ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ 11ನೇ ಆವೃತ್ತಿ ಇನ್ನೇನೂ ಕೊನೆಯ ಹಂತಕ್ಕೆ ಬಂದಿದೆ. ಇನ್ನೂ ಮೂರು ವಾರಗಳು ಬಾಕಿ ಉಳಿದಿದ್ದು ಶೋ ಮತ್ತಷ್ಟು ಕಠಿಣವಾಗಲಿದೆ ಎಂದು ನಿರೂಪಕ ಕಿಚ್ಚ ಸುದೀಪ್ ಅವರು ಹೇಳಿದ್ದರು. ಅದರಂತೆ ಸ್ಪರ್ಧಿಗಳ ನಡುವೆ ಹೋರಾಟ ಜಾರಾಗಿದೆ. ಫಿನಾಲೆ ಟಿಕೆಟ್ ಗಾಗಿ ಕ್ಯಾಪ್ಟನ್ ರಜತ್ ಹೊರತು ಪಡೆಸಿ ಎಂಟೂ ಸ್ಪರ್ಧಿಗಳ ನಡುವೆ ಕಾದಾಟ ಜೋರಾಗಿದೆ.
ತ್ರಿವಿಕ್ರಮ್, ಭವ್ಯ ಧನರಾಜ್, ಚೈತ್ರಾ ಹಾಗೂ ಮೋಕ್ಷಿತಾ ಈ ವಾರ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಇದರ ಜೊತೆ ಒಬ್ಬರನ್ನು ಕ್ಯಾಪ್ಟನ್ ರಜತ್ ನೇರವಾಗಿ ನಾಮಿನೇಟ್ ಮಾಡಲಿದ್ದಾರೆ. ಫಿನಾಲೆ ಟಿಕೆಟ್ ಗಾಗಿ ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್ ಗಳನ್ನು ನೀಡಲಾಗುತ್ತಿದೆ. ಟಿಕೆಟ್ ಟು ಫಿನಾಲೆ ಓಟದಿಂದ ಒಬ್ಬರನ್ನು ಚರ್ಚಿಸಿ ಹೊರಗಿಡುವಂತೆ ಬಿಗ್ ಬಾಸ್ ಹೇಳಿದ್ದರು. ಇದಕ್ಕೆ ಹೆಚ್ಚು ಸ್ಪರ್ಧಿಗಳು ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದರು.
ಚೈತ್ರಾಗೆ 'ತಪ್ಪು ಸರಿಮಾಡಿಕೊಳ್ಳುವ ಗುಣ ಅವರಲ್ಲಿ ಇಲ್ಲ' ಎಂದು ಧನರಾಜ್ ಹೇಳಿದ್ದಾರೆ. ಇನ್ನು ಚೈತ್ರಾ ಯಾವಾಗಲೂ ವಾದಾ ಮಾಡುತ್ತಲೇ ಇರುತ್ತಾರೆ ಎಂದು ಮಂಜು ಹೇಳಿದ್ದರೆ ಚೈತ್ರಾ ಕಡೆಯಿಂದ ಪದೇ ಪದೇ ತಪ್ಪು ಆಗುತ್ತಿದೆ ಎಂದು ಗೌತಮಿ ಹೇಳುತ್ತಾರೆ. ಈ ಸಮಯದಲ್ಲಿ ಕಣ್ಣೀರು ಹಾಕಿದ ಚೈತ್ರಾ, ನಾನು ಕಳೆದ 100 ದಿನದಿಂದಲೂ ಈ ಮನೆಯಲ್ಲಿ ನಡೆದಿರುವುದು ಇದೇ. ನನ್ನನ್ನು ಆಡೋಕೆ ಮುಂದೆ ಬಿಡುತ್ತಿರಲ್ಲಿಲ್ಲ. ಟಾರ್ಗೆಟ್ ಮಾಡಿ ಆಟದಿಂದ ಹೊರಗೆ ಇಡುತ್ತಿದ್ದರು. ಆಡೋಕೆ ಈಗಿನ್ನೂ ಬರುತ್ತಿದ್ದೆ. ಅದಕ್ಕೂ ಅಡ್ಡಗಾಲು ಹಾಕಿದರು ಎಂದು ಚೈತ್ರಾ ಹೇಳಿದ್ದಾರೆ.