ಎಕ್ಕಾ ಸಿನಿಮಾ ಮೂಲಕ ಹೊಸದಾಗಿ ಆರಂಭವಾದ ಕೆಆರ್‌ಜಿ ಸ್ಟುಡಿಯೋಸ್, ಯುವ ಚಲನಚಿತ್ರ ನಿರ್ಮಾಪಕ ಸಾರ್ಥಕ್ ಹೆಗ್ಡೆ ನಿರ್ದೇಶನದ 50 ನಿಮಿಷಗಳ ' ಗ್ರೀನ್ ಗರ್ಲ್' ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.
ಯುವ ನಿರ್ದೇಶಕ ಸಾರ್ಥಕ್ ಹೆಗ್ಡೆ ಅವರ ‘ಗ್ರೀನ್ ಗರ್ಲ್’ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್ ಬಿಡುಗಡೆ ಮಾಡುತ್ತಿದೆ. ಅಂತರ್ಧರ್ಮೀಯ ಪ್ರೀತಿ, ನೈತಿಕ ಪೊಲೀಸ್‌ಗಿರಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳ ಬಗ್ಗೆ ಕಥೆಯಿರುವ ಈ ಸಿನಿಮಾ, ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಕೆಆರ್‌ಜಿ ಸಂಸ್ಥೆಯ ಬೆಂಬಲದೊಂದಿಗೆ ಈ ಯುವ ಚಿತ್ರತಂಡಕ್ಕೆ ಮತ್ತಷ್ಟು ಉತ್ಸಾಹ ಬಂದಿದೆ.
ಮಯೂರ್ ಗೌಡ, ಸುಚರಿತ, ಸುದರ್ಶನ್ ಯೆಕ್ಕರ್ ಮತ್ತು ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಸಾರ್ಥಕ್ ಹೆಗ್ಡೆ ಜೊತೆಗೆ ಟ್ರಿಕೊ ಮತ್ತು ಮನೀಶ್ ಕುಮಾರ್ ಬರೆದಿರುವ ಗ್ರೀನ್ ಗರ್ಲ್‌ಗೆ ಸೂರ್ಯ ಶ್ರೀನಿ ಸಂಗೀತ ಮತ್ತು ಅಭಿನಯ್ ಪಂಡಿತ್ ಅವರ ಛಾಯಾಗ್ರಹಣವಿದೆ. ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಕೆಲವು ಕಥೆಗಳನ್ನು ಜೋರಾಗಿ ಮತ್ತು ಧೈರ್ಯವಾಗಿ ಹೇಳಬೇಕು. ಕೆಆರ್‌ಜಿ ಸಂಸ್ಥೆ ಯಾವಾಗಲೂ ಯುವ ಪ್ರತಿಭೆಗಳಿಗೆ ಬೆಂಬಲವಾಗಿ ನಿಂತಿದೆ. ಸಾರ್ಥಕ್ ಹೆಗ್ಡೆ ಅವರ ‘ಗ್ರೀನ್ ಗರ್ಲ್’ ಚಿತ್ರವನ್ನು ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ.
ಈ ಚಿತ್ರ ಅಂತರ್ಧರ್ಮೀಯ ಪ್ರೀತಿ ಮತ್ತು ಸಮಾಜದ ಸೂಕ್ಷ್ಮ ವಿಷಯಗಳನ್ನು ಚರ್ಚಿಸುತ್ತದೆ. ಸಾರ್ಥಕ್ ಹೆಗ್ಡೆ ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ, ಸಾರ್ಥಕ್ ಇಂದು ಕನ್ನಡ ಚಿತ್ರರಂಗದ ಅತ್ಯಂತ ಅಸಾಂಪ್ರದಾಯಿಕ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರು, ದೊಡ್ಡ ಪರದೆಯ ಮೇಲೆ ತಮ್ಮ ಸ್ಥಾನವನ್ನು ಪಡೆಯಲು ಸಿದ್ಧವಾಗಿರಬಹುದು ಎಂಬುದನ್ನು ಈ ಸಿನಿಮಾ ಸಾಬೀತುಪಡಿಸುತ್ತದೆ. ಅವರಿಗೆ ಬೆಂಬಲ ನೀಡಲು ನಮಗೆ ಹೆಮ್ಮೆಯಿದೆ ಎಂದು ಕೆಆರ್ ಜಿ ಸಂಸ್ಥೆಯ ಕಾರ್ತಿಕ್ ಗೌಡ ತಿಳಿಸಿದ್ದಾರೆ.
ನಿರ್ದೇಶಕ ಸಾರ್ಥಕ್ ಹೆಗ್ಡೆ ಈ ಬಗ್ಗೆ ಮಾತನಾಡಿ, ಕೆಆರ್‌ಜಿ ಸ್ಟುಡಿಯೋಸ್‌ನಿಂದ ‘ಗ್ರೀನ್ ಗರ್ಲ್’ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಪ್ರೀತಿ, ಧರ್ಮ ಮತ್ತು ದಂಗೆಯಂತಹ ವಿಷಯಗಳನ್ನು ಧೈರ್ಯದಿಂದ ತೆರೆಗೆ ತರುವ ಸಿನಿಮಾಗಳು ಕಡಿಮೆ.
‘ಗ್ರೀನ್ ಗರ್ಲ್’ ಖಂಡಿತವಾಗಿಯೂ ಅಂತಹದ್ದೊಂದು ಚಿತ್ರ ಎಂದು ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜಾತಿ, ಧರ್ಮದಂತಹ ಸೂಕ್ಷ್ಮ ವಿಷಯಗಳನ್ನು ಆಧರಿಸಿ ಸಿನಿಮಾ ನಿರ್ಮಿಸುವುದು ವಿರಳ. ಸಾರ್ಥಕ್ ಹೆಗಡೆ ನಿರ್ದೇಶನದ ಈ ಸಿನಿಮಾದ ಕಥೆ ಮತ್ತು ನಿರೂಪಣೆಯ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಸಿದೆ.