ಚಂದನ್ ಶೆಟ್ಟಿ online desk
ಸಿನಿಮಾ ಸುದ್ದಿ

Cotton Candy music album: ರಾಪರ್ Chandan Shetty ವಿರುದ್ಧ ಟ್ಯೂನ್ ಕದ್ದ ಆರೋಪ!

Cotton Candy music album ಗಾಗಿ ಮಾಡಿರುವ ಟ್ಯೂನ್ ಚಂದನ್ ಶೆಟ್ಟಿ ಅವರ ಸ್ವಂತದ್ದಲ್ಲ ಎಂದು Rock Star Yuvaraj ಆರೋಪ ಮಾಡಿದ್ದಾರೆ.

ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ವಿರುದ್ಧ ಟ್ಯೂನ್ ಕದ್ದಿರುವ ಆರೋಪ ಕೇಳಿಬಂದಿದೆ.

Cotton Candy music album ಗಾಗಿ ಮಾಡಿರುವ ಟ್ಯೂನ್ ಚಂದನ್ ಶೆಟ್ಟಿ ಅವರ ಸ್ವಂತದ್ದಲ್ಲ ಎಂದು Rock Star Yuvaraj ಆರೋಪ ಮಾಡಿದ್ದಾರೆ.

Candy music album ನಲ್ಲಿರುವ ಈ ಟ್ಯೂನ್ ನ್ನು ತಾವು 6 ವರ್ಷಗಳ ಹಿಂದೆಯೇ ವೈ ಬುಲ್ ಪಾರ್ಟಿ (Y Bull Party)' ಎಂಬ ಹಾಡಿನಲ್ಲಿ ಬಳಸಿದ್ದೇನೆ. ಕಾಟನ್ ಕ್ಯಾಂಡಿ ಟ್ಯೂನ್ ನನ್ನ ಪಾರ್ಟಿ ಸಾಂಗ್ ನ ನಕಲಿಯಂತೆಯೇ ಇದೆ ಎಂದು Yuvaraj ಆರೋಪಿಸಿದ್ದು ಚಂದನ್ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ಮ್ಯೂಸಿಕ್ ವಿಡಿಯೋ 'ಕಾಟನ್ ಕ್ಯಾಂಡಿ' ಸದ್ಯ ಟ್ರೆಂಡ್ ಸೃಷ್ಟಿಸಿದೆ. ಈ ಆಲ್ಬಮ್ ನಲ್ಲಿ ಚಂದನ್ ಶೆಟ್ಟಿಗೆ ಸುಷ್ಮಿತಾ ಗೋಪಿನಾಥ್ ಜೋಡಿಯಾಗಿದ್ದಾರೆ.

ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ ರಿಲೀಸ್ ಆಗಿದೆ. ಈ ಮ್ಯೂಸಿಕ್ ಆಲ್ಬಮ್ ನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶಿಸಿದ್ದಾರೆ ಎನ್ನುವುದು ಗಮನಾರ್ಹ. ಚಂದನ್ ಶೆಟ್ಟಿ 2011 ರಿಂದ ರ್‍ಯಾಪ್ ಹಾಡುಗಳ ಮೂಲಕ ಮೂಲಕ ಖ್ಯಾತಿ ಪಡೆದಿದ್ದಾರೆ.

ಚಂದನ್ ಶೆಟ್ಟಿ ಪ್ರತಿಕ್ರಿಯೆ

ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ, ನಾನು ಕಾಪಿ ಮಾಡಿಲ್ಲ, ಅಂತಹ ಪ್ರಮೇಯವೇ ಇಲ್ಲ. ಬೇರೆಯವರ ಟ್ಯೂನ್ ಕಾಪಿ ಮಾಡಬಾರದೆಂಬ ಜ್ಞಾನ ಇದೆ. ಅವರ ಹಾಡನ್ನೂ ನಾನು ನೋಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್