ಅಪಾಯವಿದೆ ಎಚ್ಚರಿಕೆ ಸಿನಿಮಾ ಸ್ಟಿಲ್  
ಸಿನಿಮಾ ಸುದ್ದಿ

'ಅಪಾಯವಿದೆ ಎಚ್ಚರಿಕೆ' ಟೀಸರ್ ಅನಾವರಣ: ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

ಅಣ್ಣಯ್ಯ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ಅಮೃತಧಾರೆ ಖ್ಯಾತಿಯ ರಾಧಾ ಭಗವತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಅಪಾಯವಿದೆ ಎಚ್ಚರಿಕೆ' ಕನ್ನಡ ಚಿತ್ರರಂಗದ ವಿಭಿನ್ನ ಕಥೆಯ ಹಾರರ್ ಥ್ರಿಲ್ಲರ್. ಕೆಲ ಸಮಯದ ಹಿಂದಷ್ಟೇ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ತನ್ನ ವಿಶೇಷತೆಯಿಂದ ನಿರೀಕ್ಷೆ ಹುಟ್ಟಿಸಿತ್ತು. ನಂತರ "ಬ್ಯಾಚುಲರ್ ಬದುಕು" ಅನ್ನೋ ಸಾಂಗ್ ಬಿಡುಗಡೆಗೊಳಿಸಿ, ಎಲ್ಲಾ ಬ್ಯಾಚುಲರ್ಸ್ ಬದುಕಿನ ಬವಣೆಗಳ ನೈಜತೆಯನ್ನು ತೋರಿಸಿದ್ದ ಚಿತ್ರತಂಡ ಇದೀಗ ಟೀಸರ್ ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಸಿನಿಮಾವನ್ನು ಅಭಿಜಿತ್ ತೀರ್ಥಹಳ್ಳಿ ಬರೆದು, ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದ ಬಹುತೇಕ ಭಾಗವನ್ನು ಕತ್ತಲೆಯ ಕಾಡಲ್ಲೇ ಚಿತ್ರೀಕರಿಸುವ ಮೂಲಕ ವೀಕ್ಷಕರ ಗಮನ ಸೆಳೆಯುವಂತೆ ಮಾಡಿದ್ದಾರೆ. ಹೊಸ ತರಹದ ಚಿತ್ರಕಥೆಯುಳ್ಳ ಈ ಚಿತ್ರದ ಮೇಕಿಂಗ್, ಮ್ಯೂಸಿಕ್, ಲೊಕೇಶನ್ ಎಲ್ಲವೂ ಭರವಸೆ ಮೂಡಿಸಿ ಸದ್ದು ಮಾಡುತ್ತಿವೆ.

ಅಣ್ಣಯ್ಯ ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ಅಮೃತಧಾರೆ ಖ್ಯಾತಿಯ ರಾಧಾ ಭಗವತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ ಕೂಡಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಅಪಾಯವಿದೆ ಎಚ್ಚರಿಕೆ' ಚಿತ್ರ ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬರುತ್ತಿದೆ ಅನ್ನೋ ಸುಳಿವನ್ನು ಟೀಸರ್​ ಬಿಟ್ಟುಕೊಟ್ಟಿದೆ. ದೃಶ್ಯಗಳು, ಮ್ಯೂಸಿಕ್ ಕುತೂಹಲ ಮೂಡಿಸುವಂತಿವೆ. ಒಟ್ಟಾರೆ ಆಸನದ ತುದಿಯಲ್ಲಿ ಕುಳಿತು ನೋಡುವ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ಒದಗಿಸುವ ಭರವಸೆ ನೀಡಿದ್ದಾರೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಫೆಬ್ರವರಿ 7ಕ್ಕೆ "ಅಪಾಯವಿದೆ ಎಚ್ಚರಿಕೆ" ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ಅವರ ಬೆಂಬಲದೊಂದಿಗೆ, ಚಿತ್ರಕ್ಕೆ ಸುನಾದ ಗೌತಮ್ ಅವರ ಸಂಗೀತ ಮತ್ತು ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಒಬ್ಬ ರಾಜಿನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ; ಸಿಎಂ ಡಿಕೆ ಶಿವಕುಮಾರ್

Park Billiಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ: ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!