ಸಿನಿಮಾ ಸುದ್ದಿ

ಹಿನ್ನೋಟ 2025: ಪ್ರಥಮಾರ್ಧದಲ್ಲಿ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಸೊರಗಿದ ಚಿತ್ರರಂಗ, ವರ್ಷಾಂತ್ಯದಲ್ಲಿ ಅಬ್ಬರ!

ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಒಟ್ಟಾರೇ, ಡಿಸೆಂಬರ್ ವರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ 226 ಸಿಗುತ್ತವೆ.

2025 ಮುಗಿಯುತ್ತಾ ಬಂದಿದೆ. ತಿರುಗಿ ನೋಡಿದರೆ ಚಿತ್ರರಂಗದಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿವೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ಅಂತಹ ಹೇಳಿಕೊಳ್ಳುವಂತಹ ಸಂಭ್ರಮವಿಲ್ಲ. ಭರಪೂರ ಚಿತ್ರಗಳು ತೆರೆ ಕಂಡರೂ ಯಶಸ್ಸು ಸಾಧಿಸಿದ್ದು ಮಾತ್ರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ. 2025ರ ಪ್ರಥಮಾರ್ಧ ಪ್ರಮುಖ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ, ಕಳೆದು ಹೋಗಿತ್ತು.

ವರ್ಷದ ಆರಂಭದಲ್ಲಿ ಶರಣ್ ಅಭಿನಯದ ಛೂ ಮಂತರ್, ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಅವರ ಸಂಜು ವೆಡ್ಸ್ ಗೀತಾ-2, ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದ ಕಣ್ಣ ಮಚ್ಚುು ಕಾಡೆ ಗೂಡೆ, ಪ್ರಜ್ವಲ್ ದೇವರಾಜ್ ಅಭಿನಯದ ಗಣ, ದೀಪಿಕಾ ದಾಸ್ ಅಭಿನಯದ ಪರು ಪಾರ್ವತಿ ಚಿತ್ರಗಳು ಬಿಡುಗಡೆಯಾದವು. ಆದರೆ, ಸಂಜು ವೆಡ್ಸ್ ಗೀತಾ-2 ಕೂಡಾ ಪ್ರೇಕ್ಷಕರ ಮನ ಸೆಳೆಯುವಲ್ಲಿ ವಿಫಲವಾಯಿತು.

ಇನ್ನೂ ಫೆಬ್ರವರಿಯಲ್ಲಿ ಯೋಗೇಶ್, ಸೋನು ಗೌಡ ಅಭಿನಯದ ಸಿದ್ಲಿಂಗು-2, ರೂಪೇಶ್ ಶೆಟ್ಟಿ, ಜಾನ್ವಿಯ ಅಧಿಪಾತ್ರ, ರಾಘವ ಅನ್ ಲಾಕ್ ಮಾಡಿ ಮತ್ತಿತರ ಚಿತ್ರಗಳು ಬಿಡುಗಡೆಯಾದವು.ಇದೇ ಕಾರಣಕ್ಕೆ ಮೊದಲ ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಆದರೆ, ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಒಟ್ಟಾರೇ, ಡಿಸೆಂಬರ್ ವರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ 226 ಸಿಗುತ್ತವೆ.

ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳು: ನಿರೀಕ್ಷೆಯಂತೆ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಾಪ್ಟರ್ -1 ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದರೆ ಓಟಿಟಿ ಸೇರಿದಂತೆ ಇತರ ಮೂಲಗಳಿಂದ 200 ಕೋಟಿ ರೂ. ಗೂ ಅಧಿಕ ವ್ಯವಹಾರ ಮಾಡಿದೆ. ಇದರಿಂದಾಗಿ ಈ ಚಿತ್ರ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಅದನ್ನು ಹೊರತುಪಡಿಸಿದರೆ ಈ ವರ್ಷ ಅನಿರೀಕ್ಷಿತವಾಗಿ ಸದ್ದು ಮಾಡಿದ ಚಿತ್ರವೆಂದರೆ, 'ಸು ಫ್ರಮ್ ಸೋ' ರಾಜ್ ಬಿ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಿದ ಈ ಸಿನಿಮಾ ಕೇವಲ 3 ರಿಂದ 4 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿತ್ತು. ಆದರೆ ಈ ಚಿತ್ರ ಹಾಗೆಯೇ ಬಾಯಿ ಮಾತಿನ ಮೂಲಕ ಪ್ರಚಾರಗೊಂಡು 125 ಕೋಟಿ ರೂ. ಕಲೆಕ್ಷನ್ ನೊಂದಿಗೆ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಜೊತೆಗೆ ಟಿವಿ, ಓಟಿಟಿ ಸೇರಿದಂತೆ 10 ಕೋಟಿ ರೂ. ಕಲೆಕ್ಷನ್ ಮಾಡಿತು.

