ಸಿನಿಮಾ ಸುದ್ದಿ

ಶ್ರೀಮುರಳಿ ನಟನೆಯ 'ಪರಾಕ್' ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ಚರಣ್ ರಾಜ್ ಸಂಗೀತ

ಪರಾಕ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಹಾಲೇಶ್ ಕೋಗುಂಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬ್ರಾಂಡ್ ಕಾರ್ಪೊರೇಟ್ ಪ್ರೊಡಕ್ಷನ್ ಲಿಮಿಟೆಡ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ.

ಟಗರು, ಸಲಗ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳಿಗೆ ಹಿಟ್ ಹಾಡುಗಳನ್ನು ಕೊಟ್ಟ ಚರಣ್ ರಾಜ್ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮುಂಬರುವ ಚಿತ್ರ 'ಪರಾಕ್‌' ಚಿತ್ರಕ್ಕೆ ಸಂಗೀತ ಸಂಯೋಜಿಸಲು ಸಿದ್ಧರಾಗಿದ್ದಾರೆ.

ಪರಾಕ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಹಾಲೇಶ್ ಕೋಗುಂಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬ್ರಾಂಡ್ ಕಾರ್ಪೊರೇಟ್ ಪ್ರೊಡಕ್ಷನ್ ಲಿಮಿಟೆಡ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಬಘೀರ ಚಿತ್ರದ ನಂತರ ಶ್ರೀಮುರಳಿ ಪರಾಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಚರಣ್ ರಾಜ್ ಅವರ ವಿಶಿಷ್ಟ ಶೈಲಿನ ಸಂಗೀತವು ಚಿತ್ರಕ್ಕೆ ಹೊಸ ಮೆರುಗು ನೀಡುವ ನಿರೀಕ್ಷೆಯಿದೆ.

ಈಮಧ್ಯೆ, ಬಘೀರ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ನಟ ಶ್ರೀಮುರಳಿ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಪರಾಕ್ ಜೊತೆಗೆ, ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಇನ್ನೂ ಹೆಸರಿಸದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅದರ 47ನೇ ಚಿತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಜೆಡಿಎಸ್ ಪಾದಯಾತ್ರೆ: ಮಾಜಿ ಪ್ರಧಾನಿ HD ದೇವೇಗೌಡ ಭಾಗಿ

Maharashtra: ಶಾಲಾ ಹಾಸ್ಟೆಲ್‌ನಲ್ಲಿ ಭೀಕರ ದುರಂತ: ಮಲಗಿದ್ದ 6 ಬಾಲಕಿಯರಿಗೆ ಹಾವು ಕಡಿತ, ಮೂವರ ಸಾವು!