ಕಾಂತಾರದಲ್ಲಿ ರಿಷಭ್ ಶೆಟ್ಟಿ - ದೈವವನ್ನು ಅನುಕರಿಸಿದ ರಣವೀರ್ ಸಿಂಗ್ 
ಸಿನಿಮಾ ಸುದ್ದಿ

ವೇದಿಕೆಗಳಲ್ಲಿ 'ದೈವದ ಅಪಹಾಸ್ಯ' ಮಾಡುವುದನ್ನು ನೋಡುವುದು ನನಗೆ ತುಂಬಾ ಕಷ್ಟ: ರಿಷಬ್ ಶೆಟ್ಟಿ

ರಣವೀರ್ ಸಿಂಗ್ ಅವರ ಅನುಕರಣೆಯನ್ನು ಉಲ್ಲೇಖಿಸದೆ, ಅಂತಹ ಚಿತ್ರಣಗಳನ್ನು ನೋಡುವುದು ತನಗೆ ಅನಾನುಕೂಲವನ್ನುಂಟುಮಾಡುತ್ತದೆ ಎಂದು ಬಿಹೈಂಡ್‌ವುಡ್ಸ್ ಕಾರ್ಯಕ್ರಮದಲ್ಲಿ ರಿಷಬ್ ಹೇಳಿದರು.

ಇತ್ತೀಚೆಗೆ, ಕಾಂತಾರ ಚಿತ್ರದಲ್ಲಿನ 'ದೈವ'ವನ್ನು ಅನುಕರಿಸಲು ಹೋಗಿ ಅಣಕಿಸಿದಂತಾಗಿದ್ದಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಟೀಕೆಗೆ ಗುರಿಯಾಗಿದ್ದರು ಮತ್ತು ಆ ಪಾತ್ರವನ್ನು 'ಸ್ತ್ರೀ ದೆವ್ವ' ಎಂದು ಕರೆದಿದ್ದರು. ಅದು ವಿವಾದಕ್ಕೆ ತಿರುಗುತ್ತಿದ್ದಂತೆ ಕ್ಷಮೆಯಾಚಿಸಿದ್ದರು. ಇತ್ತೀಚೆಗೆ, ಕಾಂತಾರ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಆ ಘಟನೆ ಕುರಿತು ಮಾತನಾಡಿದ್ದಾರೆ.

ರಣವೀರ್ ಸಿಂಗ್ ಅವರ ಅನುಕರಣೆಯನ್ನು ಉಲ್ಲೇಖಿಸದೆ, ಅಂತಹ ಚಿತ್ರಣಗಳನ್ನು ನೋಡುವುದು ತನಗೆ ಅನಾನುಕೂಲವನ್ನುಂಟುಮಾಡುತ್ತದೆ ಎಂದು ಬಿಹೈಂಡ್‌ವುಡ್ಸ್ ಕಾರ್ಯಕ್ರಮದಲ್ಲಿ ರಿಷಬ್ ಹೇಳಿದರು.

'ನಾನು ದೇವರಲ್ಲಿ ಬಲವಾದ ನಂಬಿಕೆಯನ್ನು ಹೊಂದಿರುವ ಆಧ್ಯಾತ್ಮಿಕ ವ್ಯಕ್ತಿ ಮತ್ತು ನಮ್ಮ ಕುಟುಂಬವು ಚಿತ್ರದಲ್ಲಿ ತೋರಿಸಿರುವ 'ದೈವ' ಅಂಶದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಕಾಂತಾರ ಚಿತ್ರದಲ್ಲಿ ಯಾವುದೇ ಸಿನಿಮೀಯ ಪರಿಮಳವನ್ನು ಸೇರಿಸದೆ ವಾಸ್ತವಿಕವಾಗಿ ಆ ಅಂಶವನ್ನು ತೋರಿಸಿದ್ದೇನೆ ಮತ್ತು ಚಿತ್ರದಲ್ಲಿ ಅದನ್ನು ಸೂಕ್ಷ್ಮ ರೀತಿಯಲ್ಲಿ ಚಿತ್ರಿಸಲು ಹಿರಿಯರ ಸಲಹೆಯನ್ನು ಪಡೆದಿದ್ದೇನೆ' ಎಂದು ರಿಷಬ್ ಹೇಳಿದರು.

ವೇದಿಕೆಯಲ್ಲಿ ದೈವವನ್ನು ಅನುಕರಿಸುವುದು ಮತ್ತು ಇನ್‌ಸ್ಟಾಗ್ರಾಂ ರೀಲ್‌ಗಳಲ್ಲಿ ಅದರ ಪ್ರಾತಿನಿಧ್ಯದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ರಿಷಭ್, 'ನನಗೆ ಅದರ ಬಗ್ಗೆ ಆ ರೀತಿ ಅನಿಸುತ್ತದೆ, ಏಕೆಂದರೆ 'ದೈವ' ಅಂಶವು ಬಹಳ ಸೂಕ್ಷ್ಮ ಅಂಶವಾಗಿದೆ. ಅದು ನಮಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಿದ ಅಂಶವಾಗಿದೆ. ಆದ್ದರಿಂದ, ನಾನು ಎಲ್ಲಿಗೆ ಹೋದರೂ, ವೇದಿಕೆಯಲ್ಲಿ ಅದನ್ನು ಅಪಹಾಸ್ಯ ಮಾಡಬೇಡಿ ಎಂದು ನಾನು ಜನರನ್ನು ವಿನಂತಿಸುತ್ತೇನೆ' ಎಂದು ನಟ ಹೇಳಿದರು.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು ಮತ್ತು ಕಾಂತಾರ ಅತ್ಯುತ್ತಮ ಜನಪ್ರಿಯ ಚಿತ್ರ ಎಂದು ಆಯ್ಕೆಯಾಯಿತು. ಕಾಂತಾರ ಚಿತ್ರದ ಒಂದು ಪ್ರಮುಖ ಅಂಶವೆಂದರೆ ಚಿತ್ರದ ಕೊನೆಯಲ್ಲಿ ರಿಷಬ್ ಅವರ ದೈವ ರೂಪಾಂತರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಹೌದು 2025 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ವಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 1 ವರ್ಷದ ಬಳಿಕ ಚೀನಾ ಒಪ್ಪಿಗೆ!

ಕಾಂಗ್ರೆಸ್‌ನ್ನು ಕಿತ್ತು ಹಾಕದೇ ಯುವಕರಿಗೆ ಉದ್ಯೋಗವಿಲ್ಲ! ನಿಖಿಲ್ ಕುಮಾರಸ್ವಾಮಿ ಕಿಡಿ

SCROLL FOR NEXT