ನಟಿ ಶ್ವೇತಾ ಮೇನನ್ ಮತ್ತು ಕುಕ್ಕು ಪರಮೇಶ್ವರನ್ 
ಸಿನಿಮಾ ಸುದ್ದಿ

Shwetha Menon ಮಲಯಾಳಂ ಕಲಾವಿದರ ಸಂಘ AMMA ಅಧ್ಯಕ್ಷರಾಗಿ ಆಯ್ಕೆ; ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿ!

ಮಲಯಾಳಂ ಕಲಾವಿದರ ಸಂಘ AMMAದ ಅಧ್ಯಕ್ಷರಾಗಿ ನಟಿ ಶ್ವೇತಾ ಮೇನನ್ (Shwetha Menon) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್ (Kukku Parameswaran) ಆಯ್ಕೆಯಾಗಿದ್ದಾರೆ.

ಕೊಚ್ಚಿನ್: ಮಲಯಾಳಂ ಸಿನಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಲಯಾಳಂ ಕಲಾವಿದರ ಸಂಘದ ಪ್ರಧಾನ ಹುದ್ದೆಗಳಿಗೆ ಮಹಿಳೆಯರು ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.

ಹೌದು.. ಮಲಯಾಳಂ ಕಲಾವಿದರ ಸಂಘ AMMAದ ಅಧ್ಯಕ್ಷರಾಗಿ ನಟಿ ಶ್ವೇತಾ ಮೇನನ್ (Shwetha Menon) ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕುಕ್ಕು ಪರಮೇಶ್ವರನ್ (Kukku Parameswaran) ಆಯ್ಕೆಯಾಗಿದ್ದಾರೆ.

31 ವರ್ಷದ ಸಂಘಟನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಉಣ್ಣಿ ಶಿವಪಾಲ್ ಖಜಾಂಚಿಯಾಗಿ, ಲಕ್ಷ್ಮಿಪ್ರಿಯಾ ಮತ್ತು ಜಯನ್ ಚೆರ್ತಾಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂರು ದಶಕಗಳಷ್ಟು ಹಳೆಯದಾದ ಸಂಘಟನೆಗೆ ಎಂದಿಗೂ ಅಧ್ಯಕ್ಷೆ ಅಥವಾ ಪ್ರಧಾನ ಕಾರ್ಯದರ್ಶಿಯಾಗಿ ಮಹಿಳೆಯರು ಆಯ್ಕೆಯಾಗಿರಲಿಲ್ಲ. ಆದರೂ ಉಪಾಧ್ಯಕ್ಷೆ, ಜಂಟಿ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಹುದ್ದೆಗೆ ಮಹಿಳೆಯರನ್ನು ಮೊದಲೇ ಆಯ್ಕೆ ಮಾಡಲಾಗಿತ್ತು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತನಿಖೆ ಮಾಡಿದ ಕೆ. ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಅದರ ಕೆಲವು ಸದಸ್ಯರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದಿತ್ತುಯ ಈ ಬೆಳವಣಿಗೆ ನಂತರ ನಟ ಮೋಹನ್ ಲಾಲ್ ನೇತೃತ್ವದ ಹಿಂದಿನ ಸಮಿತಿಯು ಆಗಸ್ಟ್ 2024 ರಲ್ಲಿ ರಾಜೀನಾಮೆ ನೀಡಿತ್ತು.

ಹೀಗಾಗಿ ಇಲ್ಲಿ ಚುನಾವಣೆ ಅಗತ್ಯವಾಯಿತು. ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸೇರಿದಂತೆ ಹಿರಿಯ ನಟರು ಸಂಘದಲ್ಲಿ ಪ್ರಮುಖ ಪಾತ್ರಗಳಲ್ಲಿ ಮಹಿಳೆಯರನ್ನು ನೇಮಿಸಬೇಕೆಂಬ ಹೆಚ್ಚುತ್ತಿರುವ ಕೂಗಿಗೆ ಒಪ್ಪಿಕೊಂಡ ನಂತರ ಶ್ವೇತಾ ಮೆನನ್ ಅವರ ಉಮೇದುವಾರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿತು.

ಅಧ್ಯಕ್ಷ ಸ್ಥಾನಕ್ಕೆ ಆರಂಭದಲ್ಲಿ ನಾಮಪತ್ರ ಸಲ್ಲಿಸಿದ್ದ ಹಿರಿಯ ನಟ ಜಗದೀಶ್, ಮಹಿಳಾ ಅಧ್ಯಕ್ಷರಿಗೆ ಬೆಂಬಲ ನೀಡಿದ ನಂತರ ಹಿಂದೆ ಸರಿದರು. ಹೀಗಾಗಿ ಶ್ವೇತಾ ಮೆನನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ನಟಿ ಶ್ವೇತಾ ಮೆನನ್, "ನಾನು ಏನನ್ನೂ ಯೋಜಿಸಿರಲಿಲ್ಲ.. ನನಗೆ ಒಂದು ಕಾರ್ಯಸೂಚಿ ಇದೆ... ಇದು ತುಂಬಾ ದೊಡ್ಡ ವಿಷಯ... ದಯವಿಟ್ಟು ಪವಾಡಗಳನ್ನು ನಿರೀಕ್ಷಿಸಬೇಡಿ, ಆದರೆ ನಾವು ಬದಲಾವಣೆಗಾಗಿ ಏನನ್ನಾದರೂ ಮಾಡುತ್ತೇವೆ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

Ranji Trophy: ಒಂದೂ ರನ್ ನೀಡದೇ 5 ವಿಕೆಟ್.. Amit Shukla ಐತಿಹಾಸಿಕ ದಾಖಲೆ, IPL 2026 ಹರಾಜಿಗೆ ಭರ್ಜರಿ ಸಿದ್ಧತೆ!

ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಸುರೇಶ್ ಕುಮಾರ್; ಅನುಭವ ಹಂಚಿಕೊಂಡ ಬಿಜೆಪಿ ಶಾಸಕ

ಅಂಕೋಲಾ ಬಳಿ ಟ್ಯಾಂಕರ್‌ ಪಲ್ಟಿ; ಮೀಥೇನ್ ಅನಿಲ ಸೋರಿಕೆ, ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ!

SCROLL FOR NEXT