ಸ್ಟಾರ್ ನಟರ ಸಿನಿಮಾಗಳಿಲ್ಲದೆ ಸೊರಗಿದ ಚಿತ್ರರಂಗ: ಈ ವರ್ಷ ರಾಕಿಂಗ್ ಸ್ಟಾರ್, ಯಶ್, ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀ ಮುರುಳಿ ಸಿನಿಮಾಗಳು ಬರಲಿಲ್ಲ. ಇನ್ನೂ ಛೂ ಮಂತರ್, ಅಜ್ಞಾತವಾಸಿ, ಯುದ್ಧ ಕಾಂಡ, ಎಕ್ಕ, ಏಳುಮಲೆ, ಮಹಾದೇವ ಮತ್ತಿತರ ಸಿನಮಾಗಳು ನಿರ್ಮಾಪಕರು ಹಾಕಿದ ಹಣ ವಾಪಸ್ ತಂದುಕೊಟ್ಟಿವೆ. ಆದರೆ ಬಹುನಿರೀಕ್ಷಿತ ಚಿತ್ರಗಳಾದ ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ-2, ವಿನಯ್ ರಾಜ್ ಕುಮಾರ್ ಅಭಿಯನದ ಎಕ್ಕ ಮತ್ತಿತರ ಚಿತ್ರಗಳು ಹೆಸರು ಮಾಡಿದವಷ್ಟೇ ಹೊರತು ಯಶಸ್ಸು ಸಾಧಿಸಲಾಗಲಿಲ್ಲ.

ವಿಮರ್ಶಕರಿಂದ ಮೆಚ್ಚುಗೆ ಪಡೆದ ಸಿನಿಮಾಗಳು: ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ ಎಕ್ಸ್ ವೈ, ಫುಲ್ ಮೀಲ್ಸ್, ಕೈಟ್ ಬ್ರದರ್ಸ್, ವಿಷ್ಣು ಪ್ರಿಯಾ ಮತ್ತಿತರ ಅನೇಕ ಸಿನಿಮಾಗಳು ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು, OTT ವೇದಿಕೆಯಲ್ಲಿ ನೇರವಾಗಿ ಏಳು ಚಿತ್ರಗಳು ಬಿಡುಗಡೆಯಾಗಿವೆ.

ವರ್ಷಾಂತ್ಯದಲ್ಲಿ ಡಬಲ್ ಧಮಕಾ: ವರ್ಷಾಂತ್ಯದಲ್ಲಿ ಡಿಸೆಂಬರ್ 11 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಡೆವಿಲ್' ಜನರನ್ನು ಮತ್ತೆ ಥಿಯೇಟರ್ ನತ್ತ ಕರೆದುಕೊಂಡು ಬಂದಿತು. ದರ್ಶನ್ ಜೈಲಿನಲ್ಲಿದ್ದರೂ ಅಭಿಮಾನಿಗಳ ಜಾತ್ರೆಗೆ ಬರ ಇರಲಿಲ್ಲ. sacnilk ವರದಿ ಪ್ರಕಾರ ಈ ಚಿತ್ರ ಒಟ್ಟಾರೆ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಇನ್ನೂ ಕೊನೆಯ ವಾರದಲ್ಲಿ ಡಾ. ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ 45 ಹಾಗೂ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಚಿತ್ರಗಳು ಬಿಡುಗಡೆಯಾಗಿದ್ದು, ಕನ್ನಡ ಸಿನಿ ರಸಿಕರ ಮನರಂಜಿಸಿದವು. ಅರ್ಜುನ್ ಜನ್ಯಾ ನಿರ್ದೇಶಕನಾಗಿ ಚೊಚ್ಚಲ ಚಿತ್ರದಲ್ಲಿ ಗೆದ್ದಿದ್ದು, ಈ ಚಿತ್ರ ಈವರೆಗೂ ಸುಮಾರು 15 ಕೋಟಿ ಕಲೆಕ್ಷನ್ ಮಾಡಿದ್ದರೆ, ಸುದೀಪ್ ಅಭಿನಯದ ಮಾರ್ಕ್ 34 ಕೋಟಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ.

