ಮಹಾವತಾರ ನರಸಿಂಹ 
ಸಿನಿಮಾ ಸುದ್ದಿ

ಇತಿಹಾಸ ಬರೆದ Mahavatar Narsimha, 300 ಕೋಟಿ ರೂ ಗಳಿಸಿದ ಭಾರತದ ಮೊಟ್ಟ ಮೊದಲ Animation Movie

ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 5ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರು: ಕನ್ನಡದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಮಹಾವತಾರ ನರಸಿಂಹ ಚಿತ್ರದ ಬಾಕ್ಸಾಫಿಸ್ ಅಬ್ಬರ ಮುಂದುವರೆದಿದ್ದು, ಚಿತ್ರದ ಗಳಿಕೆ 300 ಕೋಟಿ ರೂ ದಾಟಿದೆ.

ಅಶ್ವಿನ್ ಕುಮಾರ್ ನಿರ್ದೇಶನದ ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 5ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕೂಲಿ, ವಾರ್ 2, ಸು ಫ್ರಂ ಸೋ ಚಿತ್ರದ ಬಲಿಷ್ಠ ಪೈಪೋಟಿಯ ಹೊರತಾಗಿಯೂ ಚಿತ್ರವು ತನ್ನ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಆ ಮೂಲಕ ಇದೀಗ ಚಿತ್ರದ ಗಳಿಕೆ ಬರೊಬ್ಬರಿ 300 ಕೋಟಿ ರೂ ದಾಟಿದೆ.

‘ಮಹಾವತಾರ್ ನರಸಿಂಹ’ ಸಿನಿಮಾ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲಮ್ಸ್​ನವರ ಬೆಂಬಲದಿಂದಾಗಿ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದೇಶದೆಲ್ಲೆಡೆ ಪ್ರಮುಖ ನಗರಗಳಲ್ಲಿ ಬಿಡುಗಡೆ ಆಗಿತ್ತು.

ಬಿಡುಗಡೆ ಆಗಿ 31 ದಿನಗಳಲ್ಲೇ ‘ಮಹಾವತಾರ್ ನರಸಿಂಹ’ ಸಿನಿಮಾ 300 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಮಾಡಿದೆ.

ಇತಿಹಾಸ ಬರೆದ ನರಸಿಂಹ

ಇನ್ನು ತೆರೆಕಂಡು ಬ್ಲಾಕ್ ಬಸ್ಟರ್ ಆದ ಕನ್ನಡದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದ್ದ ನರಸಿಂಹ ಚಿತ್ರ ಇದೀಗ ಭಾರತೀಯ ಚಿತ್ರರಂಗದಲ್ಲೇ 300 ಕೋಟಿ ರೂ ಗಳಿಸಿದ ಭಾರತದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೂ ಭಾಜನವಾಗಿದೆ.

ಹಾಲಿವುಡ್ ಚಿತ್ರಗಳಿಗೂ ಪೈಪೋಟಿ

ಭಾರತದ ಇನ್ಯಾವುದೇ ಅನಿಮೇಷನ್ ಸಿನಿಮಾ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಈ ವರೆಗೆ ಗಳಿಕೆ ಮಾಡಿಲ್ಲ. ಭಾರತದ ಅನಿಮೇಷನ್ ಸಿನಿಮಾಗಳು ಮಾತ್ರವೇ ಅಲ್ಲದೆ, ವಿದೇಶದ ಅನಿಮೇಷನ್ ಸಿನಿಮಾಗಳು ಸಹ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ.

ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಆದ ‘ಸ್ಪೈಡರ್​​ಮ್ಯಾನ್’, ‘ಡಾಕ್ಟರ್ ಸ್ಟ್ರೇಂಜ್’, ‘ಥಾರ್’, ‘ಅವತಾರ್’ ಸಿನಿಮಾಗಳೂ ಸಹ ಇಷ್ಟು ದೊಡ್ಡ ಮೊತ್ತದ ಹಣವನ್ನು ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿಲ್ಲ ಎಂಬುದು ಗಮನಾರ್ಹ.

ಹಿಂದೆಯಲ್ಲಿ ನರಸಿಂಹ ಚಿತ್ರವು ಈ ವರೆಗೂ 173 ಕೋಟಿ ರೂ ಗಳಿಕೆ ಕಂಡಿದ್ದು, 4ನೇ ವಾರಾಂತ್ಯದಲ್ಲಿ 8.68 ಕೋಟಿ ರೂ ಗಳಿಕೆ ಕಂಡಿದ್ದು ಆ ಮೂಲಕ ಚಿತ್ರವು ತನ್ನ ಗಳಿಕೆಯನ್ನು ಹಿಂದಿಯಲ್ಲಿ 173 ಕೋಟಿ ರೂಗೆ ಏರಿಕೆ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT