ಹೈ-ಸ್ಪೀಡ್ ರೇಸಿಂಗ್ ಅಭ್ಯಾಸದ ಸಮಯದಲ್ಲಿ ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಯಿತು. ನಟ ಅಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ.
ಮುಂಬರುವ 24H ದುಬೈ 2025 ರೇಸಿಂಗ್ ಅಭ್ಯಾಸದ ಸಮಯದಲ್ಲಿ ಈ ಘಟನೆ ನಡೆದಿದೆ. ಅಪಘಾತ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಜಿತ್ ಅವರ ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರನ್ನು ರಕ್ಷಿಸಲು ಕೆಲವರು ಧಾವಿಸಿದ್ದರು. ಯಾವುದೇ ಅಪಾಯವಾಗದೇ ನಟ ಕಾರಿನಿಂದ ಹೊರಬಂದಿದ್ದಾರೆ.
ನಟ ಅಜಿತ್ ದುಬೈ ರೇಸ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಲು ತೆರಳಿದ್ದರು. ಈ ವೇಳೆ ಅಜಿತ್ ಅವರ ಪೋರ್ಷೆ ರೇಸ್ ಕಾರಿನ ಅಪಘಾತ ಆಗಿದೆ. ರೇಸ್ ಟ್ರ್ಯಾಕ್‌ನಲ್ಲಿ ಕಾರು ಕ್ರ್ಯಾಶ್ ಆಗುವ ಭಯಾನಕ ದೃಶ್ಯ ಸೆರೆಯಾಗಿದೆ.
ತಮಿಳು ನಟ ಅಜಿತ್‌ಗೆ ರೇಸ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್.. ರೇಸ್ ಕಾರಿನಲ್ಲಿ ಅಜಿತ್ ಕೂತ್ರೆ ಮೈ ಜುಮ್ಮೆನ್ನಿಸುವ ದೃಶ್ಯ ಕಣ್ ಮುಂದೆ ಬರುತ್ತೆ. ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲ ರೇಸ್ ಕಾರಿನಲ್ಲಿ ರಿಯಲ್ ಆಗಿ ಸಾಹಸ ಮಾಡೋ ಅದ್ಭುತ ಕಲಾವಿದ ಅಂದ್ರೆ ಅವರು ನಟ ಅಜಿತ್ ಮಾತ್ರ.
ಅಜಿತ್, ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮೆಕ್ಲಿಯೋಡ್ ಅವರನ್ನು ಒಳಗೊಂಡ ತಂಡವು ‘ಪೋರ್ಷೆ 992’ನಲ್ಲಿ ಸ್ಪರ್ಧಿಸುತ್ತಿದೆ. ಇದು ಈವೆಂಟ್‌ನಲ್ಲಿ ಅತ್ಯಂತ ಸ್ಪರ್ಧಾತ್ಮಕ ವಿಭಾಗಗಳಲ್ಲಿ ಒಂದಾಗಿದೆ.
24H ದುಬೈ 2025 ಕಾರು ರೇಸ್‌ನಲ್ಲಿ ಭಾಗಿಯಾಗಲು ನಟ ಅಜಿತ್ ತೆರಳಿದ್ದರು. ಅಭ್ಯಾಸ ನಡೆಸುವಾಗ ರೇಸ್ ಕಾರು ಕಂಟ್ರೋಲ್ ಕಳೆದುಕೊಂಡು ಪಕ್ಕದ ಗೋಡೆಯೊಂದಕ್ಕೆ ಗುದ್ದಿದೆ. ರೇಸ್ ಕಾರು ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದಿದ್ದು ಪೀಸ್, ಪೀಸ್ ಆಗಿದೆ. ಕಾರ್ ರೇಸ್ ಪ್ರ್ಯಾಕ್ಟೀಸ್ ವೇಳೆ ಅಜಿತ್ ಕಾರು ಅಪಘಾತಕ್ಕೀಡಾಗಿರೋದು ಆತಂಕಕ್ಕೆ ಕಾರಣವಾಗಿತ್ತು.
ಅಜಿತ್ ಅವರ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತವಾದ್ರು ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ. ಅಪಘಾತದ ಬಳಿಕ ಅಜಿತ್ ಅವರು ತಾವೇ ಕಾರಿನ ಹೊರಗೆ ಬಂದು ನಡೆದುಕೊಂಡು ಹೋಗಿದ್ದಾರೆ. ಅಜಿತ್ ಅವರ ರೇಸ್ ಕಾರು ಅಪಘಾತವಾದ ಕೆಲವೇ ಕ್ಷಣದಲ್ಲಿ ಅವರನ್ನ ರಕ್ಷಣೆ ಮಾಡಲಾಗಿದೆ. ಅಪಘಾತದಲ್ಲಿ ಅಜಿತ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎನ್ನಲಾಗಿದೆ.