ಟ್ ಮತ್ತು ಕಾಟೇರಾದಲ್ಲಿ ಕೆಲಸ ಮಾಡಿದ್ದರು.

'ದಿ ಡೆವಿಲ್' ದರ್ಶನ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಿತ್ರಗಳಲ್ಲಿ ಒಂದಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 42 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಓಟಕ್ಕೆ 'ಬಂಡೆ' ಬ್ರೇಕ್! KN ರಾಜಣ್ಣ ಕಮ್ ಬ್ಯಾಕ್?

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

ಸಚಿವ ಸಂಪುಟ ಪುನಾರಚನೆಗೆ ಸಿದ್ದು ಸಿದ್ಧತೆ ಬೆನ್ನಲ್ಲೇ ಹೈಕಮಾಂಡ್ ಭೇಟಿಯಾದ ಡಿಕೆ ಬ್ರದರ್ಸ್: ಚರ್ಚೆ ಕುರಿತು ತೀವ್ರ ಕೂತೂಹಲ

SCROLL FOR NEXT