ನಟಿ ಹನ್ಸಿಕಾ ಮೋಟ್ವಾನಿ ಅವರ ಅತ್ತಿಗೆ ಮತ್ತು ಟಿವಿ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರು 'ಮಾತಾ ಕಿ ಚೌಕಿ' ನಂತಹ ಶೋಗಳಲ್ಲಿ ಕಾಣಿಸಿಕೊಂಡು ಖ್ಯಾತರಾಗಿದ್ದರು. ಆದರೆ ಇದೀಗ ಗಂಡನ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮುಸ್ಕಾನ್ ತಮ್ಮ ಪತಿ ಪ್ರಶಾಂತ್ ಮೋಟ್ವಾನಿ, ಅತ್ತೆ ಮೋನಾ ಮೋಟ್ವಾನಿ ಮತ್ತು ನಾದಿನಿ ಹನ್ಸಿಕಾ ಮೋಟ್ವಾನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಮುಸ್ಕಾನ್ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿದ್ದು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಸ್ಥರು ವಂಚನೆ ಮಾಡಿದ್ದಾರೆ ಎಂದು ನಟಿ ಮುಸ್ಕಾನ್ ಆರೋಪಿಸಿದ್ದಾರೆ. ಮುಸ್ಕಾನ್ ಕಳೆದ ವರ್ಷ ಡಿಸೆಂಬರ್ 18ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 498-ಎ, 323, 504, 506 ಮತ್ತು 34 ರ ಅಡಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನ್ನ ದಾಂಪತ್ಯ ಜೀವನದಲ್ಲಿ ಅತ್ತೆ ಮತ್ತು ಸೋದರ ಮಾವ ಅಡ್ಡಿಪಡಿಸುತ್ತಾರೆ ಎಂದು ದೂರಿನಲ್ಲಿ ನಟಿ ಆರೋಪಿಸಿದ್ದಾರೆ. ಇದರಿಂದಾಗಿ ತನ್ನ ಮತ್ತು ಪತಿ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಹೇಳಿದರು.
ಮುಸ್ಕಾನ್ ಅವರು 2022ರಲ್ಲಿ ಹನ್ಸಿಕಾ ಮೋಟ್ವಾನಿಯ ಸಹೋದರ ಪ್ರಶಾಂತ್ ಅವರನ್ನು ವಿವಾಹವಾಗಿದ್ದರು. ಪ್ರಸ್ತುತ ಇಬ್ಬರೂ 2 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸದ್ಯ ಈ ಬಗ್ಗೆ ನಟಿಯ ಪತಿಯಾಗಲಿ, ಹನ್ಸಿಕಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಸ್ಕಾನ್ ನ್ಯಾನ್ಸಿ ಜೇಮ್ಸ್ ತಮ್ಮ ವೃತ್ತಿಜೀವನವನ್ನು 'ಥೋಡಿ ಖುಷಿ ಥೋಡ ಘಮ್' ಮೂಲಕ ಪ್ರಾರಂಭಿಸಿದರು. ಆದಾಗ್ಯೂ, ಅವರು ಟಿವಿ ಶೋ 'ಮಾತಾ ಕಿ ಚೌಕಿ' ನಿಂದ ಜನಪ್ರಿಯತೆಯನ್ನು ಗಳಿಸಿದರು.