ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ನಟಿ ದೀಪ್ಶಿಖಾ ಸಾಮಾಜಿಕ ಮಾಧ್ಯಮದಲ್ಲಿ, ಚಿತ್ರಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆಗಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದು, ಅವರು ಈ ಹಿಂದೆ ಸುದೀಪ್ ಅವರ ಮ್ಯಾಕ್ಸ್ (2024) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.ದಲ್ಲಿ ನಿರ್ದೇಶಿಸಿದ್ದರು.
ತಮ್ಮ ಎಕ್ಸ್ ಖಾತೆಯಲ್ಲಿ ನಟಿ, 'ನೀವೆಲ್ಲರೂ ಥಿಯೇಟರ್‌ಗಳಲ್ಲಿ ಮಾರ್ಕ್ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ಪದಗಳನ್ನು ಮೀರಿ ನನ್ನ ಹೃದಯ ತುಂಬಿದೆ. ಚಿತ್ರವನ್ನು ವೀಕ್ಷಿಸಿದ ಮತ್ತು ಪ್ರೀತಿಯನ್ನು ತೋರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಲವ್ ಮಾರ್ಕ್, ಎಂಜಾಯ್ ಮಾರ್ಕ್' ಎಂದು ಬರೆದಿದ್ದಾರೆ.
ಮುಂದುವರಿದು, 'ಅದ್ಭುತ ಕನ್ನಡ ಜನರಿಗೆ ತುಂಬಾ ಧನ್ಯವಾದಗಳು, ನೀವು ನಂಬಲಾಗದಷ್ಟು ಪ್ರೀತಿ ನೀಡಿದ್ದೀರಿ ಮತ್ತು ಸ್ವಾಗತಿಸುತ್ತಿದ್ದೀರಿ. ನಿಮ್ಮ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು, ಕರ್ನಾಟಕ. ಪ್ರೀತಿ ಮತ್ತು ಕೃತಜ್ಞತೆಯಿಂದ, ಯಾವಾಗಲೂ!' ಎಂದಿದ್ದಾರೆ.
ಮಾರ್ಕ್ ಚಿತ್ರದಲ್ಲಿ ನವೀನ್ ಚಂದ್ರ, ಗುರು ಸೋಮಸುಂದರಂ, ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್, ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಈ ಹಿಂದೆ ವಿಜಯ್ ಆಂಟೋನಿ ಜೊತೆಗೆ ಮಾರ್ಗನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದೀಪ್ಶಿಖಾ ಅವರ ಎರಡನೇ ಚಿತ್ರ ಇದಾಗಿದೆ.