ಸಿನಿಮಾ ಸುದ್ದಿ

ಪ್ರೇಮಿಗಳ ದಿನದಂದು ಪ್ಯಾರಸೈಕಲಾಜಿಕಲ್ ಥ್ರಿಲ್ಲರ್ 'ನಿಮಿತ್ತ ಮಾತ್ರ' ಚಿತ್ರ ತೆರೆಗೆ

15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಒಂದು ಮನಕಲಕುವ ಘಟನೆಯ ಮೇಲೆ ಬೆಳಕು ಚೆಲ್ಲುವ 'ನಿಮಿತ್ತ ಮಾತ್ರ' ಎಂಬ ಚಿತ್ರವನ್ನು ರೋಷನ್ ಡಿ'ಸೋಜಾ ಬರೆದು, ನಿರ್ದೇಶಿಸಿ, ನಿರ್ಮಿಸಿದ್ದಾರೆ.

ರೋಷನ್ ಡಿ'ಸೋಜಾ ಬರೆದು, ನಿರ್ದೇಶಿಸಿ, ನಿರ್ಮಿಸಿರುವ ಪ್ಯಾರಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ.

15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಒಂದು ಮನಕಲಕುವ ಘಟನೆಯ ಮೇಲೆ ಬೆಳಕು ಚೆಲ್ಲುವ 'ನಿಮಿತ್ತ ಮಾತ್ರ' ಎಂಬ ಚಿತ್ರವನ್ನು ರೋಷನ್ ಡಿ'ಸೋಜಾ ಬರೆದು, ನಿರ್ದೇಶಿಸಿ, ನಿರ್ಮಿಸಿದ್ದಾರೆ.

ಚಿತ್ರತಂಡ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಫೆಬ್ರವರಿ 14 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

“ನಿಮಿತ್ತ ಮಾತ್ರ” ಸಿನಿಮಾ ಪ್ಯಾರಾಸೈಕಾಲಜಿಕಲ್ ಥ್ರಿಲ್ಲರ್ ಚಿತ್ರ ಆಗಿದ್ದು, ಬೆಂಗಳೂರು ಮತ್ತು ಮಂಗಳೂರು ಹಿನ್ನೆಲೆಯೊಂದಿಗೆ ಮೂಡಿ ಬಂದಿದೆ. 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಅತೀವ ಭಯಾನಕ ಘಟನೆಯೆ ಈ ಕಥೆಯ ಆಧಾರ.

ತನ್ನ ತಂದೆಯಿಂದ ಬಿಟ್ಟುಹೋಗಿದ್ದ ಸಂಧರ್ಭವನ್ನು ಅರಿಯಲು investigative ಪತ್ರಕರ್ತನೊಬ್ಬ ಈ ಕೇಸ್ ಪರಿಹರಿಸಲು ಹೊರಟಿದ್ದಾನೆ. ಅವನು ಸತ್ಯವನ್ನು ಪತ್ತೆಹಚ್ಚುವನೋ? ಅಪರಾಧಿಯನ್ನು ನ್ಯಾಯದ ಕಟ್ಟೆಗೆ ಸೆಳೆವನೋ? ಈ ಪ್ರಶ್ನೆಗಳು ಚಿತ್ರದಲ್ಲಿ ಮುಂದುವರೆಯುತ್ತ ಹೋಗುತ್ತದೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರೋಷನ್ ಡಿಸೋಜಾ, ಟ್ರೇಲರ್ ಮೂಲಕ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುವಂತೆ ಆಹ್ವಾನ ನೀಡಲಾಗಿದೆ. ತಿಂಗಳುಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು ಸಂತಸ ತಂದಿದೆ. ನಿಮಿತ್ತ ಮಾತ್ರ ಒಂದು ಪೂರ್ಣ ಪ್ರಮಾಣದ ಥ್ರಿಲ್ಲರ್ ಚಿತ್ರವಾಗಿದೆ. ಪ್ಯಾರಸೈಕಾಲಜಿಯ ಬಗ್ಗೆ ಪರಿಚಯವಿಲ್ಲದವರಿಗೆ ಈ ಚಿತ್ರವು ಸಂಪೂರ್ಣ ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ನಾಯಕನಾಗಿ ನಟಿಸಿರುವ ನಟ ಪೂರ್ಣಚಂದ್ರ ಮೈಸೂರು ಅವರು ಮಾತನಾಡಿ, ಸಿನಿಮಾ, ನಿರ್ದೇಶಕರ ಮಾಧ್ಯಮ. ನಾವು ನಿರ್ದೇಶಕರ ಕ್ಯಾನ್ವಾಸ್‌ನಲ್ಲಿ ಚಿತ್ರಗಳಂತೆ. ನಿಮಿತ್ತ ಮಾತ್ರಾ ಒಂದು ಪೂರ್ಣ ಪ್ರಮಾಣ ಕಮರ್ಷಿಯಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ಅನೇಕ ತಿರುವುಗಳಿವೆ, ಪ್ರೇಕ್ಷಕರನ್ನು ಆರಂಭದಿಂದ ಅಂತ್ಯದವರೆಗೂ ಸೆಳೆಯುತ್ತಿರುತ್ತದೆ ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಗೀತಾ ರಾಜೀವ್ ಅವರು ಮಾತನಾಡಿ, ನಿಮಿತ್ತ ಮಾತ್ರಾದಲ್ಲಿ ಎಲ್ಲಾ ಮಹಿಳೆಯರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಾರೆ. ನಾನು ಮೊದಲು ಫೋನ್ ನಲ್ಲಿ ಕಥೆಯನ್ನು ಕೇಳಿದಾಗ, ಕಥೆಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಆಯ್ದ ಪ್ರೇಕ್ಷಕರಿಗೆ ಚಿತ್ರವನ್ನು ತೋರಿಸಿದಾಗ ಚಿತ್ರ ಕಥೆ ಕೆಲ ದಿನಗಳ ಕಾಲ ಅವರನ್ನು ಕಾಡಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು ಎಂದರು.

ಈ ನಡುವೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಅರವಿಂದ್ ಕುಪ್ಲಿಕರ್ ಅವರನ್ನು ನಿರ್ದೇಶಕ ರೋಷನ್ ಡಿ'ಸೋಜಾ ಅವರು ಕೊಂಡಾಡಿದ್ದಾರೆ.

ಪಾತ್ರಕ್ಕೆ ಅರವಿಂದ್ ಅವರು ಜೀವ ತುಂಬಿದ್ದಾರೆ. ಪಾತ್ರವನ್ನು ಅವರು ಅರ್ಥೈಸಿದ ರೀತಿಯನ್ನು ಯಾವ ರೀತಿಯಲ್ಲಿ ಹೊಗಳಬೇಕು ತಿಳಿಯದು. ಈ ಪಾತ್ರದಲ್ಲಿ ಅವರನ್ನು ಪರದೆ ಮೇಲೆ ನೋಡಲು ಕಾತುರನಾಗಿದ್ದೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT