ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ನಿನ್ನೆ ಡಬಲ್ ಎಲಿಮಿನೇಷನ್ ಆಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಹಾಗೂ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಎಲಿಮಿನೇಟ್ ಆಗಿದ್ದಾರೆ.
ಈ ನಡುವೆ ಎಲಿಮಿನೇಷನ್ ಬೆನ್ನಲ್ಲೇ ಬಿಗ್ ಬಾಸ್ ಸ್ಪರ್ಧಿ ಮಾಳು, ಷೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಷೋನಲ್ಲಿರುವವರಾರೂ ಪ್ರಶಸ್ತಿಗೆ ಅರ್ಹರೇ ಅಲ್ಲ ಎಂದು ಹೇಳಿರುವ ಮಾಳು ತಾನು ಯಾರನ್ನೂ ವಿನ್ನರ್ ಎಂದು ಒಪ್ಪಿಕೊಳ್ಳಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
ಅತ್ತ ಷೋ ಯಿಂದ ಎಲಿಮಿಮೇಟ್ ಆದ ಬೆನ್ನಲ್ಲೇ ಇಂದು ಬೆಳಗ್ಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಾಳು ನಿಪನಾಳ, 'ಎರಡು ವಾರ ಮಾತ್ರ ಇರಬಹುದು ಎಂದು ನಾನು ಹೋಗಿದ್ದೆ. ಆದರೆ ಜನರ ಆಶೀರ್ವಾದದಿಂದ ಇಲ್ಲಿಯವರೆಗೂ ಬಂದೆ. ಇಷ್ಟು ದಿನ ಜನರು ವೋಟ್ ಹಾಕಿ ಉಳಿಸಿದ್ದಾರೆ. ನಾನು ಫಿನಾಲೆವರೆಗೆ ಇದ್ದು ಕಪ್ ಗೆಲ್ಲಬೇಕಿತ್ತು. ನಾನು ಹೊರ ಬಂದಿದ್ದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ ಎಂದಿದ್ದಾರೆ.
ಇಷ್ಟು ದಿನ ಜನ ಉಳಿಸಿದ್ದಾರೆ ಎಂದರೆ ನಾನು ಫೈನಲ್ ಗೂ ಹೋಗಬಹುದಿತ್ತು. ನಾನೇ ಕಪ್ ಗೆಲ್ಲುತ್ತಿದ್ದೆ ಎಂದು ಹೇಳುತ್ತಿಲ್ಲ. ಆದರೆ ಕನಿಷ್ಟ ಫೈನಲ್ ವರೆಗೂ ನಾನಿರುತ್ತಿದ್ದೆ ಎಂಬ ವಿಶ್ವಾಸ ಇದೆ. 13 ವಾರಗಳಿಂದ ಉಳಿಸಿದ ಜನ ಇನ್ನೇನು ಶೋ ವಿನ್ ಆಗುವಾಗ ಉಳಿಸಿಕೊಳ್ಳುವುದಿಲ್ಲವೇ ಎಂದು ಮಾಳು ಪ್ರಶ್ನಿಸಿದ್ದಾರೆ.
ನನ್ನ ಮನೆಯವರು ಮಾತ್ರವಲ್ಲ ನನ್ನ ಉತ್ತರ ಕರ್ನಾಟಕದ ಮಂದಿ ನನಾಗಿ ಪೂಜೆ ಹರಕೆ ಹೊತ್ತಿದ್ದಾರೆ. ನನಗೇನು ಕಡಿಮೆ ಇದೆ.. ನಾನ್ಯಾಕೆ ಹೊರಗೆ ಬಂದೆ ಎಂದು ನನಗೆ ಈಗಲೂ ತಿಳಿಯುತ್ತಿಲ್ಲ ಎಂದು ಮಾಳು ಹೇಳಿದ್ದಾರೆ.
ಅಂತೆಯೇ ಮನೆಯ ಬಗ್ಗೆ ಮಾತನಾಡಿದ ಮಾಳು, ಅಲ್ಲಿ ಮನೆಯಲ್ಲಿ ಎಲ್ಲರೂ ಒಂದೇ ತರ ಇಲ್ಲ. ಮಾಳು ಮಾತನಾಡಲಿಲ್ಲ ಎಂದು ಹೇಳುತ್ತಾರೆ.. ಮಾತನಾಡಿದ ಸರಿಯಾಗಿ ಮಾತನಾಡುತ್ತಿಲ್ಲ ಎನ್ನುತ್ತಾರೆ. ಮಾಳು ಕಾಮಿಡಿ ಮಾಡಲ್ಲ ಅಂತಾರೆ.. ಅಲ್ಲಿ ಪ್ರತಿಯೊಂದು ವಿಚಾರಕ್ಕೆ ತಗಾದೆ ತೆಗೆಯುತ್ತಾರೆ. ಗಿಲ್ಲಿ ಕಾಮಿಡಿ ಮಾಡ್ತಾನೆ..
ಎಂಟರ್ಟೈನ್ ಮೆಂಟ್ ಕೊಡ್ತಾನೆ ಒಕೆ. ಅದನ್ನು ಹೊರತು ಪಡಿಸಿದರೆ ಆತ ಏನೂ ಮಾಡುವುದಿಲ್ಲ. ಟಾಸ್ಕ್ ಆಗಲಿ ಮನೆ ಕೆಲಸವಾಗಲಿ ಆತ ಏನೂ ಮಾಡುವುದಿಲ್ಲ.. ಫಿಸಿಕಲ್ ಟಾಸ್ಕ್ ನಲ್ಲಂತೂ ನಾನು ಗಿಲ್ಲಿಯನ್ನು ನೋಡಿಯೇ ಇಲ್ಲ. ಗಿಲ್ಲಿ ಅಷ್ಟೇ ಅಲ್ಲ..
ನನಗೆ ಇನ್ನೂ ಅರ್ಥವಾಗದ ವಿಷಯ ಇದೇ ಆಗಿದೆ. ನನ್ನನ್ನು ಅಥವಾ ಸೂರಜ್ ಇಬ್ಬರಲ್ಲಿ ಒಬ್ಬರನ್ನಾದರೂ ಉಳಿಸಿಕೊಂಡು ಸ್ಪಂದನಾ ಅವರನ್ನು ಹೊರಕ್ಕೆ ಹಾಕಬೇಕಿತ್ತು. ಆದರೆ ಇದು ನನಗೆ ವಿಚಿತ್ರ ಎನ್ನಿಸುತ್ತಿದೆ. ಅಲ್ಲಿರುವ ಯಾರೇ ವಿನ್ ಆದರೂ ಅದು ನನಗೆ ಒಪ್ಪಿಗೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.