ವೀರ ಚಂದ್ರಹಾಸ ಚಿತ್ರದ ಪೋಸ್ಟರ್ - ಶಿವರಾಜ್‌ಕುಮಾರ್ ಜೊತೆಗೆ ರವಿ ಬಸ್ರೂರ್ 
ಸಿನಿಮಾ ಸುದ್ದಿ

ರವಿ ಬಸ್ರೂರ್ ನಿರ್ದೇಶನದ 'ವೀರ ಚಂದ್ರಹಾಸ'ದಲ್ಲಿ ನಾಡಪ್ರಭು ಪುಟ್ಟಸ್ವಾಮಿಯಾಗಿ ಶಿವರಾಜ್‌ಕುಮಾರ್; ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್

ಶಿವಣ್ಣ ಅವರು ಬೆಳ್ಳಿತೆರೆಯಲ್ಲಿ ಯಕ್ಷಗಾನದ ಅವತಾರದಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಮಹತ್ವಾಕಾಂಕ್ಷೆಯ ಐತಿಹಾಸಿಕ 'ವೀರ ಚಂದ್ರಹಾಸ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರೊಂದಿಗೆ ನಿರ್ದೇಶಕರ ಕುರ್ಚಿಗೆ ಮರಳಲು ಉತ್ಸುಕರಾಗಿದ್ದಾರೆ. ಕುಂತಲ ಸಾಮ್ರಾಜ್ಯದ ಚಂದ್ರಹಾಸನ ಕಥೆ ಕುರಿತು ಹೇಳುತ್ತದೆ. ಇದು ಮಹಾಭಾರತಕ್ಕೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ. ಸಾಂಪ್ರದಾಯಿಕ ಯಕ್ಷಗಾನದೊಂದಿಗೆ ಐತಿಹಾಸಿಕ ಅಂಶಗಳನ್ನು ಸಂಯೋಜಿಸಿ, ಪ್ರಾಚೀನ ಕಲೆಯನ್ನು ಆಧುನಿಕ ಚಿತ್ರ ನಿರ್ಮಾಣ ತಂತ್ರಗಳೊಂದಿಗೆ ವಿಲೀನಗೊಳಿಸಿ ನವೀನವಾಗಿ ಕಥೆ ಹೇಳಲು ಚಿತ್ರ ಮುಂದಾಗಿದೆ. ನಟ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಮಹತ್ವದ ವಿವರವನ್ನು ಬಹಿರಂಗಪಡಿಸಿದೆ. ಶಿವರಾಜಕುಮಾರ್ ಅವರು ಬೆಳ್ಳಿತೆರೆಯಲ್ಲಿ ಯಕ್ಷಗಾನದ ಅವತಾರದಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ನಾಡಪ್ರಭು ಶಿವ ಪುಟ್ಟಸ್ವಾಮಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಕುತೂಹಲಕಾರಿಯಾಗಿ, ನಟ ಶಿವರಾಜ್‌ಕುಮಾರ್ ಅವರ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ ಆಗಿದ್ದು, ಚಿತ್ರಕ್ಕೆ ವೈಯಕ್ತಿಕ ಸ್ಪರ್ಶವನ್ನು ಸೇರಿಸಿದ್ದಾರೆ.

ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ರವಿ ಬಸ್ರೂರು, ವೀರ ಚಂದ್ರಹಾಸ ಕನಸು ನನಸಾಗಿದೆ. ನಟ ಶಿವರಾಜಕುಮಾರ್‌ ಬಂದ ಮೇಲೆ ಉತ್ಸಾಹ ಮತ್ತಷ್ಟು ಹೆಚ್ಚಿತು. ಚಿತ್ರದಲ್ಲಿ ಶಿವಣ್ಣನ ಪಾತ್ರ ವಿಶೇಷವಾಗಿದೆ. 'ಯಕ್ಷಗಾನದ ವೇಷಭೂಷಣದಲ್ಲಿ ಅವರ ಲುಕ್ ಒಂದು ದೃಶ್ಯ ರಸದೌತಣವಾಗಿದೆ. ಅವರು ಕೆಲವು ದಿನಗಳಿಗಿಂತ ಹೆಚ್ಚು ಕಾಲ, ಒಂದೆರಡು ತಿಂಗಳ ಹಿಂದೆ, ಚಿಕಿತ್ಸೆಯಲ್ಲಿದ್ದಾಗಲೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಪಾತ್ರಗಳು ಜೀವನದಲ್ಲಿ ಒಮ್ಮೆ ಬರುತ್ತವೆ ಎಂದು ಅವರು ನನಗೆ ಹೇಳಿದರು ಮತ್ತು ಸಂದರ್ಭ ಯಾವುದೇ ಇದ್ದರೂ ಸವಾಲನ್ನು ಅವರು ಸ್ವೀಕರಿಸುತ್ತಾರೆ' ಎಂದರು.

'ಸಾಮಾನ್ಯ ಯಕ್ಷಗಾನ ಕಲಾವಿದರು ಒಂದು ಗಂಟೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದರೆ, ನಂತರ ಅವರು ದಣಿದಿರುತ್ತಾರೆ. ಆದರೆ, ಶಿವಣ್ಣ ಅವರು ಬೆಳಿಗ್ಗೆಯಿಂದ ಸಂಜೆ 6:30 ರವರೆಗೆ ವಿರಾಮವಿಲ್ಲದೆ ಅದನ್ನು ಧರಿಸಿದ್ದರು. ಚಿತ್ರೀಕರಣ ಮುಗಿಯುವವರೆಗೂ ಮಧ್ಯಾಹ್ನದ ಊಟವನ್ನು ಸಹ ಮಾಡಲಿಲ್ಲ. ಅವರು ಅಪಾರ ಗೌರವವನ್ನು ತೋರಿಸಿದರು ಮತ್ತು ಪಾತ್ರಕ್ಕಾಗಿ ಅವರು ಬದ್ಧತೆಯನ್ನು ಹೊಂದಿದ್ದರು' ಎನ್ನುತ್ತಾರೆ ರವಿ.

ವೀರ ಚಂದ್ರಹಾಸ ಚಿತ್ರದಲ್ಲಿ ಶಿಥಿಲ್ ಶೆಟ್ಟಿ, ನಾಗಶ್ರೀ ಜಿಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಕಡಬಾಳ್, ರವೀಂದ್ರ ದೇವಾಡಿಗ, ನಾಗರಾಜ್ ಸರ್ವೆಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಸೇರಿದಂತೆ ಪ್ರತಿಭಾವಂತ ತಾರಾಗಣವಿದೆ. ಹೆಚ್ಚುವರಿಯಾಗಿ, ಸುಮಾರು 450 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ರವಿ ಬಸ್ರೂರ್ ಮೂವೀಸ್ ಸಹಯೋಗದಲ್ಲಿ ಓಂಕಾರ್ ಮೂವೀಸ್ ನಿರ್ಮಿಸಿರುವ ಈ ಚಿತ್ರವನ್ನು ಸಹ ನಿರ್ಮಾಪಕರಾದ ಗೀತಾ ರವಿ ಬಸ್ರೂರ್, ವಿಜಿ ಗ್ರೂಪ್‌ನ ದಿನಕರ್, ಅನುಪ್ ಗೌಡ ಮತ್ತು ಅನಿಲ್ ಯುಎಸ್‌ಎ ಅವರೊಂದಿಗೆ ಎನ್‌ಎಸ್ ರಾಜ್‌ಕುಮಾರ್ ನಿರ್ಮಾಪಕರಾಗಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿದ್ದು, ರವಿ ಬಸ್ರೂರ್ ಈಗ ಚಿತ್ರದ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಇದು 2025ರ ದ್ವಿತೀಯಾರ್ಧದಲ್ಲಿ ಚಿತ್ರಮಂದಿರಗಳಲ್ಲಿ ಬರುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT