ಸಮಂತಾ ರುತ್ ಪ್ರಭು - ರಾಜ್ ನಿಡಿಮೋರು 
ಸಿನಿಮಾ ಸುದ್ದಿ

ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು!

ವಿವಾಹಕ್ಕಾಗಿ ಭಾನುವಾರ ಸಂಜೆಯೇ ಅವರು ಕೊಯಮತ್ತೂರಿಗೆ ಆಗಮಿಸಿದರು ಎನ್ನಲಾಗಿದೆ.

ಬಹಳ ದಿನಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಸೋಮವಾರ ಬೆಳಿಗ್ಗೆ ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಲಿಂಗ ಭೈರವಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ವಿವಾಹಕ್ಕಾಗಿ ಭಾನುವಾರ ಸಂಜೆಯೇ ಅವರು ಕೊಯಮತ್ತೂರಿಗೆ ಆಗಮಿಸಿದರು ಎನ್ನಲಾಗಿದೆ. ಈ ಜೋಡಿ 2024 ರಿಂದ ರಿಲೇಷನ್‌ಶಿಪ್‌ನಲ್ಲಿದೆ ಎಂದು ವದಂತಿಗಳಿವೆ.

ಈ ಕುರಿತು ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, 🤍01.12.2025🤍 ಎಂದು ಬರೆದುಕೊಂಡಿದ್ದಾರೆ. ಸಮಂತಾ ಪೋಸ್ಟ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವಾರು ಮಂದಿ ಶುಭಾಶಯ ಕೋರಿದ್ದಾರೆ.

ಸಮಂತಾ ರುತ್ ಪ್ರಭು ಆಗ್ಗಾಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಾಜ್ ನಿಡಿಮೋರು ಜೊತೆಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಅವರು ತಮ್ಮ ಸಂಬಂಧವನ್ನು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಲಿಲ್ಲ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು, ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ಮತ್ತು ಸಿಟಾಡೆಲ್: ಹನಿ ಬನ್ನಿಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಮತ್ತು ಇವೆರಡೂ ಪ್ರೈಮ್ ವಿಡಿಯೋ ವೆಬ್ ಸರಣಿಗಳಾಗಿವೆ. ಅಂದಿನಿಂದ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿಬಂದಿದ್ದವು. ಅದಕ್ಕೆ ಇಂಬು ನೀಡುವಂತೆ ಇಬ್ಬರು ಆಗ್ಗಾಗ್ಗೆ ಒಟ್ಟಿಗೆ ಕಾಣಿಕೊಳ್ಳುತ್ತಿದ್ದರು.

ಈ ವರ್ಷದ ಆರಂಭದಲ್ಲಿ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯದ ಹಲವಾರು ಫೋಟೊಗಳನ್ನು ಹಂಚಿಕೊಂಡಾಗ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ರುತ್ ಪ್ರಭು, ಪಿಕಲ್‌ಬಾಲ್ ತಂಡವಾದ ಚೆನ್ನೈ ಸೂಪರ್ ಚಾಂಪ್ಸ್‌ನ ಮಾಲೀಕರಾಗಿದ್ದಾರೆ.

ಇತ್ತೀಚೆಗೆ ಸಮಂತಾ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ ಕೆಲವು ಫೋಟೊಗಳಲ್ಲಿ ರಾಜ್ ನಿಡಿಮೋರು ಇರುವುದು ಕಂಡುಬಂದಿದೆ.

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಇಬ್ಬರಿಗೂ ಇದು ಎರಡನೇ ಮದುವೆ. ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು ಮತ್ತು 2021 ರಲ್ಲಿ ವಿಚ್ಛೇದನ ಪಡೆದರು. ರಾಜ್ ನಿಡಿಮೋರು 2015 ರಲ್ಲಿ ಶ್ಯಾಮಲಿ ದೇ ಅವರನ್ನು ವಿವಾಹವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿಯೇ 'ಅತಿದೊಡ್ಡ ಡ್ರಾಮಾಬಾಜಿ': 'ನಾಟಕ ಬೇಡ' ಎಂದ ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು

ತಂಬಾಕು ಮೇಲಿನ ಅಬಕಾರಿ ಸುಂಕ, ಪಾನ್ ಮಸಾಲ ಮೇಲೆ ದುಪ್ಪಟ್ಟು ಸೆಸ್: ಲೋಕಸಭೆಯಲ್ಲಿ 2 ಮಸೂದೆ ಮಂಡಿಸಿದ ಸೀತಾರಾಮನ್

'ಧಕ್ ಧಕ್ ಬೆಡಗಿ' ರಾಜಕೀಯ ಸೇರ್ತಾರಾ? ಯಾವ ಪಕ್ಷದಿಂದ! ಕೊನೆಗೂ ಮೌನ ಮುರಿದ ಮಾಧುರಿ ದೀಕ್ಷಿತ್!

'ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ರೂ ಬ್ರದರ್ಸ್ ರೀತಿ ಇದ್ದೇವೆ': ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್; Video

ಸಂಸತ್ ಚಳಿಗಾಲದ ಅಧಿವೇಶನ: SIR ಬಗ್ಗೆ ಚರ್ಚೆಗೆ ವಿಪಕ್ಷಗಳ ಪ್ರತಿಭಟನೆ, ಗದ್ದಲ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

SCROLL FOR NEXT