ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP, ಇವರೇನಾ ಮುಂದಿನ ಪ್ರಧಾನ ಮಂತ್ರಿ ?

ಬಾಂಗ್ಲಾದೇಶದ ಟಿವಿ ಚಾನೆಲ್ ಗಳ ಪ್ರಸಾರ ಪ್ರಕಾರ, ಬಿಎನ್‌ಪಿ 150 ಸ್ಥಾನಗಳ ಗಡಿ ದಾಟಿ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಸಾಧಿಸಿದೆ ಎಂದು ಅಂದಾಜು ಮಾಡಿವೆ.
Bangladesh Nationalist Party Chairperson Tarique Rahman waves as he comes out after casting his vote during the national parliamentary elections in Dhaka, Bangladesh
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷ ತಾರಿಕ್ ರಹ್ಮಾನ್ ಅವರು ಗುರುವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಹೊರಬರುತ್ತಿರುವ ವೇಳೆ ಕೈ ಬೀಸಿ ಜನರನ್ನು ಅಭಿನಂದಿಸಿದರು.
Updated on

ಢಾಕಾ: 2024ರ ವಿದ್ಯಾರ್ಥಿ ಪ್ರತಿಭಟನೆ, ಶೇಖ್ ಹಸೀನಾ ಪ್ರಧಾನ ಮಂತ್ರಿ ಸ್ಥಾನದಿಂದ ನಿರ್ಗಮಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ ತಾರಿಕ್ ರಹ್ಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಭರ್ಜರಿ ಜಯದತ್ತ ಸಾಗುತ್ತಿದೆ.

ಪಕ್ಷದ ಹಿರಿಯ ನಾಯಕ ರುಹುಲ್ ಕಬೀರ್ ರಿಜ್ವಿ ಪ್ರಕಟಿಸಿದ ಹೇಳಿಕೆಯಲ್ಲಿ, ಸಂಖ್ಯೆಗಳ ವಿವರ ನೀಡದೆ “ಭಾರಿ ಜಯ” ಸಾಧಿಸಿದ್ದೇವೆ ಎಂದು ಹೇಳಿ, ಬೆಂಬಲಿಗರು ಬೀದಿಗಳಲ್ಲಿ ಸಂಭ್ರಮ ಆಚರಿಸುವ ಬದಲು ಇಂದು ಶುಕ್ರವಾರ ಪ್ರಾರ್ಥನೆಗಳ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

“ಬಿಎನ್‌ಪಿಯ ಭಾರೀ ಜಯದ ಹೊರತಾಗಿಯೂ ಯಾವುದೇ ವಿಜಯ ಮೆರವಣಿಗೆ ಇರುವುದಿಲ್ಲ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ದೇಶದಾದ್ಯಂತ ಜುಮ್ಮಾ (ಶುಕ್ರವಾರ ನಮಾಜು) ನಂತರ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ.

ಬಾಂಗ್ಲಾದೇಶದ ಟಿವಿ ಚಾನೆಲ್ ಗಳ ಪ್ರಸಾರ ಪ್ರಕಾರ, ಬಿಎನ್‌ಪಿ 150 ಸ್ಥಾನಗಳ ಗಡಿ ದಾಟಿ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಸಾಧಿಸಿದೆ ಎಂದು ಅಂದಾಜು ಮಾಡಿವೆ.

ಜಮುನಾ ಮತ್ತು ಸೋಮೊಯ್ ಟಿವಿ ವಾಹಿನಿಗಳ ವರದಿಗಳ ಪ್ರಕಾರ, ಬಿಎನ್‌ಪಿ ಸುಮಾರು 197 ಸ್ಥಾನಗಳನ್ನು ಗೆದ್ದಿದೆ.

Bangladesh Nationalist Party Chairperson Tarique Rahman waves as he comes out after casting his vote during the national parliamentary elections in Dhaka, Bangladesh
ಬಾಂಗ್ಲಾದೇಶ ಐತಿಹಾಸಿಕ ಸಂಸತ್ ಚುನಾವಣೆ: ಮತದಾನ ಪ್ರಗತಿಯಲ್ಲಿ; 50 ಲಕ್ಷ ಯುವ ಮತದಾರರು; Video

ಜಮಾತ್-ಎ-ಇಸ್ಲಾಮಿ ನೇತೃತ್ವದ ಇಸ್ಲಾಮಿಕ್ ಮೈತ್ರಿ 63 ಸ್ಥಾನಗಳನ್ನು ಗೆದ್ದಿದೆ ಎಂದು ಅಂದಾಜಿಸಲಾಗಿದೆ. ಇದು ಅವರ ಹಿಂದಿನ ಫಲಿತಾಂಶಗಳಿಗಿಂತ ದೊಡ್ಡ ಏರಿಕೆಯಾಗಿದ್ದರೂ, ಅವರು ಪ್ರಚಾರದಲ್ಲಿ ನಿರೀಕ್ಷಿಸಿದ್ದ ಸಂಪೂರ್ಣ ಜಯಕ್ಕಿಂತ ಬಹಳ ಕಡಿಮೆಯಾಗಿದೆ.

ಅಂತಿಮ ಅಧಿಕೃತ ಫಲಿತಾಂಶಗಳಲ್ಲ; 300 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 299 ಕ್ಷೇತ್ರಗಳ ಮತ ಎಣಿಕೆ ಇನ್ನೂ ಮುಂದುವರಿದಿದೆ. ಮಹಿಳೆಯರಿಗೆ ಮೀಸಲಾದ 50 ಸ್ಥಾನಗಳನ್ನು ಪಕ್ಷಗಳ ಪಟ್ಟಿಗಳ ಆಧಾರದ ಮೇಲೆ ನಂತರ ಹಂಚಿಕೆ ಮಾಡಲಾಗುತ್ತದೆ.

ಮುಂದಿನ ಪ್ರಧಾನ ಮಂತ್ರಿ ಯಾರು?

60 ವರ್ಷದ ತಾರಿಕ್ ರಹ್ಮಾನ್ ಈಗ ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಹೊಂದಿದ್ದು, ಚುನಾವಣೆಗೆ ಮುನ್ನವೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಮತದಾನದ ಎರಡು ದಿನಗಳ ಮುನ್ನ AFP ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತದ ಅವಧಿಯಲ್ಲಿ ದುರ್ಬಲಗೊಂಡಿದ್ದ ತಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಶಾಂತಿಯುತ ಮತದಾನ

ಬಿಎನ್‌ಪಿ ಚುನಾವಣಾ ಸಮಿತಿ ವಕ್ತಾರ ಮಹ್ದಿ ಅಮಿನ್, ಪಕ್ಷವು ಗೆಲ್ಲುವ ಹಾದಿಯಲ್ಲಿದೆ. ಜನರ ಬಲವಾದ ಜೊತೆಗೆ, ರಹ್ಮಾನ್ ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಇಡೀ ರಾತ್ರಿ ಬಿಎನ್‌ಪಿ ಕಚೇರಿಗಳ ಮುಂದೆ ಕಾಯುತ್ತಿದ್ದರು.

ತಾರಿಕ್ ರಹ್ಮಾನ್ ಅವರ ನೇತೃತ್ವದಲ್ಲಿ ದೇಶ ನಿರ್ಮಾಣ ಕಾರ್ಯದಲ್ಲಿ ನಾವು ತೊಡಗಿಸಿಕೊಳ್ಳುತ್ತೇವೆ ಎಂದು 45 ವರ್ಷದ ಮೊಹಮ್ಮದ್ ಫಝ್ಲುರ್ ರಹ್ಮಾನ್ AFP ಸುದ್ದಿಸಂಸ್ಥೆಗೆ ಹೇಳಿದರು.

ಕಳೆದ 17 ವರ್ಷಗಳಲ್ಲಿ ನಾವು ಬಹಳ ಸಂಕಷ್ಟ ಅನುಭವಿಸಿದ್ದೇವೆ, ಅನೇಕ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಎದುರಿಸಿದ್ದೇವೆ, ನಾನು ಹೊಂದಿದ್ದ ಕಾರ್ಖಾನೆಯನ್ನೂ ಕಳೆದುಕೊಂಡಿದ್ದೇನೆ ಎಂದರು.

ಚುನಾವಣಾ ಆಯೋಗವು ಇನ್ನೂ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿಲ್ಲ. ಇನ್ನು ಕೆಲವೇ ಹೊತ್ತಿನಲ್ಲಿ ಪ್ರಕಟವಾಗಲಿದೆ.

85 ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಯೂನುಸ್, 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅಧಿಕಾರದಿಂದ ಹೊರಗೊಳ್ಳುವ ಬಳಿಕದಿಂದ ಬಾಂಗ್ಲಾದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರ ಆಡಳಿತವು ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧಿಸಿತ್ತು.

ಮತ ಚಲಾಯಿಸಿದ ಬಳಿಕ ಯೂನುಸ್, ದೇಶವು “ಭಯಾನಕ ಕನಸನ್ನು ಅಂತ್ಯಗೊಳಿಸಿ ಹೊಸ ಕನಸನ್ನು ಆರಂಭಿಸಿದೆ” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com