ಭಾರತೀಯ ಪುರುಷರಿಗೆ ಮದುವೆಯಾಗಲು 'ವರ್ಜಿನ್ ಹುಡುಗಿಯರು' ಸಿಗುವುದಿಲ್ಲ ಎಂದು ಹೇಳಿದ ಟ್ವಿಟರ್ ಬಳಕೆದಾರರೊಬ್ಬರನ್ನು ಗಾಯಕಿ ಚಿನ್ಮಯಿ ಶ್ರೀಪಾದ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಜಿನ್ ಎನ್ನುವುದು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆಯೇ? ಪುರುಷರಿಗೂ ಇದು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜನವರಿ 1 ರಂದು, @venom1s ಎಂಬ ಹೆಸರಿನ ಎಕ್ಸ್ ಬಳಕೆದಾರರೊಬ್ಬರು, 'Blinkit CEO ನಿನ್ನೆ ರಾತ್ರಿ 1.2 ಲಕ್ಷ ಕಾಂಡೋಮ್‌ಗಳನ್ನು ಡೆಲಿವರಿ ಮಾಡಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದು ಕೇವಲ ಒಂದು ರಾತ್ರಿ ಮತ್ತು ಕೇವಲ Blinkit ನಲ್ಲಿ ಮಾತ್ರ ಇರುವ ಲೆಕ್ಕ. ಇತರ ಇ-ಕಾಮರ್ಸ್ ಸೈಟ್‌ಗಳು ಮತ್ತು ಮಾರುಕಟ್ಟೆಯ ಮಾರಾಟವು 10 ಮಿಲಿಯನ್‌ಗಳಷ್ಟು ಹೆಚ್ಚಾಗಿರುತ್ತದೆ. ಈ ಪೀಳಿಗೆಯಲ್ಲಿ ಮದುವೆಯಾಗಲು ವರ್ಜಿನ್ ಹುಡುಗಿ ಸಿಕ್ಕರೆ ಅದು ಅದೃಷ್ಟ' ಎಂದು ಬರೆದುಕೊಂಡಿದ್ದರು.
ಈಗ ಡಿಲೀಟ್ ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಚಿನ್ಮಯಿ, 'ಹಾಗಾದರೆ ಪುರುಷರು ಮಹಿಳೆಯರೊಂದಿಗೆ ವಿವಾಹಪೂರ್ವ ಸಂಭೋಗವನ್ನು ಹೊಂದಿರಬಾರದು'. ಯಾರಾದರೂ ವಿವಾಹಪೂರ್ವ ಲೈಂಗಿಕತೆಯ ವಿರುದ್ಧ ಕಠಿಣ ದೃಷ್ಟಿಕೋನಗಳನ್ನು ಹೊಂದಿದ್ದರೆ, ಅವರು ಆ ಮಾನದಂಡಗಳನ್ನು ಸಾರ್ವತ್ರಿಕವಾಗಿ ಅನ್ವಯಿಸಬೇಕು ಎಂದಿದ್ದಾರೆ.
ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿನ್ಮಯಿ ಅವರ ಅಭಿಪ್ರಾಯಕ್ಕೆ 'ವಿದೂಷಕ' ಎಂದು ಕರೆದು, ಮಹಿಳೆಯರೂ ಸಹ ಮಾಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗಾಯಕಿ, 'ಮಹಿಳೆಯರು 'VIRRRRRGIN' ಗೀಳು ಹೊಂದಿರುವವರಲ್ಲ. ಹೇಗಾದರೂ ಸರಿ ಪುರುಷರು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ ಎಂದು ಭಾವಿಸುತ್ತಾರೆ ಮತ್ತು ನೀವೆಲ್ಲರೂ ಸುರಕ್ಷಿತ ಅಥವಾ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದೀರಾ ಎಂದು ಕೇಳಲು ಸಹ ಮಹಿಳೆಯರು ಧೈರ್ಯ ಮಾಡುವುದಿಲ್ಲ' ಎಂದಿದ್ದಾರೆ.
ಗಾಯಕಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬೆಂಬಲ ವ್ಯಕ್ತವಾಗಿದೆ. ಅವರಲ್ಲಿ ಹಲವರು ಮೂಲ ಟ್ವೀಟ್ ಅನ್ನು ಟೀಕಿಸಿದ್ದಾರೆ. ಈ ಹಿಂದೆ ಆನ್‌ಲೈನ್‌ನಲ್ಲಿ ತಮ್ಮ ವಿರುದ್ಧ ಉಂಟಾದ ಟೀಕೆಗಳಿಂದಾಗಿ ತನ್ನ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡುವುದನ್ನು ನಿರ್ಬಂಧಿಸಿದ್ದಾರೆ.