ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಮುಂಬೈ ಹೀರೋಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಹಾಗೂ ಮುಂಬೈ ಹೀರೋಸ್ ತಂಡದ ನಡುವೆ ರೋಚಕ ಪಂದ್ಯ ನಡೆಯಿತು. ಕರ್ನಾಟಕ ಬುಲ್ಡೋಜರ್ ಪರ ಡಾರ್ಲಿಂಗ್ ಕೃಷ್ಣ ಅಬ್ಬರದ ಶತಕ ಬಾರಿಸಿದ್ದು ಕರ್ನಾಟಕ ಬುಲ್ಡೋಜರ್ಸ್ ತಂಡ ಮುಂಬೈ ಹೀರೋಸ್ ಗೆ 199 ರನ್ ಗಳ ಗುರಿ ನೀಡಿತು. ಈ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಹೀರೋಸ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿದೆ.
ಮೊದಲ 10 ಓವರ್ ಗಳಲ್ಲೇ ಕರ್ನಾಟಕ ಬುಲ್ಡೋಜರ್ಸ್ 171 ರನ್ ಕಲೆಹಾಕಿತ್ತು. 36 ಎಸೆತಗಳಲ್ಲಿ 11 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 111 ರನ್ ಗಳಿಸಿದರೇ ರಾಜೀವ್ ಹನು 24 ಎಸೆತಗಳಲ್ಲಿ 6 ಬೌಂಡರಿ ಸಹಿತ 37 ರನ್ ಗಳಿಸಿದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಮುಂಬೈ ಹೀರೋಸ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 100 ರನ್ ಗಳಿಸುವ ಮೂಲಕ 71 ರನ್‌ಗಳ ಹಿನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕ ಬುಲ್ದೋಜರ್ಸ್ ತಂಡ 127 ರನ್ ಗಳಿಸಿದೆ. ಈ ಮೂಲಕ ಒಟ್ಟಾರೆ 198ರನ್ ಗಳ ಮುನ್ನಡೆಯನ್ನು ಪಡೆದಿದೆ. ಮುಂಬೈ ಹೀರೋಸ್ ಮುಂದೆ 199 ರನ್‌ಗಳ ಸವಾಲು ನೀಡಿತ್ತು.