ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಸದ್ಯ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ 'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಕೀರ್ತಿಯನ್ನು ಹೆಚ್ಚಿಸಿದೆ. ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ. ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವ್ಗನ್ ಅವರ ಮೆಚ್ಚುಗೆಗೂ ಪಾತ್ರವಾಗಿದೆ.
ಈ ಕುರಿತು ನಿರ್ದೇಶಕ ಜೆ.ಪಿ.ತೂಮಿನಾಡು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಜಯ್ ದೇವಗನ್ ಅವರಿಗೆ ನಮ್ಮ ‘ಸು ಫ್ರಮ್ ಸೋ’ ಚಿತ್ರ ತುಂಬಾ ಇಷ್ಟವಾಗಿತ್ತು, ಹೀಗಾಗಿ ಅದರ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದರು. ಮಾತುಕತೆ ವೇಳೆ ಅವರ ಅದ್ಭುತ ವ್ಯಕ್ತಿತ್ವದ ಪರಿಚಯವಾಯಿತು.
ಅವರದ್ದು ನಿಜವಾಗಿಯೂ ಅದ್ಭುತ ವ್ಯಕ್ತಿತ್ವ. ದಿ ಗ್ರೇಟ್ ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ'' ಎಂದು ಬರೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಬರೆದುಕೊಂಡಿದ್ದು, ಅವರ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅಜಯ್ ದೇವಗನ್ ಈ ಚಿತ್ರವನ್ನು ಅದರ ಮೂಲ ಭಾಷೆಯಲ್ಲಿ ವೀಕ್ಷಿಸಿದ್ದಾರೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ. ಯಾವುದೇ ಚಲನಚಿತ್ರ ನಿರ್ಮಾಪಕರು ಈ ಸಿನಿಮಾವನ್ನು ಇಷ್ಟಪಡುತ್ತಾರೆ ಎಂದು ರಾಜ್ ಹೇಳಿದರು.
ಅಜಯ್ ದೇವಗನ್ ಅದನ್ನು ಕನ್ನಡದಲ್ಲಿ ಉಪಶೀರ್ಷಿಕೆಗಳೊಂದಿಗೆ ನೋಡಿದರು. ಕಥಾಹಂದರ, ಕಚಗುಳಿ ಇಡುವ ಡೈಲಾಗ್ಸ್, ಮನರಂಜನೆಗೆ ಹಾಗೂ ಭಾವನಾತ್ಮಕ ಸನ್ನಿವೇಶಗಳ ಬಗ್ಗೆ ಹೊಗಳಿದರು ಎಂದು ಹೇಳಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್ ಅಜಯ್ ದೇವಗನ್ ಸರ್ ಗೆ ಇಷ್ಟವಾಗಿದೆ. ಭಾವನಾತ್ಮಕ ಸನ್ನಿವೇಶ ನನ್ನ ಮನಕಲಕಿತು ಎಂದು ಹೇಳಿದ್ದಾಗಿ ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.
ನಿಮ್ಮಲ್ಲಿ ಆಸಕ್ತಿದಾಯಕವಾದ ಕಥೆ ಏನಾದರೂ ಇದ್ದರೆ, ನೀವು ನನ್ನನ್ನು ಸಂಪರ್ಕ ಸಾಧಿಸಬಹುದು ಹಾಗೂ ನಾವು ಒಟ್ಟಿಗೆ ಕೆಲಸ ಮಾಡಬಹುದು ಎಂದು ಅವರು ನನಗೆ ಹೇಳಿದರು ಎಂದು ರಾಜ್ ಬಿ ಶೆಟ್ಟಿ ಬಹಿರಂಗಪಡಿಸಿದರು.
ಬಾಲಿವುಡ್ ಹೊರತುಪಡಿಸಿ, ದೊಡ್ಡ ನಿರ್ಮಾಣ ಸಂಸ್ಥೆಗಳು ಸೇರಿದಂತೆ ಇತರ ಭಾಷೆಗಳ ಬಹಳಷ್ಟು ಜನರು ಸು ಪ್ರಂ ಸೋ ವೀಕ್ಷಿಸಿದ್ದಾರೆ. ಕರ್ನಾಟಕವನ್ನು ಮೀರಿ ಸಿನಿಮಾ ಜನಪ್ರಿಯತೆ ಗಳಿಸುತ್ತಿದೆ ಎಂದಿದ್ದಾರೆ.
ಜೆ ಪಿ ಥುಮಿನಾಡ್ ನಿರ್ದೇಶನದ 'ಸು ಫ್ರಮ್ ಸೋ' ಚಿತ್ರವು ಚಿತ್ರಮಂದಿರಗಳಲ್ಲಿ ಮೂರನೇ ವಾರಕ್ಕೆ ಕಾಲಿಡುತ್ತಿದೆ, ವಿಶ್ವದಾದ್ಯಂತ 87 ಕೋಟಿಗೂ ಹೆಚ್ಚು ಗಳಿಸಿದೆ. ರಾಜ್ ಬಿ ಶೆಟ್ಟಿ ತಮ್ಮ ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಿದ್ದು, ಜೆಪಿ ತುಮಿನಾಡ್ ನಿರ್ದೇಶನದ ಜೊತೆಗೆ ಅಭಿನಯಿಸಿದ್ದಾರೆ.
ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮ್ದಾಸ್ ತಾರಾಗಣದಲ್ಲಿದ್ದಾರೆ. ಜುಲೈ 25, 2025ರಂದು ಕನ್ನಡದಲ್ಲಿ ಚಿತ್ರಮಂದಿರ ಪ್ರವೇಶಿಸಿದ 'ಸು ಫ್ರಮ್ ಸೋ' ಆಗಸ್ಟ್ 1ರಂದು ಮಲಯಾಳಂನಲ್ಲಿ, ಆಗಸ್ಟ್ 8ರಂದು ತೆಲುಗಿನಲ್ಲಿಯೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.