ರಿಲೀಸ್ ಆಗಿರುವ ಪೋಸ್ಟರ್ 
ಸಿನಿಮಾ ಸುದ್ದಿ

Toxic ಸಿನಿಮಾ ಕುರಿತು ರಾಕಿಂಗ್ ಸ್ಟಾರ್ ಯಶ್ Big update: ಚಿತ್ರ ರಿಲೀಸ್'ಗೆ ಜಸ್ಟ್ 100 ದಿನ ಬಾಕಿ..!

ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್​​ಟಬ್​​​ನಲ್ಲಿ ಕೂತಿರುವುದು, ಆ ಬಾತ್​​ ಟಬ್​​​ನ ಅಂಚುಗಳಲ್ಲಿ ರಕ್ತ ಇರವುದು, ಬಾತ್ ಟಬ್‌ನಿಂದಲೇ ವ್ಯಕ್ತಿ ಕಿಟಕಿ ಹೊರಗೆ ನೋಡುತ್ತಿರುವುದು ಕಂಡುಬಂದಿದೆ.

ಟಾಕ್ಸಿಕ್ ಚಿತ್ರದ ಯಾವುದೇ ಅಪ್‌ಡೇಟ್ ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ, ಇದೀಗ ಸಿನಿಮಾ ಕುರಿತು ರಾಕಿಂಗ್ ಸ್ಟಾರ್ ಯಶ್ ಅವರು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸಿರು ಯಶ್ ಅವರು, ಚಿತ್ರ ಬಿಡುಗಡೆಗೆ ಇನ್ನು ಕೇವಲ 100 ದಿನಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಚಿತ್ರ ತಂಡ ಕೂಡ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್​​ಟಬ್​​​ನಲ್ಲಿ ಕೂತಿರುವುದು, ಆ ಬಾತ್​​ ಟಬ್​​​ನ ಅಂಚುಗಳಲ್ಲಿ ರಕ್ತ ಇರವುದು, ಬಾತ್ ಟಬ್‌ನಿಂದಲೇ ವ್ಯಕ್ತಿ ಕಿಟಕಿ ಹೊರಗೆ ನೋಡುತ್ತಿರುವುದು, ಬೆನ್ನಿನ ಮೇಲೆ ಟ್ಯಾಟೂ ಇರುವುದು ಕಂಡು ಬಂದಿದೆ.

ಈ ಪೋಸ್ಟರ್ ಹಂಚಿಕೊಂಡಿರುವ ನಟ ಯಶ್, ‘ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಪೋಸ್ಟರ್​​ನಲ್ಲಿಯೂ ಸಹ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನಗಳಷ್ಟೆ ಬಾಕಿ ಇದೆ ಎಂದು ತಿಳಿಸಲಾಗಿದೆ. ಬಿಡುಗಡೆ ಆಗಿರುವ ಪೋಸ್ಟರ್ ಆಸಕ್ತಿಕರವಾಗಿದ್ದು, ಹಾಲಿವುಡ್ ಸಿನಿಮಾಗಳ ಫೀಲ್ ನೀಡುತ್ತಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್​​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕರ್ನಾಟಕದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಮೂವರು ಪುತ್ರರು ಭಾಗಿ: ಆದರೆ ಸರ್ವೋಚ್ಛ ನಾಯಕ ಮೊಜ್ತಾಬಾ ಗೈರು, ಹಲವು ಅನುಮಾನ!

ನಿರ್ಣಾಯಕ ಘಟ್ಟಕ್ಕೆ ಟಿಎಂಸಿ ಮೇಲಿನ ಅಧಿಕಾರದ ಹೋರಾಟ: ಜು.06 ರಂದು ಉಭಯ ಬಣಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ; ದಾಖಲೆ ಸಲ್ಲಿಕೆ

ರಾಮಮಂದಿರದಲ್ಲಿದ್ದ 5 ಕೋಟಿ ರೂ. ಮೌಲ್ಯದ ಚಿನ್ನಲೇಪಿತ 'ರಾಮಚರಿತ ಮಾನಸ' ನಾಪತ್ತೆ: ಮಾಜಿ ಐಎಎಸ್ ಅಧಿಕಾರಿ ಹೇಳಿಕೆ ಕೋಲಾಹಲ

2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ, ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ- MLC ತಿಪ್ಪಣ್ಣಪ್ಪ ಕಮಕನೂರು!

ರಸಗೊಬ್ಬರ ಹೊತ್ತ 15 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿವೆ: ಕೇಂದ್ರ ಸರ್ಕಾರ ಮಾಹಿತಿ