ತಮ್ಮ ಕಾಮಿಟಿ ಟೈಮಿಂಗ್‌ಗೆ ಹೆಸರಾದ ನಟ ಶರಣ್, ತಮ್ಮದೇ ಶೈಲಿಯ ಹಾಸ್ಯದಿಂದಾಗಿ ದಶಕಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಸ್ಯನಟನಾಗಿರಲಿ ಅಥವಾ ಪ್ರಮುಖ ಪಾತ್ರಗಳಲ್ಲಿರಲಿ, ಅವರು ಸತತವಾಗಿ ಪ್ರೇಕ್ಷಕರು ನಗುವಂತೆ ಮಾಡಿದ್ದಾರೆ ಮತ್ತು ಕಾಮಿಡಿ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಇದೀಗ ನಟ ಶರಣ್ ಅವರು ಪೂರ್ಣ ಪ್ರಮಾಣದ ಹಾರರ್ ಸಿನಿಮಾ ಛೂ ಮಂತರ್ ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ನವನೀತ್ ನಿರ್ದೇಶನದ ಈ ಚಿತ್ರವು ಈ ವಾರ ತೆರೆಗೆ ಬರಲು ಸಿದ್ಧವಾಗಿದೆ ಮತ್ತು ಶರಣ್ ಅವರ ಈ ಬದಲಾವಣೆಯು ಅನೇಕರಲ್ಲಿ ಕುತೂಹಲವನ್ನು ಕೆರಳಿಸಿದೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ, 'ನಾನು ಹಾಸ್ಯವನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಾಗದಿರಲು ಒಂದು ಕಾರಣವಿದೆ. ಆ ಪ್ರಪಂಚದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ ಮತ್ತು ಖುಷಿಪಡುತ್ತೇನೆ. ಕಾಮಿಡಿ ಪ್ರಪಂಚದಲ್ಲಿ, ಇದು ಮನರಂಜನೆ ನೀಡುತ್ತದೆ ಮತ್ತು ನಾನು ಆ ವರ್ಗಕ್ಕೆ ಸೇರಿದ್ದೇನೆ' ಎನ್ನುತ್ತಾರೆ ಅವರು.
ಆದರೆ, ಛೂ ಮಂತರ್ ಸಿನಿಮಾದಲ್ಲಿ ನಾನು ಅದೇ ರೀತಿಯಲ್ಲಿ ಮನರಂಜನೆಯನ್ನು ನೀಡದಿರಬಹುದು. ಆದರೂ, ಜನರು ಇಷ್ಟಪಡುವ ಶರಣ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಗುರು ಶಿಷ್ಯರು ಅಂತಹ ಚಿತ್ರಗಳು ತನಗೆ ಪ್ರಯೋಗ ಮಾಡಲು ಅವಕಾಶ ನೀಡಿವೆ. ಹೀಗಾಗಿ, ನಾನು ವೈವಿಧ್ಯಮಯ ಪಾತ್ರಗಳಲ್ಲಿಯೂ ನಟಿಸಲು ಇಷ್ಟಪಡುತ್ತೇನೆ. ಪ್ರೇಕ್ಷಕನಾಗಿ, ನಾನು ವಿಭಿನ್ನ ರೀತಿಯ ಸಿನಿಮಾಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ, ಹಾಗಾಗಿ ನಟನಾಗಿಯೂ ನಾನು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ. ಅದು ಆಸಕ್ತಿದಾಯಕವಾಗಿರುತ್ತದೆ' ಎಂದು ಹೇಳುತ್ತಾರೆ ಶರಣ್.
ಮೂರು ವಿಭಿನ್ನ ಕಥಾವಸ್ತುಗಳೊಂದಿಗೆ ನವನೀತ್ ಅವರು ನನ್ನನ್ನು ಸಂಪರ್ಕಿಸಿದರು. ಆದರೆ, ಛೂ ಮಂತರ್ ಸಿನಿಮಾದಲ್ಲಿನ ಸವಾಲೇ ನನ್ನನ್ನು ಸೆಳೆಯಿತು. ನಾನು ಏಕತಾನತೆ ಹೊಂದಲು ಬಯಸಲಿಲ್ಲ. ಹಾಸ್ಯವು ಯಾವುದೇ ಪ್ರಕಾರದೊಂದಿಗೆ ಬೆರೆಯಬಹುದು. ಅದು ಆ್ಯಕ್ಷನ್ ಅಥವಾ ಹಾರರ್ ಆಗಿರಬಹುದು. ಆದರೆ, ಅದರಲ್ಲಿ ಹೊಸ ಪರಿಕಲ್ಪನೆಗಳನ್ನು ಮುಂದಿಡುವುದು ಮುಖ್ಯವಾಗಿದೆ. ಅದು ನನ್ನನ್ನು ಪ್ರಚೋದಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಛೂ ಮಂತರ್‌ನಲ್ಲಿನ ತಮ್ಮ ಪಾತ್ರಕ್ಕಾಗಿ ನಿರ್ದೇಶಕರಿಗೆ ಕ್ರೆಡಿಟ್ ನೀಡುವ ಶರಣ್, ನವನೀತ್ ಅವರ ದೃಷ್ಟಿಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. 'ನಾನು ನವನೀತ್ ಜಗತ್ತಿಗೆ ಶರಣಾಗಿದ್ದೇನೆ' ಎನ್ನುತ್ತಾರೆ. ಈ ಹೊಸ ಅವತಾರದಲ್ಲಿ ಪ್ರೇಕ್ಷಕರು ತಮ್ಮನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸದಲ್ಲಿ ಶರಣ್ ಇದ್ದಾರೆ. ಹಾರರ್ ಪಾತ್ರದಲ್ಲಿ ಪ್ರೇಕ್ಷಕರು ತಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂದು ಕೇಳಿದಾಗ, 'ಅದು ನಟನ ಕೆಲಸ' ಎಂದು ಪ್ರತಿಕ್ರಿಯಿಸುತ್ತಾರೆ.
ಹಾರರ್ ಸಿನಿಮಾಗಳ ಅಭಿಮಾನಿಯಾಗಿರುವ ಶರಣ್, ತಾವು ಹಾರರ್ ಸಿನಿಮಾಗಳನ್ನು ನೋಡುವುದರಿಂದ ರಿಲ್ಯಾಕ್ಸ್ ಮಾಡಲು ನೆರವಾಗುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ. 'ಇದು ನನ್ನನ್ನು ಆಕರ್ಷಿಸುವ ಒಂದು ಪ್ರಕಾರವಾಗಿದೆ ಮತ್ತು ನವನೀತ್ ಅಂತಹ ಪಾತ್ರವನ್ನು ನಾನು ನಿಭಾಯಿಸಬಲ್ಲೆ ಎಂದು ನಂಬಿದಾಗ ನಾನು ರೋಮಾಂಚನಗೊಂಡೆ. ಇಂಡಸ್ಟ್ರಿಯಲ್ಲಿ ತುಂಬಾ ವರ್ಷಗಳ ನಂತರವೂ ಹಾರರ್ ಚಿತ್ರದ ಭಾಗವಾಗುತ್ತಿರುವುದು ಕನಸು ನನಸಾದಂತೆ ಭಾಸವಾಗುತ್ತಿದೆ' ಎಂದರು ಶರಣ್.