ಸಂಗೀತ್ ಸಾಗರ್  
ಸಿನಿಮಾ ಸುದ್ದಿ

'ಪಾತ್ರಧಾರಿ' ಸಿನಿಮಾ ಶೂಟಿಂಗ್ ವೇಳೆಯೇ ಡೈರೆಕ್ಟರ್ ಸಾವು!

ಚಿತ್ರೀಕರಣದ ವೇಳೆ ಸ್ಯಾಂಡಲ್​ವುಡ್ ನಿರ್ದೇಶಕನಿಗೆ ಹೃದಯಘಾತ ಸಂಭವಿಸಿದೆ. ಸಂಗೀತ್ ಸಾಗರ್ ಎಂಬ ನಿರ್ದೇಶಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ: ಸ್ಯಾಂಡಲ್​ವುಡ್ ನಿರ್ದೇಶಕ ಸಂಗೀತ್ ಸಾಗರ್ ಚಿತ್ರ 'ಪಾತ್ರಧಾರಿ' ಶೂಟಿಂಗ್ ವೇಳೆ ಕೊಪ್ಪದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಚಿತ್ರೀಕರಣದ ವೇಳೆ ಸ್ಯಾಂಡಲ್​ವುಡ್ ನಿರ್ದೇಶಕನಿಗೆ ಹೃದಯಘಾತ ಸಂಭವಿಸಿದೆ. ಸಂಗೀತ್ ಸಾಗರ್ ಎಂಬ ನಿರ್ದೇಶಕ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಪಾತ್ರಧಾರಿ ಎಂಬ ಸಿನಿಮಾ‌ ಮಾಡುತ್ತಿದ್ದ ಸಂಗೀತ್ ಸಾಗರ್ ಶೂಟಿಂಗ್ ಮಾಡುತ್ತಿದ್ದ ವೇಳೆಯೇ ಹೃದಯಾಘಾತ ಸಂಭವಿಸಿದೆ.

ಕೊಪ್ಪ ತಾಲೂಕಿನಲ್ಲಿ ಚಿತ್ರದ ಚಿತ್ರೀಕರಣ ‌ನಡೆಯುತ್ತಿತ್ತು. ಆಕ್ಷನ್ ಹೇಳುವ ವೇಳೆಯೇ‌ ಸಂಗೀತ್ ಸಾಗರ್ ಗೆ ಹೃದಯಘಾತ ಸಂಭವಿಸಿದ್ದು, ತಕ್ಷಣ ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಚಿಕಿತ್ಸೆ ಫಲಿಸದೆ ನಿರ್ದೇಶಕ ಸಂಗೀತ್ ಸಾಗರ್ ನಿಧನರಾಗಿದ್ದಾರೆ.

ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್‌ ಹೇಳಿದ್ದರು. ಆ ವೇಳಗಾಗಲೇ ಸುಸ್ತಾಗಿ ಸಂಗೀತ್‌ ಸಾಗರ್‌ ಕುಸಿದಿದ್ದರು. ಎಂಟಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಇವರು ನಿರ್ದೇಶಿಸಿದ್ದರು. ಇವರು ಸಕಲೇಶಪುರದ ದೊಡ್ಡನಾಗರ ಮೂಲದವರು. 20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ನಾಳೆ ಕುಂಬಳಕಾಯಿ ಶಾಸ್ತ್ರ ಮಾಡಿ ಕೊನೆಯ ಚಿತ್ರೀಕರಣ ಮಾಡಬೇಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!