ಗಮನ ಸೆಳೆದ ನಟಿಯರು: ರುಕ್ಮೀಣಿ ವಸಂತ್ (ಕಾಂತಾರ-1) ಪ್ರಿಯಾಂಕ್ ಆಚಾರ್ (ಏಳು ಮಳೆ) ಖುಷಿ ರವಿ (ಫುಲ್ ಮೀಲ್ಸ್ ) ಸಂಜನಾ ದಾಸ್ ಮಲೈಕಾ (ವಿದ್ಯಾಪತಿ) ಆರ್ಚನಾ ಜೋಯಿಸ್ (ಯುದ್ಧ ಕಾಂಡ) ಸಂಪದಾ (ಎಕ್ಕ) GST ಯಲ್ಲಿ ಚಮೇಲಿಯಾಗಿ ಕುಣಿದಿದ್ದ ಸಂಹಿತಾ ವಿನ್ಯಾ ಮತ್ತಿತರ ನಟಿಯರು ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಅಗಲಿದ ನಟ, ನಿರ್ದೇಶಕರು: 2025ರಲ್ಲಿ ಕನ್ನಡ ಚಿತ್ರರಂಗ ಅನೇಕ ಕಲಾವಿದರನ್ನು ಕಳೆದುಕೊಂಡಿತು. ಹಿರಿಯ ಕಲಾವಿದರಾದ ಬಿ. ಸರೋಜಾ ದೇವಿ, ಬ್ಯಾಂಕ್ ಜನಾರ್ದನ್, ಹರೀಶ್ ರೈ, ಉಮೇಶ್, ಯಶವಂತ ಸರದೇಶಪಾಂಡೆ, ದಿನೇಶ್ ಮಂಗಳೂರು, ನಿರ್ದೇಶಕ ಡೇವಿಡ್, ಸರಿಗಮ ವಿಜೆ, ರಾಕೇಶ್ ಪೂಜಾರಿ, ಸಂತೋಷ್ ಬಾಲರಾಜ್, ಶ್ರೀಧರ್ ಸೇರಿದಂತೆ ಇನ್ನೂ ಅನೇಕರು ಈಗ ನೆನಪು ಮಾತ್ರ.

2026 ರಲ್ಲಿ ಸ್ಟಾರ್ ಚಿತ್ರಗಳ ಅಬ್ಬರ:

ವರ್ಷಾರಂಭದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಲ್ಯಾಂಡ್ ಲಾರ್ಡ್ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಕಾಟೇರ ಸಿನಿಮಾಗೆ ಕಥೆ ಬರೆದಿದ್ದ ಜಡೇಜ ಕೆ. ಹಂಪಿ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಜನವರಿ 23ಕ್ಕೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಟಾಕ್ಸಿಕ್ 2026ರ ಮಾರ್ಚ್ 19ಕ್ಕೆ ತೆರೆ ಬರುವ ಸಾಧ್ಯತೆಯಿದೆ. ಇದರೊಂದಿಗೆ ಅವರು 2022ರ ನಂತರ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧ್ರುವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಕೆ.ಡ಼ಿ. ಸಿನಿಮಾದ ಮೇಲೆ ಬಹು ನಿರೀಕ್ಷೆ ಹುಟ್ಟಿಸಿದೆ. ವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರವಿಚಂದ್ರನ್, ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಕೂಡಾ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮದು 4ನೇ ಅತಿದೊಡ್ಡ ಆರ್ಥಿಕತೆ ಎಂದು ಭಾರತ ಹೇಳಿಕೊಳ್ಳುತ್ತಿದೆ; ಆದರೆ ತಲಾವಾರು ಜಿಡಿಪಿ 12 ಪಟ್ಟು ಕಡಿಮೆ!

ಬಾಂಗ್ಲಾದೇಶದಲ್ಲಿ ಮತ್ತೊಬ್ಬ 'ಹಿಂದೂ' ಗುಂಡೇಟಿಗೆ ಬಲಿ: ಎರಡು ವಾರಗಳಲ್ಲಿ ಮೂರನೇ ಕೊಲೆ!

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್​​ ರಿಲೀಫ್​: ED ಪ್ರಕರಣದಲ್ಲಿ ಜಾಮೀನು ಮಂಜೂರು

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

ಬೆಂಗಳೂರು: ಐದನೇ ಮಹಡಿಯಿಂದ ಜಿಗಿದು ಬಯೋಕಾನ್ ಉದ್ಯೋಗಿ ಆತ್ಮಹತ್ಯೆ!

SCROLL FOR NEXT